







ಹುಲ್ಲು, ಪೊದೆಗಳಿಂದ ಆವೃತವಾದ ಫುಟ್‌ಪಾತ್, ವಿದ್ಯಾರ್ಥಿಗಳಿಗೆ, ಪಾದಾಚಾರಿಗಳಿಗೆ ತೊಂದರೆ


ಪುತ್ತೂರು: ಕುಂಬ್ರ ಪೇಟೆ ಬದಿಯಲ್ಲಿರುವ ಫುಟ್‌ಪಾತ್‌ನ್ನು ಹುಲ್ಲು, ಗಿಡಗಂಟಿಗಳು ನುಂಗಿ ಹಾಕಿದ್ದು ಪದಾಚಾರಿಗಳು ಮುಖ್ಯ ರಸ್ತೆಯಲ್ಲೇ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಂಬ್ರ ಪೇಟೆಯಿಂದ ಶೇಕಮಲೆ ಕಡೆ ಹೋಗುವ ಫುಟ್‌ಪಾತ್ ಪೊದೆಗಳಿಂದ ಆವೃತವಾಗಿದ್ದು ಫುಟ್‌ಪಾತ್ ಸಂಪೂರ್ಣವಾಗಿ ಕಾಣದಂತೆ ಮಾಯವಾಗಿದೆ.



ಫುಟ್‌ಪಾತ್ ಸಮಸ್ಯೆ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಕಾಡುತ್ತಿದ್ದು ಇದೇ ಫುಟ್‌ಪಾತ್ ಮೂಲಕ ಹೋಗುತ್ತಿದ್ದ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ, ಪಾದಾಚಾರಿಗಳು ಕೂಡಾ ಸಮಸ್ಯೆ ಎದುರಿಸುತ್ತಿದ್ದು ಫುಟ್‌ಪಾತ್‌ನಲ್ಲಿ ನಡೆದಾಡುವವರು ಇದೀಗ ಮುಖ್ಯ ರಸ್ತೆಯಲ್ಲೇ ಅಪಾಯಕಾರಿ ಸ್ಥಿತಿಯಲ್ಲಿ ನಡೆದಾಡುವಂತಾಗಿದೆ. ಮುಖ್ಯ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿರುವ ಕಾರಣ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಯದಿಂದಲೇ ರಸ್ತೆಯಲ್ಲೇ ನಡೆದಾಡುತ್ತಿದ್ದು ಫುಟ್‌ಪಾತ್‌ನಲ್ಲಿ ಬೆಳೆದಿರುವ ಹುಲ್ಲು ಗಿಡಗಂಟಿಗಳನ್ನು ತೆರವು ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸುವ ಮೂಲಕ ಫುಟ್‌ಪಾತ್‌ನಲ್ಲಿ ಬೆಳೆದಿರುವ ಹುಲ್ಲು, ಪೊದೆಗಳನ್ನು ತೆರವುಗೊಳಿಸುವ ಮೂಲಕ ಪಾದಾಚಾರಿಗಳು ನಡೆದಾಡಲು ವ್ಯವಸ್ಥೆ ಮಾಡಿಕೊಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಫುಟ್‌ಪಾತ್‌ನಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದ ಪರಿಣಾಮ ಫುಟ್‌ಪಾತ್‌ನಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ, ಫುಟ್‌ಪಾತ್‌ನ ಸ್ಥಿತಿ ಈ ರೀತಿ ಆದ ಕಾರಣ ಜನರು ರಸ್ತೆ ಮೂಲಕವೇ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮುಖ್ಯವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅತೀವ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಇದಕ್ಕೆ ತಕ್ಷಣ ಸ್ಪಂದಿಸುವ ಕಾರ್ಯ ಮಾಡಬೇಕಾಗಿದೆ.
-ದಿನೇಶ್, ಪಾದಾಚಾರಿ










