ಉಪ್ಪಿನಂಗಡಿ ಸಹಕಾರಿ ವ್ಯವಸಾಯ ಸಂಘಕ್ಕೆ 75ರ ಸಂಭ್ರಮ-ಪೂರ್ವಭಾವಿ ಸಭೆ

0
  • ಸಹಕಾರಿ ತತ್ವದ ಅಡಿಯಲ್ಲಿ ಹಲೆ ಬೇರು ಹೊಸ ಚಿಗುರು ಒಂದಾಗಿ ಕಾರ್‍ಯಕ್ರಮ ಯಶಸ್ವಿಗೊಇಸಬೇಕು-ಮಠಂದೂರು

 


ಉಪ್ಪಿನಂಗಡಿ: ಸಹಕಾರಿ ಸಂಘ 75 ವರ್ಷಗಲ ಸಂಭ್ರಮ ಆಚರಣೆಯ ಈ ಸಂದರ್ಭದಲ್ಲಿ ಈ ಸಹಕಾರಿ ಸಂಘದಲ್ಲಿ ತೊಡಗಿಸಿಕೊಂಡಿದ್ದ ಹಿರಿಯರನ್ನು ಒಲಗೊಂಡಂತೆ ಈಗಿನ ಹೊಸ ಯುವ ಪೀಲಿಗೆಯನ್ನು ಸೇರಿಸಿಕೊಂಡು ಹಲೆ ಬೇರು ಹೊಸ ಚಿಗುರು ಒಂದಾಗುವ ರೀತಿಯಲ್ಲಿ ೭೫ರ ಸಂಭ್ರಮದ ಅಮೃತ ಮಹೊತ್ಸವವನ್ನು ಯಶಸ್ವಿಗೊಇಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 

ಅವರು ಎ. ೪ರಂದು ಇಲ್ಲಿನ ಸಹಕಾರಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ 75ರ ಸಂಭ್ರಮ ಆಚರಣೆ ನಡೆಸುವ ಕುರಿತಂತೆ ಕರೆದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಂಘವು ಹುಟ್ಟಿಕೊಂಡ ರೀತಿ ಒಗ್ಗಟ್ಟಿನ ಪ್ರತೀಕ. ಎಲ್ಲ ವರ್ಗದ ಜನರೊಂದಿಗೆ ಅದರಲ್ಲೂ ಈ ಸಂಸ್ಥೆ ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಗಡಿ ಗ್ರಾಮಗಳ ರೈತಾಪಿ ವರ್ಗದ ಜನರನ್ನು ಹೊಂದಿಕೊಂಡು ನಿಂತಿದೆ. ಹೀಗಿರುವಾಗ ಸುವರ್ಣ ಮಹೋತ್ಸವ ಆಚರಣೆ ವರ್ಷ ಪೂರ್ಣವಾಗಿ ಆಚರಿಸುದರ ಜೊತೆಗೆ ವಿವಿಧ ಗ್ರಾಮಗಳಲ್ಲಿ ಇದ್ದ ಐದು ಶಾಖೆಗಳಲ್ಲಿಯು ಕಾರ್‍ಯಕ್ರಮಗಳನ್ನು ಆಯೋಜಿಸಿ ಎಲ್ಲರನ್ನೂ ಇದರಲ್ಲಿ ಸಹಭಾಗಿಗಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಅಲ್ಲದೆ ಸಂಘದ ಸದಸ್ಯರಿಗೆ ಸಹಕಾರಿಯಾಗುವಲ್ಲಿ ಆರೋಗ್ಯ ತಪಾಸಣಾ ಶಿಬಿರ, ಕೃಷಿಗೆ ಸಂಬಂಧಿಸಿದ ವಿಚಾರ ಸಂಕೀರ್ಣ ಆಧುನಿಕ ಯಂತ್ರೋಪಕರಣಗಳ ಮೂಲಕ ಕೃಷಿ ಕಾರ್‍ಯ ಸುಲಭ ರೀತಿಯಲ್ಲಿ ಉಪಯೋಗಿಸುವಲ್ಲಿ ಪ್ರದರ್ಶನ ಹಾಗೂ ತರಬೇತಿಯೊಂದಿಗೆ ಬಳಕೆಯ ಮನವರಿಕೆ ಮಾಡುವಲ್ಲಿ ಮಹತ್ವದ ಮಾಹಿತಿಯೊಂದಿಗೆ ಆಕರ್ಷಿಸುವಲ್ಲಿ ಪ್ರಯತ್ನಿಸಿ ಎಂದರು.

ಸಂಘದ ಅಧ್ಯಕ್ಷರಾದ ಕೆ.ವಿ. ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಅಮೃತ ಮಹೊತ್ಸವ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ಕೆ.ಜಿ. ಭಟ್, ಪೆಲಪ್ಪಾರು ವೆಂಕಟರಮಣ ಭಟ್, ತಾಲ್ತಜೆ ಚಂದ್ರಶೇಖರ ಭಟ್ ಮಾತನಾಡಿ ಸಲಹೆ ಸೂಚನೆ ನೀಡಿದರು.

ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಕಾಶ್ ರೈ, ಮಾಜಿ ನಿರ್ದೇಶಕರಾದ ರಾಮಚಂದ್ರ ಮಣಿಯಾಣಿ, ಧರ್ಣಪ್ಪ ನಾಯ್ಕ, ಅಜೀಜ್ ಬಸ್ತಿಕಾರ್, ಹಾಲಿ ನಿರ್ದೇಶಕರಾದ ಸುಜಾತ ರೈ, ಯಶವಂತ ಗೌಡ, ಜಗದೀಶ ರಾವ್, ಮಾಜಿ ಕಾರ್‍ಯ ನಿರ್ವಹಣಾಧಿಕಾರಿ ಎನ್. ಗೋಪಾಲ ಹೆಗ್ಡೆ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಸದಸ್ಯರಾದ ಸುರೇಶ ಅತ್ರಮಜಲು, ಸಣ್ಣಣ್ಣ, ಲೋಕೇಶ್ ಬೆತ್ತೋಡಿ, ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ನಿತಿನ್, ಇಳಂತಿಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಿಕಾ ಭಟ್, ಉಪಾಧ್ಯಕ್ಷರಾದ ಸುಪ್ರಿತ್, ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ, ಸದಸ್ಯರಾದ ಮಾಧವ ಪೂಜಾರಿ, ಗಂಗಾಧರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಜಯಂತ ಪೊರೋಳಿ, ತಾ.ಪಂ. ಮಾಜಿ ಸದಸ್ಯರಾದ ಉಮೇಶ್ ಶೆಣೈ, ಮುಕುಂದ ಗೌಡ, ಪ್ರಮುಖರಾದ ಗಣರಾಜ ಕುಂಬ್ಳೆ, ಸದಾನಂದ ಕಾರ್ ಕ್ಲಬ್, ದಿವಾಕರ ಪೂಜಾರಿ, ವಿಜಯ ಕುಮಾರ್ ಕಲ್ಲಳಿಗೆ, ಡಾ. ಗೋವಿಂದ ಪ್ರಸಾದ್ ಕಜೆ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರಿ ಸಂಘದ ಮುಖ್ಯ ನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ಸ್ವಾಗತಿಸಿ, ಉಪಾಧ್ಯಕ್ಷ ಸುನಿಲ್ ದಡ್ಡು ವಂದಿಸಿದರು. ಪುಷ್ಪರಾಜ ಶೆಟ್ಟಿ ಹಾಗೂ ಪ್ರವೀಣ ಆಳ್ವ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here