







ಸವಣೂರು: ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಅಂತರ್ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ನಲ್ಲಿ ಪ್ರತಿನಿಧಿಸಿದ್ದ ಪುಷ್ಪಾವತಿ ಕೇಕುಡೆ, ಸವಣೂರು ಅವರು ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ, 400ಮೀ ಓಟದಲ್ಲಿ ಬೆಳ್ಳಿ ಪದಕ 800ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.


ಸವಣೂರು ಗ್ರಾಮದ ಆನಂದ ಕೇಕುಡೆ ಅವರ ಪತ್ನಿ.ಇವರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ), ಪುತ್ತೂರು, ಇದರ ಉಪಾಧ್ಯಕ್ಷರಾಗಿ, ತಾಲೂಕು ಬಿಲ್ಲವ ಮಹಿಳಾ ವೇದಿಕೆ ಪುತ್ತೂರು ಇದರ ಅಧ್ಯಕ್ಷರಾಗಿ, ಸವಣೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷರಾಗಿ ಮತ್ತು ಆದರ್ಶ ಸ್ತ್ರೀಶಕ್ತಿ ಗೊಂಚಲು ಸವಣೂರು ಇದರ ಪ್ರತಿನಿಧಿಯಾಗಿ ಹಾಗೂ ಇತರ ಹಲವು ಸಂಘ ಸಂಸ್ಥೆಗಳಲ್ಲಿದ್ದು ಸಕ್ರೀಯರಾಗಿದ್ದಾರೆ.



ಇವರು ಪತಿ, ಮಕ್ಕಳಾದ ಅಸ್ಮಿತ್ ಎ ಕೆ, ಹರ್ಷಿತ್ ಎ ಕೆ ಯವರೊಂದಿಗೆ ಇವರು ಸವಣೂರು ಕೇಕುಡೆಯಲ್ಲಿ ವಾಸವಾಗಿದ್ದಾರೆ.










