`ವಿ ಕೇರ್ ಹೆಲ್ತ್ ಕಾರ್ಡ್’ ಬಿಡುಗಡೆ

0
  •  ಗ್ರಾಮೀಣ ಭಾಗದ ಜನರಿಗೆ `ವಿ-ಕೇರ್ ಹೆಲ್ತ್ ಕಾರ್ಡ್’ ; ಲ್ಯಾಬ್ ಪರೀಕ್ಷೆಗಳಿಗೆ ಇಲ್ಲಿ ಲಭಿಸಲಿದೆ
  • ಭರಪೂರ ರಿಯಾಯಿತಿ! ಜ ಜನತೆಯ ಆರೋಗ್ಯ ರಕ್ಷಣೆಗೆ ವರದಾನವಾಗಲಿದೆ `ವಿಕೇರ್ ಹೆಲ್ತ್ ಕಾರ್ಡ್’

ಪುತ್ತೂರು : ಆರೋಗ್ಯದ ರಕ್ಷಣೆಗೆ ವರದಾನವೆಂಬಂತೆ ‘ವಿ ಕೇರ್’ ಲ್ಯಾಬೊರೇಟರಿಯು ಪರಿಚಯಿಸುತ್ತಿರುವ ಬಹುಪಯೋಗಿ ಹೆಲ್ತ್ ಕಾರ್ಡ್ ಮಾ. ೧೭ರಂದು ಬಿಡುಗಡೆಗೊಂಡಿತು. ಈ ವಿಶಿಷ್ಟ ಹೆಲ್ತ್ ಕಾರ್ಡನ್ನು ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ತಾಲೂಕು ಆರೋಗ್ಯಾಽಕಾರಿ ಡಾ. ದೀಪಕ್ ರೈ, ಸುದಾನ ವಸತಿಯುತ ಶಾಲಾ ಸಂಚಾಲಕ ರೆ| ವಿಜಯ ಹಾರ್ವಿನ್, ಚೇತನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜೆ.ಸಿ ಅಡಿಗ, ಸರಕಾರಿ ಸಾರ್ವಜನಿಕ ಆಸ್ಪತೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ಬಿಡುಗಡೆಗೊಳಿಸಿದರು.

ವಿ ಕೇರ್ ಹೆಲ್ತ್ ಕಾರ್ಡನ್ನು ಎಲ್ಲಾ ಅತಿಥಿಗಳು ಸೇರಿ ಬಿಡುಗಡೆಗೊಳಿಸಿದರು.

ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ ಮಾತನಾಡಿ, ಇಂದಿನ ಆಧುನಿಕ ಜೀವನ ಶೈಲಿಯ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು ಇದಕ್ಕೆ ‘ವಿ ಕೇರ್’ ಆರೋಗ್ಯ ಕಾರ್ಡ್ ಖಂಡಿತವಾಗಿಯೂ ಉಪಯುಕ್ತವಾಗಲಿದೆ ಎಂದು ಹೇಳಿದರು.

ಚೇತನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜೆ.ಸಿ ಅಡಿಗ ಮಾತನಾಡಿ, ಲ್ಯಾಬೊರೇಟರಿ ಪರೀಕ್ಷೆಗಳಲ್ಲಿ ರಿಯಾಯಿತಿ ನೀಡುವ ಈ ವಿಶಿಷ್ಟ ಕಾರ್ಡ್ ಒಂದು ಹೊಸ ಪ್ರಯತ್ನವಾಗಿದ್ದು ಬಹುಷಃ ಈ ಪ್ರಯತ್ನ ಲ್ಯಾಬೊರೇಟರಿ ಕ್ಷೇತ್ರದಲ್ಲೇ ಪ್ರಥಮ ಎಂದರೆ ತಪ್ಪಾಗಲಾರದು. ವೈದ್ಯಕೀಯ ಕ್ಷೇತ್ರದಲ್ಲಿ ಲ್ಯಾಬೊರೇಟರಿ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಯಾವುದೇ ಕಾಯಿಲೆಯ ತಪಾಸಣೆ ಅತೀ ಮುಖ್ಯವಾಗಿದ್ದು ಇದರಲ್ಲಿ ಲ್ಯಾಬೊರೇಟರಿಗಳ ಪಾತ್ರ ಪ್ರಮುಖವಾಗಿದೆ ಎಂದರು.

ತಾಲೂಕು ಆರೋಗ್ಯಾಽಕಾರಿ ಡಾ.ದೀಪಕ್ ರೈ ಮಾತನಾಡಿ ಸರಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೇರಿ ಇತ್ತೀಚಿನ ದಿನಗಳಲ್ಲಿ ‘ವೆಲ್ ನೆಸ್’ ಸೆಂಟರ್ ನ ಪಾತ್ರವನ್ನು ವಹಿಸುತ್ತಿರುವ ಈ ಕಾಲಘಟ್ಟದಲ್ಲಿ ಈ ವ್ಯವಸ್ಥೆಗೆ ಪೂರಕವಾಗಿ ಇಂತಹ ಖಾಸಗಿ ಲ್ಯಾಬೊರೇಟರಿಗಳು ಜನಸ್ನೇಹಿಯಾಗಿ ತಮ್ಮ ಸೇವೆಯನ್ನು ನೀಡಲು ಮುಂದೆ ಬರುತ್ತಿರುವುದು ಪ್ರಶಂಸಾರ್ಹ ವಿಚಾರ ಎಂದು ಹೇಳಿ ಸಂಸ್ಥೆಯ ಈ ಪ್ರಯತ್ನಕ್ಕೆ ಶುಭ ಹಾರೈಸಿದರು.

ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಮಾತನಾಡಿ, ವಿಕೇರ್ ಲ್ಯಾಬೊರೇಟರಿ ಸಂಸ್ಥೆಯ ಈ ವಿಶೇಷ ಪ್ರಯತ್ನಕ್ಕೆ ಅಭಿನಂದನೆಗಳನ್ನು ಸಲ್ಲಿಸಿ, ಲ್ಯಾಬೊರೇಟರಿಗಳಲ್ಲಿ ಈ ರೀತಿಯ ಹೆಲ್ತ್ ಕಾರ್ಡ್ ಬಿಡುಗಡೆಗೊಳಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು. ಆಯುಷ್ಮಾನ್ ಭಾರತ್ ಅಡಿಯಲ್ಲಿ ಡಿಜಿಟಲ್ ಹೆಲ್ತ್ ಕಾರ್ಡ್ ಮೂಲಕ ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸುವ ಕ್ಯಾಂಪನ್ನು ಮುಂದಿನ ದಿನಗಳಲ್ಲಿ ಇಲ್ಲಿ ನಡೆಸುವಂತೆ ವಿದ್ಯಾ ಆರ್ ಗೌರಿ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.

ಸುದಾನ ವಸತಿಯುತ ಶಾಲಾ ಸಂಚಾಲಕ ರೆ| ವಿಜಯ ಹಾರ್ವಿನ್ ಮಾತನಾಡಿ, ಈ ಹೆಲ್ತ್ ಕಾರ್ಡ್ ಸೇವೆ ಜನಸ್ನೇಹಿ, ರೋಗಿ ಸ್ನೇಹಿ ಹಾಗೂ ಅಸಹಾಯಕರ ಸ್ನೇಹಿಯಾಗಿ ಮೂಡಿಬಂದಿರುವುದು ಖುಷಿಯ ವಿಚಾರ ಎಂದು ಹೇಳಿದರು. ಈ ಹೆಲ್ತ್ ಕಾರ್ಡ್ ಸೇವೆಯಿಂದ ಸಮಾಜದಲ್ಲಿರುವ ತೀರಾ ಬಡವರ್ಗದ ಮತ್ತು ಕುಟುಂಬದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ವ್ಯಕ್ತಿಗಳ ಪಾಲಿಗೆ ಆಶಾಕಿರಣವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸಾರ್ವಜನಿಕ ಸರಕಾರಿ ಆಸ್ಪತೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ಮಾತನಾಡಿ ಪುತ್ತೂರು ಪಟ್ಟಣವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಉತ್ತಮ ಮಟ್ಟದ ಲ್ಯಾಬೊರೇಟರಿ ಸೇವೆಗಳನ್ನು ಹೆಲ್ತ್ ಕಾರ್ಡ್ ಮೂಲಕ ನೀಡುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.

 


ಸುದ್ದಿ ಜನಾಂದೋಲನದ ಫಲಕ ಸ್ವೀಕಾರ

ಸುದ್ದಿ ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ವಿಕೇರ್ ಲ್ಯಾಬೊರೇಟರಿಯ `ಹೆಲ್ತ್ ಕಾರ್ಡ್’ ಬಿಡುಗಡೆ ಕಾರ್ಯಕ್ರಮದಲ್ಲಿ ಬೆಂಬಲ ಸೂಚಿಸಲಾಯಿತು. ಭ್ರಷ್ಟಾಚಾರಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ -ಲಕವನ್ನು ಸುದ್ದಿ ಜನಾಂದೋಲನ ವೇದಿಕೆಯ ರೂವಾರಿ ಡಾ. ಯು.ಪಿ. ಶಿವಾನಂದ ಅವರಿಂದ ಪಡೆದುಕೊಂಡ ಸಂಸ್ಥೆಯ ಮಾಲಕ ನವಾಝ್ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ತಾಲೂಕು ಆರೋಗ್ಯಾಽಕಾರಿ ಡಾ. ದೀಪಕ್ ರೈ, ಸುದಾನ ವಸತಿಯುತ ಶಾಲಾ ಸಂಚಾಲಕ ರೆ| ವಿಜಯ ಹಾರ್ವಿನ್, ಚೇತನಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜೆ.ಸಿ ಅಡಿಗ, ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಳತ್ತಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಅಹಮ್ಮದ್ ಕೆ.ಪಿ., ಸುದ್ದಿ ಬಿಡುಗಡೆಯ ಹಿರಿಯ ಏಜೆಂಟ್ ದಾವೂದ್ ವಿನಾಯಕ ನಗರ ಕೋಡಿಂಬಾಡಿ, ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್, ಎಲೈಟ್ ಕನ್ಟ್ರಕ್ಷನ್ ಮಾಲಕ ಶಾಹಿಲ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ನವಾಝ್ ಸ್ವಾಗತಿಸಿ ಸಂಸ್ಥೆಯಲ್ಲಿ ಲಭ್ಯವಿರುವ ಸೇವೆಗಳು ಮತ್ತು ಹೆಲ್ತ್ ಕಾರ್ಡ್ ಪ್ರಯೋಜನಗಳ ಮಾಹಿತಿಯನ್ನು ನೀಡಿದರು. ಸಿನಾನ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here