






ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹರಿಶ್ಚಂದ್ರ ನೀಟಡ್ಕ ಚಾರ್ವಾಕ ಮತ್ತು ತೇಜಸ್ವಿನಿಯವರ ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆ.30ರಂದು ಪುತ್ತೂರು ಕೇಪುಳು ತಾರಿಗುಡ್ಡೆ ಮನೆಯಲ್ಲಿ ಆಚರಿಸಿಕೊಂಡರು.



ಆ ಪ್ರಯುಕ್ತ ಪುತ್ತೂರು ಬೀರಮನೆ ಬೌದ್ಧಿಕ ದಿವ್ಯಾಂಗರ ವಸತಿಯುತ ಕೇಂದ್ರದ ಪ್ರಜ್ಞಾ ಆಶ್ರಮದಲ್ಲಿ ಅಲ್ಲಿನ ಮಕ್ಕಳೊಂದಿಗೆ ಬೋಜನ ವ್ಯವಸ್ಥೆಯ ಜೊತೆಗೆ ಸಹಾಯಧನ, ತೆಂಗಿನಕಾಯಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಯಿತು. ಹಿರಿಯ ಧಾರ್ಮಿಕ ಮುಖಂಡ ಸಂಜೀವ ನಾಯಕ್ ಕಲ್ಲೇಗ, ಮನೆಯವರು, ಚಿಕ್ಕಪುತ್ತೂರು ಮತಾವು ಕುಟುಂಬಸ್ಥರು ಆಗಮಿಸಿ ಶುಭಹಾರೈಸಿದರು













