ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯನ್ನು ಅಮಾನತಿನಲ್ಲಿಟ್ಟು ಅವ್ಯವಹಾರವನ್ನು ತನಿಖೆ ಮಾಡಬೇಕು- ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ ಸುದ್ದಿಗೋಷ್ಟಿಯಲ್ಲಿ ಆಗ್ರಹ

0

ಪುತ್ತೂರು:ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷಾಂತರ ರೂ.ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿದೆ ಎಂದು ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆ ಆರೋಪಿಸಿದ್ದು, ವ್ಯವಸ್ಥಾಪನಾ ಸಮಿತಿಯನ್ನು ಅಮಾನತಿನಲ್ಲಿಟ್ಟು ಇಲಾಖೆ ಕೂಡಲೇ ಅವ್ಯವಹಾರವನ್ನು ತನಿಖೆ ಮಾಡಬೇಕು.ದೇವರ ಭೂಮಿಯ ಅವ್ಯವಹಾರಕ್ಕೆ ಜಿಲ್ಲಾಽಕಾರಿಯವರು ಇದ್ದು ಒಂದು ತನಿಖೆಯಾಗಬೇಕು.ಕಾರ್ಯನಿರ್ವಹಣಾಧಿಕಾರಿಯವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು.ಒಂದು ವಾರದೊಳಗೆ ಇದನ್ನು ಮಾಡದಿದ್ದಲ್ಲಿ ಸೆ.೨೧ರಂದು ಭಕ್ತರ ಬೃಹತ್ ಸಭೆಯನ್ನು ಜನಾಂದೋಲನದ ಮುಖಾಂತರ ಮಾಡಲಾಗುವುದು ಎಂದು ಎಚ್ಚರಿಸಿದೆ.


ಸೆ.೭ರಂದು ಪುತ್ತೂರು ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆಯ ಮುಖಂಡ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ,
ನಮ್ಮ ಪ್ರೆಸ್‌ಮೀಟ್ ಯಾರ ವಿರುದ್ಧವೂ ಅಲ್ಲ,ದ್ವೇಷ ಅಲ್ಲ.ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ವಿಚಾರಕ್ಕೂ ಅಧಿಕೃತ ದಾಖಲೆ ಪತ್ರ ಇದೆ. ಈ ನಡುವೆ ಹೈಕೋರ್ಟ್ ದೇವಾಲಯಗಳಲ್ಲಿ ಅಕ್ರಮ ತಡೆಗೆ ಮಾರ್ಗಸೂಚಿ ಮಾಡಿದ್ದಾರೆ. ಹೀಗಾಗಿ ಪುತ್ತೂರಿನ ಜನತೆ, ವಿಶ್ವಹಿಂದೂ ಪರಿಷತ್, ಬಜರಂಗದಳ, ಜಾಗರಣಾ ವೇದಿಕೆ, ಸಂಘಪರಿವಾರ, ರಾಜಕೀಯ ಪಕ್ಷಗಳು, ಪುತ್ತಿಲ ಪರಿವಾರ ಎಲ್ಲರೂ ಈ ಅವ್ಯವಹಾರದ ವಿರುದ್ಧ ಹೋರಾಟಕ್ಕೆ ನಮ್ಮ ಜೊತೆ ಕೈಜೋಡಿಸಬೇಕು. ವ್ಯವಸ್ಥಾಪನ ಸಮಿತಿಯನ್ನು ಅಮಾನತಿನಲ್ಲಿಟ್ಟು ಇಲಾಖೆ ಕೂಡಲೇ ಅವ್ಯವಹಾರವನ್ನು ತನಿಖೆ ಮಾಡಬೇಕು ಎಂದು ಹೇಳಿದರು.


