ವಿಟ್ಲದಲ್ಲಿ ಸಂಗೀತೋತ್ಸವ, ಸ್ವರ ಸಿಂಚನ ಪುರಸ್ಕಾರ ಪ್ರದಾನ

0

ವಿಟ್ಲ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ, ವಿಟ್ಲ ಮತ್ತು ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳಿಂದ ‘ಸಂಗೀತೋತ್ಸವ 2026’ ಕಾರ್ಯಕ್ರಮ ಸೆ.6ರಂದು ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಿಂಹಾಸನದ ವಿಶೇಷ ಪೂಜಾ ಮಂಟಪದಲ್ಲಿ ಜರುಗಿತು.

ಪಶುವೈದ್ಯ ಡಾ.ಈಶ್ವರ ಭಟ್ ಕಾಶಿಮಠ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಡಾ.ಈಶ್ವರ ಭಟ್ ದಂಪತಿಗೆ ಸ್ವರ ಸಿಂಚನ ಪುರಸ್ಕಾರ-2026 ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ವಿಟ್ಲ ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ, ವಯಲಿನ್ ವಾದಕ ಪ್ರಭಾಕರ ಕುಂಜಾರು, ಮೃದಂಗ ವಾದಕ ಡಾ.ಬಿ.ಆರ್.ನಾರಾಯಣ ಪ್ರಕಾಶ್, ರವಿಶಂಕರ್ ಸಿ ಮೂಡಂಬೈಲು, ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು, ಸಂಗೀತ ಶಿಕ್ಷಕಿ ಸವಿತಾ ಕೋಡಂದೂರು ಉಪಸ್ಥಿತರಿದ್ದರು.

ಡಾ.ಈಶ್ವರ ಭಟ್ ಅವರು ಪುರಸ್ಕಾರ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೇಶವ ಆರ್.ವಿ ಅವರು ಮಾತನಾಡಿದರು. ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಕೋಡಂದೂರು ಪ್ರಾರ್ಥಿಸಿದರು. ಅಮೂಲ್ಯ ಅರವಿಂದ ಪ್ರಸಾದ್ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸ್ವರ ಸಿಂಚನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ವಯಲಿನ್ ವಾದಕರಾದ ಪ್ರಭಾಕರ ಕುಂಜಾರು ಹಾಗೂ ಶ್ರೀಪ್ರಿಯಾ ಕೆ.ಪರಕ್ಕಜೆ, ಮೃದಂಗದಲ್ಲಿ ಬಿ.ನಾರಾಯಣ ಪ್ರಕಾಶ್ ಅವರ ಸಹಕಾರದೊಂದಿಗೆ ನಡೆಯಿತು.

LEAVE A REPLY

Please enter your comment!
Please enter your name here