ಶಾಲಾ ನಾಯಕಿಯಾಗಿ ಲಿತಿಕಾ, ಉಪನಾಯಕನಾಗಿ ಪ್ರಥಮ್ ಕೆ. ಆಯ್ಕೆ
ವಿಟ್ಲ: ಓಜಾಲ ಹಿ.ಪ್ರಾ ಶಾಲಾ 2024-25 ನೇ ಸಾಲಿನ ನೂತನ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕಿಯಾಗಿ ಏಳನೇ ತರಗತಿಯ ಲಿತಿಕಾ ಹಾಗೂ ಉಪನಾಯಕನಾಗಿ ಏಳನೇ ತರಗತಿಯ ಪ್ರಥಮ್.ಕೆ ಆಯ್ಕೆಯಾದರು.

ಉಳಿದಂತೆ ಶಿಕ್ಷಣ ಮಂತ್ರಿಯಾಗಿ ಆಕಾಶ್ ಎನ್, ಉಪ ಶಿಕ್ಷಣ ಮಂತ್ರಿಯಾಗಿ ಧನ್ವಿತ್, ಆರೋಗ್ಯ ಮಂತ್ರಿಯಾಗಿ ಮುಹಮ್ಮದ್ ಸ್ವಫ್ವಾನ್, ಉಪ ಆರೋಗ್ಯ ಮಂತ್ರಿಯಾಗಿ ವಿಜಿತ್ ಕುಮಾರ್, ಆಹಾರ ಮಂತ್ರಿಯಾಗಿ ಕೆ ಹರ್ಷಿತ್, ಉಪ ಆಹಾರ ಮಂತ್ರಿಯಾಗಿ ಪುನೀತ್ ಯು, ಕ್ರೀಡಾ ಮಂತ್ರಿಯಾಗಿ ಮುಹಮ್ಮದ್ ಅಶ್ಫಕ್, ಉಪ ಕ್ರೀಡಾ ಮಂತ್ರಿ ಆಗಿ ವರುಣ್, ಗೃಹ ಮಂತ್ರಿಯಾಗಿ ಹೃಷಿಕ, ಉಪ ಗೃಹಮಂತ್ರಿಯಾಗಿ ಲಿಪಿಕ, ನೀರಾವರಿ ಮಂತ್ರಿಯಾಗಿ ತ್ರಿಷ್ಯ, ವಾರ್ತಾ ಮಂತ್ರಿಯಾಗಿ ಫಾತಿಮತ್ ಶಿಫಾನ, ಉಪ ವಾರ್ತಾ ಮಂತ್ರಿಯಾಗಿ ಗ್ರೀಷ್ಮ, ಸ್ವಚ್ಛತಾ ಮಂತ್ರಿಯಾಗಿ ಫಾತಿಮಾತ್ ಮನ್ಸೂರ, ಉಪ ಸ್ವಚ್ಛತಾ ಮಂತ್ರಿಯಾಗಿ ತನ್ವಿ ಪಿ.ಕೆ , ಗ್ರಂಥಾಲಯ ಮಂತ್ರಿಯಾಗಿ ಗನ್ಯ, ಉಪ ಗ್ರಂಥಾಲಯ ಮಂತ್ರಿಯಾಗಿ ಲತೀಶ್, ತೋಟಗಾರಿಕಾ ಮಂತ್ರಿಯಾಗಿ ಮನೀಷ್, ಉಪ ತೋಟಗಾರಿಕಾ ಮಂತ್ರಿಯಾಗಿ ಲಿತೀಶ್ ಪಿ.ಟಿ, ವಿರೋಧ ಪಕ್ಷದ ನಾಯಕನಾಗಿ ಮುಹಮ್ಮದ್ ಆಫೀಲ್, ವಿರೋಧ ಪಕ್ಷದ ಉಪನಾಯಕನಾಗಿ ದ್ಯುತೀಶ್.ಕೆ ಯವರನ್ನು ಆಯ್ಕೆ ಮಾಡಲಾಯಿತು. ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ ಯವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾ ಅಧಿಕಾರಿಗಳಾಗಿ ಕುಶಲ ಕುಮಾರಿ, ಜೆಸಿಂತಾ ಲೋಬೊ, ಹರ್ಷಿತ, ರೇಖಾ, ವಿಲ್ಮಾ ಸಿಕ್ವೇರಾ, ನೇತ್ರಾವತಿ ಎಸ್, ಚಂದ್ರಕಲಾ, ನವ್ಯಶ್ರೀ ಸಹಕರಿಸಿದರು.