04-07-2025
ಮರೀಲ್ ದಿ ಪುತ್ತೂರು ಕ್ಲಬ್‌ನಲ್ಲಿ ಸಂಜೆ ೬.೩೦ರಿಂದ ರೋಟರಿ ಕ್ಲಬ್ ಪುತ್ತೂರು ನೂತನ ಪದಾಧಿಕಾರಿಗಳ ಪದ ಪ್ರದಾನ
ಪುತ್ತೂರು ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಸಂಜೆ ೪ರಿಂದ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ವತಿಯಿಂದ ಯಕ್ಷಗಾನ ತಾಳಮದ್ದಳೆ-ಕೃಷ್ಣಾರ್ಜುನ ಕಾಳಗ
ಪುತ್ತೂರು ಭಾರತ್ ಸಿನೆಮಾಸ್‌ನಲ್ಲಿ ‘ಜಂಗಲ್ ಮಂಗಲ್ ಸಿನಿಮಾ ತೆರೆಗೆ
ಬೆಟ್ಟಂಪಾಡಿ ಗ್ರಾ.ಪಂ ಕಚೇರಿಯ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ಕ್ಕೆ ಚಾರ್ವಾಕ ಪ್ರಾ.ಕೃ,ಪ.ಸ. ಸಂಘದ ವಾರ್ಷಿಕ ಮಹಾಸಭೆ, ೧೧.೩೦ಕ್ಕೆ ಶತ ಸಂಭ್ರಮ, ಸ್ಮರಣ ಸಂಚಿಕೆ ಬಿಡುಗಡೆ
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಕೇಂದ್ರ ಕಚೇರಿಯ ಸಂಗಮ ಕೃಪಾ ಸಭಾಭವನದಲ್ಲಿ ಸಂಜೆ ೫.೩೦ರಿಂದ ಯೋಗ ತರಬೇತಿ ಶಿಬಿರ
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಭಜನಾ ಸಂಕೀರ್ತನೆ, ೭ರಿಂದ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನ ದಾನ, ಶ್ರೀಗುರು ಪೂಜೆ, ಬಾಲಭೋಜನ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ೧೧.೩೦ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಶ್ರೀ ಲಕ್ಷ್ಮೀಪೂಜೆ, ಮಹಾಪೂಜೆ
ವೈಕುಂಠ ಸಮಾರಾಧನೆ
ಕಾಣಿಯೂರು ಗ್ರಾಮ ಬೆದ್ರಂಗಳ ಮನೆಯಲ್ಲಿ ಸರೋಜಿನಿಯವರ ವೈಕುಂಠ ಸಮಾರಾಧನೆ