ದೇವಸ್ಥಾನದಲ್ಲಿ ಕಳೆದ ಮೂರ್ನಾಲ್ಕು ವ್ಯವಸ್ಥಾಪನಾ ಸಮಿತಿಗಳ ಅವಽಯಲ್ಲಿ ಅನೇಕ ಬಾರಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲಾಗಿದೆ. ಪ್ರತೀ ಬಾರಿಯೂ ಒಂದೊಂದು ಬದಲಾವಣೆ ಸೂಚಿಸಲಾಗಿದೆ.ಹಿಂದೊಮ್ಮೆ ತಪ್ಪು ಎಂದು ತೋರಿಸಿದ್ದನ್ನು ನಂತರದ ಪ್ರಶ್ನೆಯಲ್ಲಿ ಸರಿ ಎಂದು ತೋರಿಸಲಾಗಿದೆ.ಪದೇ ಪದೇ ಹೀಗಾಗುತ್ತಿರುವ ಕಾರಣ ಭಕ್ತರಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ ಇದನ್ನೆಲ್ಲ ನಿವಾರಿಸಲು ಈ ಹಿಂದೆ ಅಷ್ಟ ಮಂಗಲ ಚಿಂತನೆ ನಡೆಸಿದ ಎಲ್ಲ ದೈವಜ್ಞರನ್ನು ಒಟ್ಟಾಗಿ ಕೂರಿಸಿ ಹೊಸದಾಗಿ ಪ್ರಶ್ನಾ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.


ನನ್ಯ ಅಚ್ಚುತ ಮೂಡೆತ್ತಾಯ, ಸುಧಾಕರ ಶೆಟ್ಟಿ ಮತ್ತು ಕೇಶವ ಪ್ರಸಾದ್ ಮುಳಿಯ, ಈ ಹಿಂದೆ ವ್ಯವಸ್ಥಾಪನಾ ಸಮಿತಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಈಗ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷರಾಗಿದ್ದಾರೆ.ಇವರೆಲ್ಲರ ಅವಧಿಯಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿದೆ.ಹಿಂದೆ ದೇವಸ್ಥಾನದ ಒಳಗೆ ನಾಗ ಸಾನಿಧ್ಯವಿತ್ತು. ಬಳಿಕ ಅದನ್ನು ಹೊರಗೆ ತಂದು ಗುಡಿ ಮಾಡಲಾಯಿತು. ಈಗ ಅಲ್ಲಿಂದಲೂ ತೆಗೆದು ಮೂಲ ಸಾನಿಧ್ಯಕ್ಕೆ ವಿಲೀನ ಮಾಡಲಾಗಿದೆ. ಹಿಂದೆ ಪ್ರಶ್ನಾ ಚಿಂತನೆ ಮಾಡಿ ಅಯ್ಯಪ್ಪನ ಗುಡಿ ಕಟ್ಟಲಾಯಿತು. ಬಳಿಕ ಪ್ರಶ್ನೆ ಚಿಂತನೆ ಮಾಡಿದಾಗ ಅದನ್ನು ತೆರವು ಮಾಡಲು ಸೂಚಿಸಲಾಯಿತು. ಹಿಂದೆ ರಕ್ತೇಶ್ವರಿ ಸಾನಿಧ್ಯ ದೇವಸ್ಥಾನದ ಒಳಗಿತ್ತು. ಪ್ರಶ್ನೆಯಲ್ಲಿ ಕಂಡು ಬಂದ ಕಾರಣ ಹೇಳಿ ಹೊರಗೆ ಸ್ಥಳಾಂತರ ಮಾಡಿ ಗುಡಿ ಕಟ್ಟಲಾಯಿತು. ಇತ್ತೀಚೆಗೆ ನಡೆದ ಚಿಂತನೆಯಲ್ಲಿ ಮತ್ತೆ ಒಳಗೆ ತರಲು ಸೂಚಿಸಲಾಗಿದ್ದು, ಅದರಂತೆ ಒಳಗೆ ದೀಪ ಸಂಕಲ್ಪ ಮಾಡಲಾಗಿದೆ. ಹಿಂದೆ ನವಗ್ರಹ ಗುಡಿ ಹೊರಗೆ ಕಟ್ಟಲಾಗಿದೆ. ಈಗ ಮತ್ತೆ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಒಳಗೆ ತರಲಾಗಿದೆ.