








ಕಾಣಿಯೂರು : ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರಿನಲ್ಲಿ ಇಲಾಖಾ ವತಿಯಿಂದ ನಡೆಸಲ್ಪಟ್ಟ ಸವಣೂರು ವಲಯ ಮಟ್ಟದ 17 ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನ ಮತ್ತು ಕಾಣಿಯೂರು ಪ್ರಗತಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತವೆ.
ಬಾಲಕರ ವಿಭಾಗದಲ್ಲಿ – ಶೋಭಿತ್, ಬೆನಡಿಕ್ಟ್ ಇಶಾನಿ ಕಾಂಬ್ರೆಕರ್, ರತನ್, ಶ್ರವಣ್ ಕೆ, ಶೋಭಿತ್, ದಿವಿನ್ ಬಿ, ಕುನಾಲ್ ರೈ, ಅಮೃತ್ ಕೆ, ಚರಣ್ ಕೆ , ಗ್ರಿತನ್ ಕುಲಾಲ್, ಗ್ರಿತಿನ್ ಕುಲಾಲ್ , ಧನುಷ್ ಎ, ಗೌತಮ್ ಎಂ, ಉದಿತ್ ತಂಡದ ಆಟಗಾರರಾಗಿದ್ದರು.
ಬಾಲಕಿಯರ ವಿಭಾಗದಲ್ಲಿ- ಭವಿಷ್ಯ ರೈ, ಮಂಗಳ ಎಂ , ಸಾನ್ವಿ ಎಂ ಸಿ, ತುಷಾರ ಪಿ , ತ್ರಿಷಾ ಎನ್ ಓ, ಕುಷ್ಯ ಡಿ ಗೌಡ, ಆದ್ಯತಾ ಎಸ್, ಸಾನಿಧ್ಯ ಯು, ಸಿದೀಕ್ಷಾ ರೈ ಟಿ , ದೀಕ್ಷಾ ಎಚ್ ಎನ್, ಸಾನ್ವಿ ಎಸ್, ದಿಶಾ ಬಿ ಎ ತಂಡದ ಆಟಗಾರರು.
ಬಾಲಕರ ವಿಭಾಗದಲ್ಲಿ ಬೆನಡಿಕ್ಟ್ ಇಶಾನಿ ಕಾಂಬ್ರೆಕರ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಬಾಲಕಿರ ವಿಭಾಗದಲ್ಲಿ ಭವಿಷ್ಯ ರೈ ಬೆಸ್ಟ್ ಕ್ಯಾಚರ್, ಮಂಗಳ ಎಂ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡರು.
ವಿಜೇತರನ್ನು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕ- ಶಿಕ್ಷಕರೇತರ ವೃಂದದವರು ಮತ್ತು ವಿದ್ಯಾರ್ಥಿ ಮಿತ್ರರು ಅಭಿನಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ ಮತ್ತು ಸುವರ್ಣ ಕೆ ಬಿ ಸೂಕ್ತ ತರಬೇತಿ ನೀಡಿದರು. ಹಿರಿಯ ಶಿಕ್ಷಕಿ ಸವಿತಾ ಕೆ ಸಹಕರಿಸಿದರು.













