ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 12ನೇ ವರ್ಷದ ವೈಭವದ ವಿದ್ಯಾ ಗಣಪತಿ ಉತ್ಸವ

0

ಪುತ್ತೂರು: ನಗರದ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 12ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಸೆ.14ರ ಸೋಮವಾರ ಶಿವನಾರಾಯಣ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಿದ್ಧಿದಾತ್ರಿ ಮಹಿಳಾ ಭಜನಾ ತಂಡ ಇರ್ದೆ ಉಪ್ಪಳಿಗೆಯ ಕುಣಿತ ಭಜನೆಯನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್ ಪಿ.ವಿ. ಮತ್ತು ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ದೀಪ ಬೆಳಗಿಸಿ ಉದ್ಘಾಟಿಸಿದರು. ಉಪನ್ಯಾಸಕಿಯರಾದ ಮಾಧವಿ, ಹರ್ಷಿತಾ, ಮಧುಶ್ರೀ, ಶೃತಿ, ಸುಷ್ಮಾ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಉಪನ್ಯಾಸಕಿ ಮಧುಶ್ರೀ ಹಾಗೂ ವಿದ್ಯಾರ್ಥಿನಿಯರಾದ ಶಾರ್ವರಿ, ತ್ರಿಶಾ ಅವರಿಂದ ಭರತನಾಟ್ಯ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಘನಶ್ಯಾಮ್, ಸುಶಾಂತ್ ಅವರಿಂದ ತಬಲಾ ಮತ್ತು ಕೊಳಲು ವಾದ್ಯ ಪ್ರದರ್ಶನ ನಡೆಯಿತು. ರಣಮಂಗಲ ಶ್ರೀ ಸುಬ್ರಹ್ಮಣೇಶ್ವರ ಮಕ್ಕಳ ಕುಣಿತ ಭಜನಾ ತಂಡ ಪಾಣಾಜೆಯ ಸುಮಾರು 30 ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಎಲ್ಲ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಜನಾ ತಂಡಗಳ ತರಬೇತುದಾರ ನಿಡ್ಪಳ್ಳಿ ಪಟ್ಟೆ ಕೊಯಿಲ ಇರ್ದೆ ಅವರನ್ನು ಸನ್ಮಾನಿಸಲಾಯಿತು.

ವೈಭವದ ಶೋಭಾಯಾತ್ರೆ:
ರಣಮಂಗಲ ಸುಬ್ರಹ್ಮಣೇಶ್ವರ ಮಕ್ಕಳ ಕುಣಿತ ಭಜನಾ ತಂಡ, ಮಂಗಿಲಪದವಿನ ಚಕ್ರವರ್ತಿ ತಂಡ ಕಿಶನ್ ಬಳಗದ ನಾಸಿಕ್ ಬ್ಯಾಂಡ್, ಆಕರ್ಷಕ ಗೊಂಬೆಗಳ ನೃತ್ಯ, ವಿದ್ಯಾರ್ಥಿ ಸಮೂಹ ಪಾಲ್ಗೊಂಡಿದ್ದರು. ಶೋಭಾಯಾತ್ರೆಯು ಧರ್ಮಸ್ಥಳ ಬಿಲ್ಡಿಂಗ್‌ನಿಂದ ಮುಖ್ಯರಸ್ತೆ, ಬಿಡುಗಡೆ ಕಚೇರಿ, ಬಸ್ ನಿಲ್ದಾಣ, ಸಂಜೀವಶೆಟ್ಟಿ ಟೆಕ್ಸ್‌ಟೈಲ್ಸ್, ಹೋಟೆಲ್ ಹರಿಪ್ರಸಾದ್, ಮಹಾಲಿಂಗೇಶ್ವರ ರಥಬೀದಿ ಮೂಲಕ ಸಾಗಿ ದೇವಸ್ಥಾನದ ಮೂರುಗದ್ದೆ ಕೆರೆಯಲ್ಲಿ ವಿಗ್ರಹ ಜಲಸ್ತಂಭನಗೊಂಡಿತು.

ಕಾರ್ಯಕ್ರಮದಲ್ಲಿ ಸಂಚಾಲಕ ಗೋಕುಲ್‌ನಾಥ್ ಪಿ.ವಿ., ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್, ಡಾ. ಮೇಘ ಗೋಕುಲ್, ಅಕ್ಷಯ್ ಕುಮಾರ್, ಆಯುಷ್ಯ ಅಕ್ಷಯ್, ಲಲನ ಗೋಪಿನಾಥ್, ನವೀನ್ ಕುಮಾರ್, ವಿಜೇತ ನವೀನ್, ಅರುಣ್ ಪುತ್ತಿಲ, ವಿಗ್ರಹ ತಯಾರಕ ತಾರನಾಥ್ ಆಚಾರ್ಯ, ಪತ್ನಿ ರಜನಿ ಆಚಾರ್ಯ, ಮಗ ಮನೋಜ್ಞ ಟಿ, ತೀಯ ಸಮಾಜ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ದೃಷ್ಟಿಹೀನರಾಗಿದ್ದರೂ ಕಲಾತಂಡ ಕಟ್ಟಿದ ಶಿವಮನೆ ಕಲಾಸಂಘದ ಮನುಕುಮಾರ್ ಮತ್ತು ತಂಡದವರು, ಉಪನ್ಯಾಸಕವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here