ಹೀಗೆ ಪ್ರತೀ ಬಾರಿ ಅಷ್ಟಮಂಗಲ ನಡೆದಾಗಲೂ ಸಾನಿಧ್ಯ ಮತ್ತಿತರ ವಿಚಾರದಲ್ಲಿ ತದ್ವಿರುದ್ಧ ಸೂಚನೆಗಳು ದೊರೆಯುತ್ತವೆ. ಹಾಗಾದರೆ ಇದರಲ್ಲಿ ತಪ್ಪು ಯಾವುದು, ಸರಿ ಯಾವುದು ಎಂಬ ಗೊಂದಲ ಭಕ್ತರಲ್ಲಿ ಮೂಡುತ್ತದೆ.ಹಿಂದೆ ನಿರ್ಮಾಣ ಮಾಡಲಾದ ಸಭಾಭವನ ವಾಸ್ತುಪ್ರಕಾರ ಸರಿಯಾಗಿಲ್ಲ ಎಂಬುದು ಪ್ರಶ್ನೆ ಚಿಂತನೆಯಲ್ಲಿ ಗೋಚರಿಸಿತು.ಅದನ್ನು ತೆರವು ಮಾಡುವುದು ನಿಶ್ಚಿತ ಎಂದು ಗೊತ್ತಿದ್ದರೂ ಹಿಂದಿನ ಸಮಿತಿಯ ಕಾಲದಲ್ಲಿ ಲಕ್ಷಾಂತರ ರೂ. ನವೀಕರಣಕ್ಕೆ ಖರ್ಚು ಮಾಡಲಾಗಿತ್ತು. ಈ ಎಲ್ಲ ಗೊಂದಲ ನಿವಾರಣೆಯಾಗಬೇಕು. ಅದಕ್ಕಾಗಿ ಪ್ರಶ್ನಾ ಚಿಂತನೆ ಮಾಡಿದ ಎಲ್ಲ ದೈವಜ್ಞರನ್ನು ಒಟ್ಟಿಗೆ ಕೂರಿಸಿ ಹೊಸದಾಗಿ ಅಷ್ಟಮಂಗಲ ಚಿಂತನೆ ನಡೆಸಬೇಕು.ಹೀಗಾಗಿ ಒಂದು ಪ್ರಶ್ನಾಚಿಂತನೆಯನ್ನು ಇಡಬೇಕು, ಅಲ್ಲಿ ನಾವೆಲ್ಲರೂ ಸರಿಯಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.


ದೇವಸ್ಥಾನದಲ್ಲಿ ಮಾಡಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಸಾಕಷ್ಟು ಪ್ರಶ್ನೆಗಳಿವೆ.ಇದರ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮನವಿ ಮಾಡಿ ಸುಸ್ತಾದ ಬಳಿಕ ಶಾಸಕರಿಗೆ ಮನವಿ ಮಾಡಿದ್ದೆವು.ಎಲ್ಲ ಸರಿ ಮಾಡುವ ಭರವಸೆ ನೀಡಿದ್ದರು. ಇದಾದ ಬಳಿಕ ಎರಡು ತಿಂಗಳು ಕಳೆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಭಕ್ತರ ಸಭೆ ಕರೆದು ಚರ್ಚೆ ಮಾಡಬೇಕು.ಈ ವಿಚಾರದಲ್ಲಿ ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಗಳು ಮಧ್ಯಪ್ರವೇಶಿಸಬೇಕು. ಭಕ್ತರಿಗೆ ಸರಿಯಾದ ಮಾಹಿತಿ ನೀಡಬೇಕು. ನಾವೆಲ್ಲರೂ ತಂತ್ರಿಗಳ ಮಾತಿಗೆ ಬೆಲೆ ಕೊಡುವವರು. ಅವರನ್ನು ಎದುರು ಹಾಕಿಕೊಂಡು ಯಾವುದೂ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ನಾವು ತಂತ್ರಿಗಳ ಜೊತೆಗೆ ಮಾತನಾಡಲಿದ್ದೇವೆ, ನಮ್ಮನ್ನು ಅವರು ಗೊಂದಲದಿಂದ ಮುಕ್ತ ಮಾಡಬೇಕು.ಕಾನೂನಾತ್ಮಕವಾಗಿ ಭಕ್ತರ ಸಭೆ ಕರೆಯಬೇಕು ಎಂದು ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದರು.


