






ಬೆಳ್ತಂಗಡಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ಬೆಳ್ತಂಗಡಿ ಮುಳಿಯ ಶೋರೂಂನಲ್ಲಿ ‘ಕೃಷ್ಣ ವೇಷ ಸ್ಪರ್ಧೆ’ ಆಯೋಜಿಸಲಾಗಿದೆ.


ಸೆ.12ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸ್ಪರ್ಧೆಯಲ್ಲಿ 0-3 ವರ್ಷದ ಮಕ್ಕಳಿಗೆ ‘ಮುದ್ದು ಕೃಷ್ಣ’, 4-7 ವರ್ಷದ ಮಕ್ಕಳಿಗೆ ‘ಬಾಲ ಕೃಷ್ಣ’ ಹಾಗೂ 8-12 ವರ್ಷದ ಮಕ್ಕಳಿಗೆ ‘ರಾಧಾ ಕೃಷ್ಣ’ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಶ್ರೀಕೃಷ್ಣನ ಕುರಿತ ಭಕ್ತಿಭಾವ ಬೆಳೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ.



ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು.ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗೆ 9902349916 / 8792530916 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.










