ವಿಟ್ಲ: ಶಾಲಾ ಮಕ್ಕಳ ನಡುವೆ ಹೊಡೆದಾಟ – ಓರ್ವ ವಿದ್ಯಾರ್ಥಿ ಡಿಬಾರ್

0

ವಿಟ್ಲ: ವಿದ್ಯಾರ್ಥಿಗಳ ತಂಡವೊಂದು ದಾಳಿ ನಡೆಸಿ ಓರ್ವ ಗಾಯಗೊಂಡ ಘಟನೆ ವಿಟ್ಲ ಖಾಸಗೀ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಗ್ಗೆ  ವರದಿಯಾಗಿದೆ.

ಕೆಲಿಂಜ ಮೂಲದ ಶಾಲಾ ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಹಲ್ಲೆನಡೆಸಿದ ತಂಡದ ಮುಖ್ಯಸ್ಥ ವಿದ್ಯಾರ್ಥಿಯನ್ನು ಶಾಲೆಯಿಂದ ಡಿಬಾರ್ ಮಾಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.

ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ಕೆಲವು ವಿದ್ಯಾರ್ಥಿಗಳನ್ನು ಭಯಗೊಳಿಸುವ ಕಾರ್ಯ ಫೆ.12ರಂದು ಅತಿರೇಕಕ್ಕೆ ಹೋಗಿ ಓರ್ವ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ.  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯವರು ಓರ್ವ ವಿದ್ಯಾರ್ಥಿಯನ್ನು ಡಿಬಾರ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here