ಸಮಿತಿಯ ಇನ್ನೋರ್ವ ಮುಖಂಡ ಅನಿಲ್ ಕುಮಾರ್ ಕಣ್ಣಾರ್ನೂಜಿ ಮಾತನಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಕೆಲವೊಂದು ವಿಚಾರಗಳ ಬಗ್ಗೆ ಮನವಿ ಸಲ್ಲಿಸಿದ್ದೆವು. ಅದನ್ನು ನಿರ್ಲಕ್ಷಿಸಲಾಗಿದೆ. ಇಲ್ಲಿ ಯಾವುದೇ ತೊಂದರೆಯಾದರೂ ಇಡೀ ಸೀಮೆಗೆ ಅದರ ಬಾಧಕಗಳು ಇದ್ದೇ ಇರುತ್ತವೆ.ನಾವು ಯಾವುದೇ ರಾಜಕೀಯದಲ್ಲಿಲ್ಲ.ದೇವಸ್ಥಾನದಲ್ಲಿ ರಾಜಕೀಯ ಮಾಡುವುದಿಲ್ಲ. ದೇವಳಕ್ಕೆ ವಾಸ್ತುಶಾಸ ಬಹಳ ಮುಖ್ಯ. ಅದಕ್ಕೆ ವಿರುದ್ಧವಾಗಿ ಹೋದರೆ ಲೋಪದೋಷಗಳು ಬರುತ್ತವೆ.ಇತ್ತೀಚಿನ ಪ್ರಶ್ನಾಚಿಂತನೆಯಲ್ಲಿ ಸಭಾಭವನ ಕಟ್ಟಡ ತೆರವಾಗಬೇಕೆಂದು ಕಂಡುಬಂದಿದೆ. ನಾನು 20 ವರ್ಷಗಳ ಮುಂಚೆಯೇ ಅದನ್ನು ಹೇಳಿದ್ದೆ.ಅದನ್ನು ಕಟ್ಟುವ ಜಾಗದಲ್ಲಿ ಕಟ್ಟುತ್ತಿದ್ದರೆ ತೆಗೆಯುವ ಪರಿಸ್ಥಿತಿ ಇತ್ತೇ? ಭಕ್ತರ ದುಡ್ಡಿನಿಂದ ಮಾಡುವುದು ಮುಂದಕ್ಕೆ ಹೀಗೆ ಆಗಬಾರದು.ದೇವಸ್ಥಾನದ ಉತ್ತರ ಈಶಾನ್ಯ ದಿಕ್ಕಿನಲ್ಲಿ ಅನ್ನಛತ್ರ ಮತ್ತು ಆಡಳಿತ ಕಚೇರಿ ಮಾಡಿದ್ದು ವಾಸ್ತು ಪ್ರಕಾರ ತಪ್ಪು. ಉತ್ತರ ಈಶಾನ್ಯ ಮತ್ತು ಪೂರ್ವ ಈಶಾನ್ಯದಲ್ಲಿ ಖಾಲಿ ಇರಬೇಕೆಂಬುದು ನಿಯಮ. ಆಡಳಿತ ಕಚೇರಿಯು ನೈಋತ್ಯ ದಿಕ್ಕಿನಲ್ಲಿ ಇರಬೇಕು.ಅದೇ ರೀತಿ ಆಗ್ನೇಯ ದಿಕ್ಕಿನಲ್ಲಿದ್ದ ಕಂಬಳ ಕರೆಯನ್ನು ಸ್ಥಳಾಂತರ ಮಾಡುವಾಗ ಈಶಾನ್ಯ ದಿಕ್ಕಿಗೆ ಮಾಡಬಹುದಿತ್ತು. ಬದಲು ಆಗ್ನೇಯದಲ್ಲೇ ಮಾಡಲಾಗಿದೆ. ಇದು ಕೂಡ ವಾಸ್ತುವಿಗೆ ವಿರುದ್ಧವಾದುದು ಎಂದು ಹೇಳಿದರು.


