ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಪ್ರಧಾನ ಕಚೇರಿ : ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಏಳ್ಮುಡಿ ಭಟ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಪುತ್ತೂರು, ಕಡಬ, ಸುಳ್ಯ, ಮಂಗಳೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕು ವ್ಯಾಪ್ತಿಗೊಳಪಟ್ಟ ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರಿ ಸಂಘದ ಮುಖ್ಯಕಚೇರಿ ಗ್ರಾಹಕರ ಹಾಗೂ ಸದಸ್ಯರ ಅನುಕೂಲತೆಗಾಗಿ ಎಪಿಎಂಸಿ ರಸ್ತೆಯಲ್ಲಿರುವ ಲಿಲ್ಲಿ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಗೆ ಸ್ಥಳಾಂತರಗೊಂಡು ಸೆ.25ರಂದು ಶುಭಾರಂಭಗೊಂಡು ನೂತನ ಕಾರ್ಯಾಲಯದ ಪ್ರವೇಶ ನಡೆಯಿತು.


ಬೆಳಿಗ್ಗೆ ಗಣಪತಿ ಹೋಮ ಹಾಗೂ ಲಕ್ಷ್ಮೀ ಪೂಜೆಯೊಂದಿಗೆ ಕಚೇರಿಯ ಶುಭಾರಂಭ ನಡೆಯಿತು. ಗೋಪಾಲಕೃಷ್ಣ ತಂತ್ರಿ ಮಡಂತ್ಯಾರು ದೀಪ ಪ್ರಜ್ವಲನೆ ನೆರವೇರಿಸಿ ಶುಭಹಾರೈಸಿದರು. ಅ.1ರಿಂದ ಕಚೇರಿಯ ಎಲ್ಲಾ ಅಧಿಕೃತ ಕೆಲಸಗಳು ನೂತನ ಕಾರ್ಯಾಲಯದಲ್ಲಿ ನಡೆಯಲಿದೆ.


ಸಂಘದ ಅಧ್ಯಕ್ಷ ಇ.ಎಸ್.ವಾಸುದೇವ ಇಡ್ಯಾಡಿರವರು ಅತಿಥಿಗಳನ್ನು ಸತ್ಕರಿಸಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಡಿ. ಚೆನ್ನಪ್ಪ ಗೌಡ, ಕಾರ್ಯದರ್ಶಿ ಶ್ರೀದೇವಿ ಹಾಗೂ ನಿರ್ದೇಶಕರುಗಳಾದ ಚಂದ್ರಹಾಸ ರೈ ಕೆ., ಕೆ. ಗಣೇಶ್ ಹೆಗ್ಡೆ, ಟಿ. ಸುಂದರ ನಾಯ್ಕ, ಕೇಶವ ಸುವರ್ಣ ಪಿ., ಜಗದೀಶ್ ಶೆಟ್ಟಿ, ಪಿ. ರವೀಂದ್ರನಾಥ್ ಕಲ್ಲೂರಾಯ, ಮಹಾವೀರ್ ಜೈನ್, ಹರ್ಷೇಂದ್ರ ಕುಮಾರ್ ಜೈನ್, ರಾಮ ಆಚಾರ್ಯ, ರಾಜು ಹೊಸಮಠ, ಫಾತಿಮಾ, ಲತಾ ಆನಂದರವರು ಉಪಸ್ಥಿತರಿದ್ದರು. ವಿವಿಧ ಗಣ್ಯರು ಆಗಮಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here