ನಾಳೆ (ಸೆ.6) ಕುಂಟ್ಯಾನ ಶ್ರೀಕೃಷ್ಣ ಯುವಕ ಮಂಡಲದಿಂದ ಮೊಸರು ಕುಡಿಕೆ ಉತ್ಸವ

0

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ ಕುಂಟ್ಯಾನ, ಸೇಡಿಯಾಪು – ಬನ್ನೂರು ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ 22 ನೇಯ ವರ್ಷದ ಮೊಸರು ಕುಡಿಕೆ ಉತ್ಸವ ಸೆ.6 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಗ್ಗೆ ಗಂಟೆ 9 ಕ್ಕೆ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದ್ದು, ಶ್ರೀ ಸದಾಶಿವ ದೇವಸ್ಥಾನ ಕುಂಟ್ಯಾನ ಇದರ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಚಂದ್ರಾಕ್ಷ ಪಟ್ಟೆ ಉದ್ಘಾಟಿಸಲಿದ್ದಾರೆ.


9.30 ರಿಂದ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬನ್ನೂರು ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀನಪ್ಪ ಕುಲಾಲ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ರಾಜಶೇಖರ್ ಜೈನ್ ನೀರ್ಪಾಜೆ, ನೆಲ್ಲಿಕಟ್ಟೆ ಈಶ ವಿದ್ಯಾಲಯದ ಆಡಳಿತ ನಿರ್ದೇಶಕ ಡಾ| ಗೋಪಾಲಕೃಷ್ಣ, ಕುಂಟ್ಯಾನ ಶ್ರೀ ಸದಾಶಿವ ದೇವಾಲಯದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಚಂದ್ರಾಕ್ಷ ಪಟ್ಟೆ ಮತ್ತು ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಈಶ್ವರ್ ಗೌಡ ಭಾಗವಹಿಸಲಿದ್ದಾರೆ. ಮೊಸರು ಕುಡಿಕೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆ ಕಾರ್ಯವು ನಡೆಯಲಿದೆ ಎಂದು ಶ್ರೀಕೃಷ್ಣ ಯುವಕ ಮಂಡಲ ಅಧ್ಯಕ್ಷ ಈಶ್ವರ ಗೌಡ ಕುಂಟ್ಯಾನ , ಕಾರ್ಯದರ್ಶಿ ಎಂ.ಕೆ ಸುಬ್ರಹ್ಮಣಿ ಅಡೆಂಚಿಲಡ್ಕ, ಗೌರವ ಸಲಹೆಗಾರ ಸುಬ್ರಹ್ಮಣ್ಯ ದಾಸ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here