ಇರ್ದೆ ಬೆಂದ್ರ್ ತೀರ್ಥದಲ್ಲಿ ಪುಣ್ಯ ತೀರ್ಥಸ್ನಾನ –  ಐದು ಸಾವಿರಕ್ಕಿಂತಲೂ ಮಿಕ್ಕಿ ತೀರ್ಥ ಸ್ನಾನ ಮಾಡಿ ಪುನೀತರಾದ ಭಕ್ತಾಧಿಗಳು

0

ನಿಡ್ಪಳ್ಳಿ; ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಚಿಲುಮೆ ಇರ್ದೆ ಬೆಂದ್ರ್ ತೀರ್ಥ ಕ್ಷೇತ್ರದಲ್ಲಿ ಶ್ರಾವಣ ಮಾಸದ ತೀರ್ಥ ಅಮಾವಾಸ್ಯೆ ಪ್ರಯುಕ್ತ ಸೆ.11 ರಂದು ನಡೆದ ತೀರ್ಥ ಸ್ನಾನ ಕಾರ್ಯಕ್ರಮದಲ್ಲಿ ಊರ ಪರವೂರ ಸುಮಾರು ಐದು ಸಾವಿರಕ್ಕಿಂತಲೂ ಮಿಕ್ಕಿ ಭಕ್ತಾದಿಗಳು ತೀರ್ಥ ಸ್ನಾನ ಮಾಡಿ ಪುನೀತರಾದರು.

ಬೆಳಗಿನ ಜಾವ  4 ಗಂಟೆಗೆ ಇರ್ದೆ  ಶ್ರೀ ವಿಷ್ಣುಮೂರ್ತಿ ದೇವಾಲಯದ ಸಹಾಯಕ ಅರ್ಚಕರಿಂದ ಧಾರ್ಮಿಕ ವಿಧಿ ವಿಧಾನ ನಡೆದು ಪುಣ್ಯ ತೀರ್ಥ ಕೆರೆಗೆ ಪೂಜೆ ನಡೆಯಿತು. ವಾಡಿಕೆಯಂತೆ ಪಕ್ಕದ ಸೀರೆ ಹೊಳೆಯಲ್ಲಿ ಮುಳುಗಿ ಪುಣ್ಯ ತೀರ್ಥ ಕೆರೆಯಲ್ಲಿ ಸ್ನಾನ ಮಾಡಲು ಆರಂಭಿಸಿದರು.ಸೀರೆ ಹೊಳೆಯಲ್ಲಿ ಸ್ನಾನ ಮಾಡಲು 2 ಸ್ನಾನ ಘಟ್ಟ ರಚಿಸಲಾಗಿತ್ತು. ಸೇವಾರ್ಥವಾಗಿ ಹಣ್ಣುಕಾಯಿ,ಪಂಚಕಜ್ಜಾಯ ಸಮರ್ಪಣೆ ವಿಶೇಷವಾಗಿತ್ತು. ಮಧ್ಯಾಹ್ನ ಸುಮಾರು 2.30 ರ ತನಕ ಪುಣ್ಯ ತೀರ್ಥ ಸ್ನಾನ ನಡೆಯಿತು.

ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುರಕ್ಷತೆಗೆ ಸ್ಥಳದಲ್ಲಿ ಸನ್ನದ್ದವಾಗಿತ್ತು.  ಸಮರ್ಪಣಾ ಸೇವಾ ಟ್ರಸ್ಟ್ ಇರ್ದೆ ಇವರ ವತಿಯಿಂದ ಉಪಹಾರದ ಪ್ರಯೋಜಕತ್ವ ನಡೆಯಿತು. ಶಿವಾಜಿ ಯುವಸೇನೆ(ರಿ) ಬೆಂದ್ರ್ ತೀರ್ಥ ಇರ್ದೆ ಇವರು ಇಡೀ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ್ದರು. ಕಳೆದ ವರ್ಷದಿಂದ ಸಂಪೂರ್ಣ ಸಾಮಾಜಿಕ ಜಾಲತಾಣ ಮೂಲಕ ಪ್ರಚಾರಕ್ಕೆ ನೀಡಿದ ಕಾರಣ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.

ಪಾಲ್ಗೊಂಡ ಗಣ್ಯರು;
ತೀರ್ಥ ಸ್ನಾನ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದರು.ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ,ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಮುರಳಿಕೃಷ್ಣ ಹಸಂತಡ್ಕ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಕೃಷ್ಣಪ್ರಸಾದ್  ಆಳ್ವ ಚೆಲ್ಯಡ್ಕ, ಮನೋಜ್ ಕುಮಾರ್ ಅಜ್ಜಿಕಲ್ಲು, ಇರ್ದೆ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ್  ರೈ ಬಾಲ್ಯೊಟ್ಟು, ಪ್ರಕಾಶ್ ರೈ ಬೈಲಾಡಿ  ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಹಲವಾರು ಮುಖಂಡರು ಭಾಗಿಯಾದರು.

ಸಂಘಟನೆಯ ಸೂಚನೆಯಂತೆ ಎಲ್ಲರ ಏಕ ಮನೋಭಾವದ ದುಡಿಮೆಯಿಂದ ಪ್ರತೀ ವಿಭಾಗದ ಜವಾಬ್ದಾರಿ ನಿರ್ವಹಣೆಯೇ ಇಂದಿನ ಯಶಸ್ವಿನ ಗುಟ್ಟು
ಶಿವಾಜಿ ಸಂಘಟನೆಗೆ 10 ವರ್ಷ ಪೂರೈಕೆ ಸುಸಂದರ್ಭದಲ್ಲಿ ಬೆಂದ್ರ್ ತೀರ್ಥ ಇನ್ನಷ್ಟು ಅಭಿವೃದ್ಧಿ ಪಡೆದು,ಹಿಂದೂಗಳ ಶ್ರದ್ದಾ ಕೇಂದ್ರದ ಜೊತೆಗೆ ಪ್ರವಾಸಿ ಕೇಂದ್ರವಾಗಿ ಹತ್ತೂರ ಭಕ್ತರ ಆಕರ್ಷಿತ ಕೇಂದ್ರವಾಗಬೇಕು ಎಂಬುದು ನಮ್ಮ ಸಂಘಟನೆಯ ಗುರಿ ಮತ್ತು ಉದ್ದೇಶ.
ಧನ್ಯರಾಜ್, ಅಧ್ಯಕ್ಷರು, ಶಿವಾಜಿ ಯುವ ಸೇನೆ.

LEAVE A REPLY

Please enter your comment!
Please enter your name here