ಖರ್ಚುವೆಚ್ಚ ನಿರ್ವಹಣೆಯಲ್ಲಿ ಅವ್ಯವಹಾರ-ಆರೋಪ:
ಹಾಲಿ ಆಡಳಿತ ಮಂಡಳಿ ಅಡಿಯಲ್ಲಿ ದೇವಳದ ಖರ್ಚುವೆಚ್ಚಗಳ ನಿರ್ವಹಣೆಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ.ಇದರ ಬಗ್ಗೆ ಜಿಲ್ಲಾಧಿಕಾರಿಯವರಿದ್ದು ತನಿಖೆ ಮಾಡಬೇಕು. ಇದಕ್ಕಾಗಿ ವ್ಯವಸ್ಥಾಪನಾ ಸಮಿತಿಯನ್ನು ಅಮಾನತಿನಲ್ಲಿ ಇಡಬೇಕು. ಕಾರ್ಯನಿರ್ವಹಣಾಧಿಕಾರಿಯವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಮುಖಂಡರು ಹೇಳಿದರು.
2025 ಜನವರಿಯಿಂದ 2026 ಮೇ ವರೆಗೆ ದೇವಸ್ಥಾನದಲ್ಲಿ ಭ್ರಷ್ಟಾಚಾರಕ್ಕೆ ಕೈಹಾಕಿರುವುದಕ್ಕೆ ದಾಖಲೆಗಳನ್ನು ನೀಡುತ್ತೇವೆ.2025 ಜನವರಿಯಿಂದ ಡಿಸೆಂಬರ್ ಮತ್ತು 2026 ಮೇ ವರೆಗೆ ಸೇರಿ ರೂ. 40,32,091 ರೂ. ಹಣವನ್ನು ಸಣ್ಣ ಪುಟ್ಟ ಖರ್ಚು ಎಂದು ತೆಗೆದಿದ್ದಾರೆ.ಈ ಸಣ್ಣ ಪುಟ್ಟ ಖರ್ಚು ಏನು?ಇನ್ನೊಂದು ವಿಶೇಷ ದಿನ ಕೂಲಿ ಆಳುಗಳಿಗೆ ಸಂಬಳ ಬೇರೆ ದೇವಸ್ಥಾನದ ಕೆಲಸದವರಿಗೆ ಸಂಬಳ ಆಗುತ್ತದೆ.ಆದರೆ ಕೂಲಿ ಕೆಲಸದಲ್ಲಿ ಸ್ವಚ್ಛತೆ ಕೆಲಸ ಬರುತ್ತದ, ಬರುದಿಲ್ವಾ ಗೊತ್ತಿಲ್ಲ. ಸ್ವಚ್ಛತೆಗಾಗಿ 2025ರಿಂದ ಜನವರಿಯಿಂದ ನಿರಂತರ 2026ರವರೆಗೆ ನಿರಂತರವಾಗಿ ಹಣ ತೆಗೆಯುತ್ತಾರೆ.ಯಾವ ಸ್ವಚ್ಛತೆ, ಏನು ಸ್ವಚ್ಛತೆ ಎಂಬ ಮಾಹಿತಿ ಇಲ್ಲ.2025ರ ಜಾತ್ರೆಯಲ್ಲಿ ಖರ್ಚು ಪಟ್ಟಿಯಲ್ಲಿ ಅನೇಕ ಹಣಕಾಸು ದುರುಪಯೋಗ ಆಗಿದೆ. ಜಾತ್ರಾಗದ್ದೆಯಲ್ಲಿ ರಶೀದಿ ಚೀಟಿ ನೀಡದೇ ಸೀಲ್ ಹಾಕಿರುವ ಚೀಟಿ ನೀಡಿ ದುಡ್ಡು ಸಂಗ್ರಹಿಸಲಾಗಿದೆ.ದೇವಸ್ಥಾನದಲ್ಲಿ ಅನುಪಯುಕ್ತ ವಸ್ತುಗಳನ್ನು ಏಲಂ ಮಾಡುವ ವೇಳೆ ಇವರದೇ ಇಬ್ಬರು ಜನರಿಗೆ ಟೆಂಡರ್ ನೀಡಿದ್ದಾರೆ. 45 ಸಾವಿರ ಮತ್ತು 52 ಸಾವಿರದ ಒಂದು ರಶೀದಿ ಮಾಡಿದ್ದಾರೆ.