







ಪುತ್ತೂರು : ಡಿಸಿಸಿ ಅಧ್ಯಕ್ಷ ರಾಗಿ 9 ವರ್ಷ ಕಾರ್ಯ ನಿರ್ವಹಿಸಿದ ಹರೀಶ್ ಕುಮಾರ್ ರವರಿಗೆ ಬೀಳ್ಕೊಡುಗೆ, ಮತ್ತು ಹೊಸ ಡಿಸಿಸಿ ಅಧ್ಯಕ್ಷರಾಗಿ ಏಐಸಿಸಿ ಯಿಂದ ನಿಯುಕ್ತಿಗೊಂಡಿರುವ ಪದ್ಮರಾಜ್ ಆರ್ ಪೂಜಾರಿ ಯವರಿಗೆ ಸ್ವಾಗತ ಸಮಾರಂಭ ದ ಸ್ನೇಹ ಕೂಟ ಮಂಗಳೂರು ಬೆಂದೂರ್ ವೆಲ್ ನಲ್ಲಿರುವ ಸೈoಟ್ ಸೆಬಾಶ್ಚಿಯನ್ ಹಾಲ್ ನಲ್ಲಿ ಜರಗಿತು.
ಸಮಾರಂಭ ದಲ್ಲಿ ಭಾಗವಹಿಸಿದ್ದ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ನೂತನ ಅಧ್ಯಕ್ಷ ರನ್ನು ಅಭಿನಂದಿಸಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಭವಾನಿ ಶಂಕರ ಕಲ್ಮಡ್ಕ, ಮಾಜಿ ಜಿಲ್ಲಾ ಪರಿಷತ್ ಸದಸ್ಯ ದೇವಪ್ಪ ನಾಯ್ಕ್, ಅಲೆಟ್ಟಿ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಸತ್ಯ ಕುಮಾರ್ ಆಡಿoಜ, ಪಂಚಾಯತ್ ರಾಜ್ ಅಧ್ಯಕ್ಷ ಜಯಪ್ರಕಾಶ್ ನೆಕ್ರಪ್ಪಾಡಿ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮಾಸ್ಟರ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಪವಾಜ್ ಕನಕಮಜಲು, ಬ್ಲಾಕ್ ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್,ವಿಷ್ಣು ಪ್ರಸಾದ್ ನೆಡ್ಚಿಲ್, ರಜನೀಶ್ ಹೊನ್ನೇಡಿ,ಅಬ್ದುಲ್ ಮಜೀದ್ ನಡುವಡ್ಕ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.













