







ಒಟ್ಟು ವ್ಯವಹಾರ ರೂ.15 ಕೋಟಿ


ಪುತ್ತೂರು : ಕಳೆದ 11 ವರ್ಷಗಳಿಂದ ತಿಂಗಳಾಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಪುತ್ತೂರು ಹಾಗೂ ಉಪ್ಪಿನಂಗಡಿಯಲ್ಲಿ ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿಯ 11 ನೇ ವಾರ್ಷಿಕ ಮಹಾಸಭೆಯು ಸೆ.06 ರಂದು ತಿಂಗಳಾಡಿಯ ಶ್ರೀ ಲಕ್ಷ್ಮೀ ಸಂಕೀರ್ಣದಲ್ಲಿ ಸಹಕಾರಿಯ ಅಧ್ಯಕ್ಷರಾದ ಹರೀಶ ಪುತ್ತೂರಾಯರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯು ಸಾನ್ವಿ ಸುಧೀರ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಗೌರವಾನ್ವಿತ ಸದಸ್ಯರನ್ನು ಮತ್ತು ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಸಭೆಗೆ ಪರಿಚಯಿಸಿ, ಆತ್ಮೀಯವಾಗಿ ಬರಮಾಡಿಕೊಂಡ ಸಹಕಾರಿಯ ಅಧ್ಯಕ್ಷ ಹರೀಶ ಪುತ್ತೂರಾಯರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಳೆದ ಒಂದು ದಶಕದಲ್ಲಿ ಸಹಕಾರಿಯು ಬೆಳೆದುಬಂದ ಹಾದಿ, ಎದುರಿಸಿದ ಸವಾಲುಗಳು, ಬೆಳವಣಿಗೆ ಹಾಗೂ ಪ್ರಸ್ತುತ ಸಹಕಾರಿಯ ವ್ಯವಹಾರ ಅಭಿವೃದ್ಧಿಯ ಕುರಿತು ಅವರು ಸಂಕ್ಷಿಪ್ತವಾಗಿ ವಿವರಿಸಿದರು.ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರ ಒಗ್ಗಟ್ಟು ಮತ್ತು ಸಹಕಾರದ ಬಗ್ಗೆ ಕೃತಜ್ಞತೆ ಸಲ್ಲಿಸಿದರು.
ವರದಿ ವರ್ಷದಲ್ಲಿ ಅಗಲಿದ ಸಹಕಾರಿಯ 12 ಮಂದಿ ಸದಸ್ಯರನ್ನು ಸ್ಮರಿಸಿ, ಮೃತರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲೆಂದು 1 ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರಾದ ಸುಷ್ಮಾ ಭಟ್ ಅವರು 2024-25 ನೇ ಸಾಲಿನ ಗತ ಸಭೆಯ ವರದಿ, 2025-26 ನೇ ಸಾಲಿನ ವಾರ್ಷಿಕ ವರದಿ ಹಾಗೂ 2025-26 ನೇ ಸಾಲಿನ ಹೆಚ್ಚುವರಿ ವೆಚ್ಚಗಳ ವಿವರವನ್ನು ಸಭೆಯ ಮುಂದಿಟ್ಟರು. ನೂತನವಾಗಿ ಸೇರ್ಪಡೆಗೊಂಡ ಹಾಗೂ ಸದಸ್ಯತ್ವ ಹಿಂಪಡೆದ ಸದಸ್ಯರ ವಿವರ, ಲೆಕ್ಕ ಪರಿಶೋಧಕರ ವರದಿ, ಅನುಸರಣಾ ವರದಿ ಮಂಡನೆ ಹಾಗೂ ನೂತನ ಲೆಕ್ಕಪರಿಶೋಧಕರ ನೇಮಕದ ಕುರಿತಾಗಿ ಸಹಕಾರಿಯ ಅಧ್ಯಕ್ಷರು ಸಭೆಯ ಅನುಮೋದನೆ ಪಡೆದರು. ಸಹಕಾರಿಯ ಸರ್ವಸದಸ್ಯರ ಅಪೇಕ್ಷೆಯಂತೆ 2025-26 ನೇ ಸಾಲಿನ ಲಾಭಾಂಶವನ್ನು ಅನಿರೀಕ್ಷಿತ ನಷ್ಟ ನಿಧಿಗೆ ವರ್ಗಾಯಿಸಲು ನಿರ್ಣಯಿಸಲಾಯಿತು.
ನಿರ್ದೇಶಕರಾದ ಡಾ| ಸುರೇಶ್ ಪುತ್ತೂರಾಯರು 2026-27 ನೇ ಸಾಲಿನ ಕ್ರಿಯಾಯೋಜನೆಯನ್ನು ಮಂಡಿಸಿದರು.ಸಹಕಾರಿಯ ಉಪಾಧ್ಯಕ್ಷರಾದ ಜಯರಾಮ ಕೆದಿಲಾಯ ಅವರು ಸಹಕಾರಿಯ ಬೆಳವಣಿಗೆಗೆ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಹಕಾರವನ್ನು ಕೋರಿದರು.
ಉತ್ತಮ ಗ್ರಾಹಕ ಪುರಸ್ಕಾರ,ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಹಕಾರಿಯ ಸದಸ್ಯರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು. ಸಹಕಾರಿಯ ಆರಂಭದಿAದಲೂ ಉತ್ತಮ ಸದಸ್ಯ ಗ್ರಾಹಕರಾಗಿದ್ದ ಎ.ವಿ.ನಾರಾಯಣ, ಸುಬ್ರಾಯ ನಿಡ್ವಣ್ಣಾಯ, ವಸಂತ ಭಟ್ ಕೆ., ಮೋಹನ ಶೆಟ್ಟಿ ಹಾಗೂ ಜೋಹ್ರಾ ಅವರಿಗೆ ಉತ್ತಮ ಗ್ರಾಹಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಹಕಾರಿಯ ಒಟ್ಟು ವ್ಯವಹಾರವು ರೂ. 15,76,25,770.81 ರಷ್ಟಾಗಿದ್ದು, ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು. ಸಹಕಾರಿಯ ಸದಸ್ಯರಾದ ಎ.ವಿ.ನಾರಾಯಣ, ಆನಂದ ಉಡುಪ ಹಾಗೂ ರಾಮಚಂದ್ರ ಉಡುಪ ಅವರು ಸಹಕಾರಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.




