







ಈಶ್ವರಮಂಗಲ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜಾಗೃತ ಹಿಂದು ಜಾಗರಣ ಈಶ್ವರಮಂಗಲ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 11ನೇ ವರ್ಷದ ಈಶ್ವರಮಂಗಲ ಮೊಸರು ಕುಡಿಕೆ ಉತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಸೆ.5 ರಂದು ನಡೆಯಿತು.



ಬೆಳಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪರಿವಾರ ಸಮೇತ ಶ್ರೀ ಪಂಚಲಿಂಗೇಶ್ವರ ದೇವರಿಗೆ ಸರ್ವಸೇವೆ ನೆರವೇರಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.




ಮಧ್ಯಾಹ್ನ ಶ್ರೀಕೃಷ್ಣ ವೇಷಧಾರಿ ಪುಟಾಣಿಗಳ ಬೃಹತ್ ಮೆರವಣಿಗೆ ಈಶ್ವರಮಂಗಲ ಪೇಟೆಯಲ್ಲಿ ನಡೆಯಿತು. ಬಳಿಕ ಅಟ್ಟಿ ಮಡಕೆ ಹೊಡೆಯುವ ಸ್ಪರ್ಧೆ ಹಾಗೂ ದೇವಸ್ಥಾನದ ವಠಾರದಲ್ಲಿ ಬೃಹತ್ ಕಬಾತ್ ಹೊಡೆಯುವ ಸ್ಪರ್ಧೆ ಗಮನ ಸೆಳೆಯಿತು.ಶ್ರೀರಾಮ ಲಹರಿ ನಾಟ್ಯಾಲಯ ಪಂಚೋಡಿ ಮತ್ತು ದೇಲಂಪಾಡಿ ಹಾಗೂ ವರ್ಣಂ ನೃತ್ಯ ತಂಡ ಈಶ್ವರಮಂಗಲ ಇವರಿಂದ ಶ್ರೀಕೃಷ್ಣ ನೃತ್ಯ ವೈಭವ ನಡೆಯಿತು. ಸಂಜೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಭಕ್ತಿಭಾವದಿಂದ ನೆರವೇರಿತು.