ದೇವಳಕ್ಕೆ ಸೇರಿದ ಜಾಗದ ಕಟ್ಟಡ ತೆರವು ಕಾರ್ಯಕ್ಕೆ ಜೆಸಿಬಿ, ಹಿಟಾಚಿ ಕೆಲಸಗಳಿಗೆ 70 ಲಕ್ಷ ರೂ.ವರೆಗೆ ದೇವಸ್ಥಾನದಿಂದ ಬಿಲ್ ಮಾಡಿದ್ದಾರೆ ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೊಟ್ಟಿದ್ದಾರೆ. ತೆಂಕಿಲ 15 ಎಕ್ರೆ ಜಾಗವನ್ನು ವಶಪಡಿಸಿಕೊಳ್ಳುವಾಗ ಆ ಜಾಗದಲ್ಲಿ ಇದ್ದ ಹಲವು ಜಾತಿ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆ. ಈ ಮರಗಳನ್ನು ಕಡಿಯುವಾಗ ಮಾರಾಟ ಮಾಡುವಾಗ ದೇವಸ್ಥಾನದ ಕಮಿಟಿ ನಿರ್ಣಯ ಮಾಡಿ ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಮತ್ತು ಇಲಾಖೆಯ ಮುಖಾಂತರ ಅರಣ್ಯ ಇಲಾಖೆಯಿಂದ ಮರದ ಮೌಲ್ಯಮಾಪನ ಮಾಡಿ ಕಡಿಯಲು ಅನುಮತಿ ಪಡೆಯಬೇಕಿತ್ತು. ಇದು ಯಾವುದನ್ನು ಮಾಡದೆ ಮರಗಳನ್ನು ಕಡಿದು ಮಾರಾಟವಾಗಿದೆ ಎಂದು ಆರೋಪಿಸಿದರು.

ಜೀರ್ಣೋದ್ಧಾರ ಸಮಿತಿ ಅನುಮೋದನೆಯಾಗಿಲ್ಲ: 9.07.2026ನೇ ದಿನಾಂಕದವರೆಗೆ ಜೀರ್ಣೋದ್ದಾರ ಸಮಿತಿ/ ಅಭಿವೃದ್ಧಿ ಸಮಿತಿ ಅನುಮೋದನೆ ಆಗಿಲ್ಲ. ಆದರೆ ಜೀರ್ಣೋದ್ದಾರ ಸಮಿತಿ/ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ.2026 -ಬ್ರವರಿಯಿಂದಲೇ ಜೀರ್ಣೋದ್ಧಾರ/ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಭಕ್ತರಿಂದ ಹಣ ಸಂಗ್ರಹ ಮಾಡುತ್ತಿದ್ದಾರೆ. ಇದು ಧಾರ್ಮಿಕ ದತ್ತಿ ಇಲಾಖೆಯ ಕಾನೂನಿಗೆ ವಿರುದ್ಧವಾಗಿದೆ.ಜೀರ್ಣೋದ್ದಾರ/ಅಭಿವೃದ್ಧಿ ಸಮಿತಿ ಅನುಮೋದನೆ ಪಡೆಯದೆ ಈಗಾಗಲೇ ದೇವಸ್ಥಾನದ ಸುತ್ತ ಇರುವ 5 ದೇವರಕಟ್ಟೆ ತೆರವು ಮಾಡಿ ಶಿಲಾಮಯ ಕಟ್ಟೆ ನಿರ್ಮಾಣ ಮಾಡಲಾಗಿದೆ.ಆದರೆ ತೆರವು ಮಾಡುವಾಗ ಪ್ರಶ್ನಾ ಚಿಂತನೆ ಮಾಡಿಲ್ಲ.