ಸಭೆಯಲ್ಲಿ ಸಹಕಾರಿಯ ನಿರ್ದೇಶಕರುಗಳಾದ ಶ್ರೀಧರ ಬೈಪಡಿತ್ತಾಯ, ವಿಷ್ಣುಮೂರ್ತಿ ಎಂ., ಸುಧೀರ್ ಕೃಷ್ಣ ಎಂ.ಪಿ., ಮನೋರಮಾ ಎಸ್.ಕೆ., ಗುರುಪ್ರಸಾದ್ ಕೆ. ಆರ್., ಪ್ರೀತಿರಾಜ್ ಬಳ್ಳಾಳ್, ಜಯಲಕ್ಷ್ಮೀ ಟಿ.ಕೆ., ಪ್ರಕಾಶ್ ಕುಮಾರ್ ಎನ್ ಉಪಸ್ಥಿತರಿದ್ದರು. ನಿರ್ದೇಶಕರಾದ ಕೃಷ್ಣಪ್ರಸಾದ್ ಕೆದಿಲಾಯ ವಂದಿಸಿದರು. ಸಿಬ್ಬಂದಿಗಳಾದ ಸತ್ಯಶ್ರೀ ಎಸ್. ಭಟ್, ಚಿದಾನಂದ ಪಿ. ಮತ್ತು ದೀಕ್ಷಾ ಸಹಕರಿಸಿದರು.
ಸಹಕಾರಿಯು 2025-26 ನೇ ಸಾಲಿನಲ್ಲಿ ರೂ.15 ಕೋಟಿ ವ್ಯವಹಾರವನ್ನು ಮಾಡಿದ್ದು ಈ ವರ್ಷದ ಲಾಭಾಂಶವನ್ನು ಅನಿರೀಕ್ಷಿತ ನಷ್ಟ ನಿಧಿಗೆ ವರ್ಗಾಯಿಸಲು ನಿರ್ಣಯಿಸಿದ್ದೇವೆ. ಸಹಕಾರಿಯು ಮುಂದಿನ ದಿನಗಳಲ್ಲಿ ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು ಇದಕ್ಕೆ ಸರ್ವರ ಸಹಕಾರ ಅಗತ್ಯ. ಸಹಕಾರಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಕಾರ ನೀಡಿದ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇವೆ. ಮುಂದಿನ ದಿನಗಳಲ್ಲಿಯೂ ಸಹಕಾರಿಯ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರವನ್ನು ಬಯಸುತ್ತೇವೆ. ಹರೀಶ ಪುತ್ತೂರಾಯ, ಅಧ್ಯಕ್ಷರು ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ನಿ.ತಿಂಗಳಾಡಿ










