ಎ.16: ಸುಳ್ಯಪದವು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ” ಕಾರ್ಯಕ್ರಮ

0

ಬಡಗನ್ನೂರುಃ ದಕ್ಷಿಣ ಕನ್ನಡ. ಜಿಲ್ಲಾಡಳಿತ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪುತ್ತೂರು ತಾಲೂಕು ಪತ್ರಕರ್ತರ ಸಂಘ, ಬಡಗನ್ನೂರು ಗ್ರಾ.ಪಂ, ಸರ್ವೋದಯ ವಿದ್ಯಾಸಂಸ್ಥೆಗಳು ಸುಳ್ಯಪದವು ಇವುಗಳ ಸಂಯುಕ್ತ ಆಶ್ರಯದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ”

“ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ” ಕಾರ್ಯಕ್ರಮ ಎ.16 ರಂದು ಪುರ್ವಾಹ್ನ ಗಂ 9 ರಿಂದ ಸರ್ಪೋದಯ ಪ್ರೌಢ ಶಾಲಾ ವಠಾರದಲ್ಲಿ ನಡೆಯಲಿರುವುದು.
ಕಾರ್ಯಕ್ರಮವನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಉದ್ಘಾಟನೆ ಮಾಡಲಿದ್ದಾರೆ. ದ.ಕ ಜಿಲ್ಲಾ ಐ.ಎ.ಎಸ್ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ  ಆರೋಗ್ಯ ಶಿಬಿರ ಉದ್ಘಾಟನೆ ಮಾಡಲ್ಲಿದ್ದಾರೆ.
ದ.ಕ.ಜಿಲ್ಲಾ ಪಂಚಾಯತ್  ಐ .ಎ.ಎಸ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ/ಕುಮಾರ್  ನರೇಗಾ ಮಾಹಿತಿ ಕೇಂದ್ರ ಉದ್ಘಾಟನೆ ಮಾಡಲ್ಲಿದ್ದಾರೆ,  ಮುಖ್ಯ ಅತಿಥಿಗಳಾಗಿ,  ಬೆಂಗಳೂರು ಕರ್ನಾಟಕ ಮಾಧ್ಯಮ ಆಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ  ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ತಗಡುರು, ಏಷ್ಯನ್ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನ ಗೌಡ, ಕರ್ನಾಟಕ  ನಿರತ ಪತ್ರಕರ್ತರ ಸಂಘದ ಮಾಜಿ ಕಾರ್ಯಕಾರಿ ಸಮಿತಿಯ ಸದಸ್ಯ ರವಿಕುಮಾರ್ ಟೆಲೆಕ್ಸ್, ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯರಾದ  ಜಗನ್ನಾಥ ಶೆಟ್ಟಿ ಬಾಳ,  ಬದ್ರುದ್ಧೀನ್ ಮಾಣಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಸುಳ್ಯಪದವು ಸರ್ವೋದಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಟಿ.ಶಿವರಾಮ ಭಾಗವಹಿಸಲ್ಲಿದ್ದಾರೆ.
ಕಾರ್ಯಕ್ರಮ
ಪೂರ್ವಾಹ್ನ 11ರಿಂದ 1 ರ ತನಕ  ದ.ಕ ಜಿಲ್ಲಾಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕರ ಮತ್ತು ಸಂವಾದ ಕಾರ್ಯಕ್ರಮ. ಅಪರಾಹ್ನ 1ರಿಂದ 2.30 ಸಾಂಸ್ಕೃತಿಕ ಕಾರ್ಯಕ್ರಮ, /ಊಟದ ವಿರಾಮ, ಅಂತರಾಷ್ಟ್ರೀಯ ಖ್ಯತಿಯ ಜಾದುಗಾರ ಕುದ್ರೋಳಿ ಗಣೇಶ್ ರವರಿಂದ  ಮ್ಯಾಜಿಕ್ ಕಾರ್ಯಕ್ರಮ, ಅಪರಾಹ್ನ 2.30 ರಿಂದ 3.30 ರ ತನಕ ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮ, 3.30 ರಿಂದ  4 ರತನಕ  ಸಮಾರೋಪ. ಸಂಜೆ 4 ರಿಂದ 6 ರ ತನಕ ಪತ್ರಕರ್ತರಿಂದ ಗ್ರಾಮ ಭೇಟಿ, 6 ರಿಂದ  8ರ ತನಕ ಗ್ರಾಮದ ಹಿರಿಯರ ಸಂವಾದ ಚಾವಾಡಿ ಚರ್ಚೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here