ಶಿಲಾಮಯ ಕಟ್ಟೆ ಮಾಡುವಾಗ ಬಜೆಟ್ ಮಾಡಿಲ್ಲ. 5 ಕಟ್ಟೆಗೆ ತಲಾ ಒಬ್ಬೊಬ್ಬರಿಂದ ರೂ.25 ಲಕ್ಷದಂತೆ 5 ಭಕ್ತರಿಂದ ಸಂಗ್ರಹ ಮಾಡಲಾಗಿದೆ.ಶಿಲಾಮಯ ಕಟ್ಟೆಗೆ ಅನುಮತಿ ಇಲ್ಲ ಟೆಂಡರು ಇಲ್ಲ, ಕೊಟೇಶನ್ ಇಲ್ಲ, ಶಿಲ್ಪಿಯ ನೇಮಕ ಆಗಿಲ್ಲ, ಆದರೂ ಕಟ್ಟೆ ನಿರ್ಮಾಣ ಆಗಿದೆ ಎಂದು ಆರೋಪಿಸಿದರು.ದೇವಸ್ಥಾನದಲ್ಲಿ ದೇವರ ಚಿನ್ನವನ್ನು ಸರಿಯಾಗಿ ನಿರ್ವಹಣೆ ಮಾಡದೇ ಅಕಸ್ಮಾತ್ ಚಿನ್ನ ಕಳವಾದರೆ ಯಾರಲ್ಲಿ ಕೇಳಬೇಕು?2024-25 ಜಮೆ ಮತ್ತು ಖರ್ಚಿನ ವಿವರಗಳನ್ನು ನಿರ್ವಹಿಸಿಲ್ಲ.ದೇವಸ್ಥಾನದ ಟಿಡಿಎಸ್ ರಿಟರ್ನ್ ಫೈಲ್ ಮಾಡಿಲ್ಲ. ಹೀಗಿದ್ದರೂ 30,00,248 ರೂ. ಹಣವನ್ನು ಸೆಲ್ ಡ್ರಾ ಮಾಡಿರುವುದು ಕಂಡು ಬಂದಿದೆ.ಇದು ಕಾನೂನಿಗೆ ವಿರುದ್ಧವಾಗಿದೆ.ಈ ರೀತಿ ದೇವಸ್ಥಾನದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಈ ಎಲ್ಲಾ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಶಾಸಕರೇ ಇದಕ್ಕೆ ನೇರ ಹೊಣೆ ಎಂಬ ಆರೋಪವನ್ನೂ ಮಾಡಲಾಯಿತು.ಪುತ್ತೂರಿನಲ್ಲಿ ವಿನಯ್‌ಕುಮಾರ್ ಸೊರಕೆ, ಡಿವಿ ಸದನಾನಂದ ಗೌಡ, ರಾಮ್ ಭಟ್, ಮಲ್ಲಿಕಾ ಪ್ರಸಾದ್ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು ಶಾಸಕರಾಗಿದ್ರು. ಇರ‍್ಯಾರೂ ದೇವಸ್ಥಾನವನ್ನು ಕೇಂದ್ರೀಕರಿಸಿಕೊಂಡು ರಾಜಕೀಯವಾಗಲೀ, ಯಾವುದೇ ಅಭಿವೃದ್ಧಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ, ಸಮಿತಿಗೆ ಸ್ವಾತಂತ್ರ‍್ಯ ನೀಡಿದ್ದರು.ಆದರೆ ಅಶೋಕ್ ರೈ ಪ್ರತಿಯೊಂದಕ್ಕೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ವೇದಿಕೆಯ ರತ್ನಾ ಕೆ. ನಾಯರ್, ಬಾಲಚಂದ್ರ ಸೊರಕೆ, ರಾಜೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here