







ಪುತ್ತೂರು: ಮಂಗಳೂರಿನ ಎಮ್ಮೆಕೆರೆ ಈಜುಕೊಳದಲ್ಲಿ ಜಯ್‌ಹಿಂದ ಸ್ವಿಮ್ ಕ್ಲಬ್‌ನವರು ಆಯೋಜಿಸಿದ ರಾಜ್ಯಮಟ್ಟದ ಫಿನ್‌ಸ್ವಿಮ್ ಚಾಂಪಿಯನ್‌ಶಿಪ್‌ನಲ್ಲಿ ವಿವೇಕಾನಂದ ಸೆಂಟ್ರಲ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಲಾಸ್ಯಕಿಶನ್ ವೈಯಕ್ತಿಕ ವಿಭಾಗಗಳಲ್ಲಿ 4 ಚಿನ್ನದ ಪದಕ ಹಾಗೂ 400ಮೀ ಮಿಕ್ಸಡ್ ರಿಲೇಯಲ್ಲಿ 1 ಚಿನ್ನದ ಪದಕವನ್ನು ಪಡೆದು ಪುಣೆಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಫಿನ್‌ಸ್ವಿಮ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಇವರು ಪಾರ್ಥ ವಾರಣಾಸಿ, ರಾಕೇಶ್, ಕ್ರಾಂತಿತೇಜರವರಿಂದ ಬಾಲವನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಹಾಲಿಂಗೇಶ್ವರ ಎಂಟರ್‌ಪ್ರೈಸಸ್‌ನ ಮಾಲಿಕರಾದ ಕಿಶನ್ ಹಾಗೂ ದೀನಾ ದಂಪತಿಯ ಪುತ್ರಿ.












