







ಪುತ್ತೂರು: ಕಳೆದ 15 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ಪಾಲ್ತಾಡು ವಿಷ್ಣುನಗರ ಶ್ರೀ ವಿಷ್ಣು ಮಿತ್ರವೃಂದದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಸರ್ವಾನುಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಳೆದ ಅವಧಿಯ ಸೇವಾ ಕಾರ್ಯಗಳ ವರದಿ ಮಂಡಿಸಿ, ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.



ನೂತನ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಯುವಜನರನ್ನು ಒಗ್ಗೂಡಿಸಿ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪ ಮಾಡಿದರು.ನೂತನ ಅಧ್ಯಕ್ಷರಾಗಿ ಯುವ ಮುಂದಾಳು ಲೋಕೇಶ್ ಪಾಲ್ತಾಡು,ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಮಣಿಯಾಣಿ,ಕೋಶಾಧಿಕಾರಿಯಾಗಿ ಮಧು ಕುಮಾರ್ ಪಾಲ್ತಾಡು ಅವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಗಣೇಶ್ ಕೆ.,ಮನೀಶ್ ಕುಮಾರ್,ಉಮೇಶ್.ಕೆ,ನವೀನ .ಕೆ,ಪವನ್ ರೈ ನೆಲ್ಯಾಜೆ,ತುಕಾರಾಮ .ಬಿ,ಮಹೇಶ್ ಕುಮಾರ್, ಸಂತೋಷ್. ಸಿ.ವಿ,ಉಮೇಶ್ನಾ ಯ್ಕ,ಮರುವೇಲು,ಪುರುಷೋತ್ತಮ. ಕೆ.,ಶಿವಪ್ರಸಾದ್ .ಕೆ ,ರವಿ .ಕೆ,ತೇಜಸ್.ಪಿ,ಶ್ರೀ ಕುಮಾರ್ ಎಮ್,ಸೀತಾರಾಮ .ಪಿ,ರೂಪಿತ್ ರೈ ಮಣಿಕ್ಕಾರ, ಗಣೇಶ್ ಕುಮಾರ್ .ಕೆ, ಸುಜನ್ ರೈ ಮಣಿಕ್ಕಾರ,ಶೈಲೇಶ್ ರೈ ಮಣಿಕ್ಕಾರ,ದೀಕ್ಷಿತ್ ರೈ ನೆಲ್ಯಾಜೆ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಿತ್ರವೃಂದದ ಅಧ್ಯಕ್ಷ ದೇವಿಪ್ರಸಾದ್ ಕೆ.,ಪ್ರಧಾನ ಕಾರ್ಯದರ್ಶಿ ನವೀನ್ ನಾಯ್ಕ ಕಾಪುತಕಾಡು, ಮಾಜಿ ಅಧ್ಯಕ್ಷರಾದ ರಘುನಾಥ, ಪುರಂದರ ಕೆ.,ಸುಂದರ ಹಾಗೂ ಸದಸ್ಯರು ಉಪಸ್ಥಿತರಿದ್ದರು.










