ನರಿಮೊಗರು ಶಾಲೆಗೆ ಸಿ.ಸಿ ಕ್ಯಾಮರಾ ಕೊಡುಗೆ ನೀಡಿದ ಲೋಕಪ್ಪ ಗೌಡ ದಂಪತಿಗಳಿಗೆ ಸನ್ಮಾನ: ನಮ್ಮೂರ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸದಾ ಸಿದ್ದ-ನಳಿನಿ ಲೋಕಪ್ಪ ಗೌಡ

0

ಪುತ್ತೂರು: ನರಿಮೊಗರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ, ಪೋಷಕರ ಸಭೆ, ಸಿ.ಸಿ ಕ್ಯಾಮರಾ ಉದ್ಘಾಟನೆ ಹಾಗೂ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ಎ.೯ರಂದು ನಡೆಯಿತು. ಶಾಲೆಗೆ ನಳಿನಿ ಲೋಕಪ್ಪ ಗೌಡ ಹಾಗೂ ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಲೋಕಪ್ಪ ಗೌಡ ದಂಪತಿ 6೦೦೦೦ ರೂ. ಮೌಲ್ಯದ ಸಿ.ಸಿ ಕ್ಯಾಮರಾಗಳನ್ನು ಕೊಡುಗೆಯಾಗಿ ನೀಡಿದ್ದು ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ನಳಿನಿ ಲೋಕಪ್ಪ ಗೌಡ ಮಾತನಾಡಿ ಇದು ನಮ್ಮ ಶಾಲೆ, ಶಾಲೆಯ ಅಭಿವೃದ್ಧಿಗೆ ನಾವು ಸದಾ ಸಿದ್ಧ. ಶಾಲೆಯ ೮ನೇ ತರಗತಿಯ ಮೇಲ್ಛಾವಣಿಯಿಂದ ಮಳೆಯ ನೀರು ಸೊರುತ್ತಿದ್ದು ಅದನ್ನು ಶಾಲಾ ಪ್ರಾರಂಭ ದಿನದಳೊಗೆ ದುರಸ್ತಿ ಮಾಡಿಸಿ ಕೊಡುವುದಾಗಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣರಾಜ ಜೈನ್ ಮಾತನಾಡಿ ಶಾಲೆಗೆ ಸಿಸಿ ಕ್ಯಾಮರಾ ಕೊಡುಗೆ ನೀಡಿದ ಲೋಕಪ್ಪ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಗ್ರಾ.ಪಂ ಸದಸ್ಯ ಉಮೇಶ್ ಪುರುಷ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರತಿಭಾ ಆಚಾರ್ಯ, ಸದಸ್ಯರಾದ ಪ್ರವೀಣ್ ಆಚಾರ್ಯ, ಗಣೇಶ ಕೆ, ವಿವೇಕಾನಂದ ಭಟ್, ಸೌಮ್ಯ, ಗುಲಾಬಿ, ಶಶಿಕಲಾ, ಶಾಲಾ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿಸೋಜಾ ಹಾಗೂ ಅಧ್ಯಾಪಕ ವೃಂದದವರು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here