ಮುಂಡೂರು: ಗ್ರಾಮದಲ್ಲಿ ತ್ಯಾಜ್ಯ ಸುರಿಯುತ್ತಿದ್ದವರನ್ನು ರೆಡ್ ಹ್ಯಾಂಡಾಗಿ ಹಿಡಿದ ಗ್ರಾಮ ಪಂಚಾಯತ್

0
  • ವಾಹನ ವಶಕ್ಕೆ ಪಡೆದು ರೂ.5000 ದಂಡ ವಿಧಿಸಿದ ಪಿಡಿಓ

ಪುತ್ತೂರು: ವಾಹನವೊಂದರಲ್ಲಿ ತ್ಯಾಜ್ಯಗಳನ್ನು ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾ.ಪಂ ಅಧಿಕಾರಿಗಳು ತ್ಯಾಜ್ಯ ಎಸೆಯಲು ಬಂದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಮುಂಡೂರು ಗ್ರಾ.ಪಂ ವ್ಯಾಪ್ತಿಯ ರೆನ್ಯ ಎಂಬಲ್ಲಿ ಎ.19ರಂದು ನಡೆದಿದೆ.

 

ರೆನ್ಯ ಎಂಬಲ್ಲಿ ಅಪರಿಚಿತ ವಾಹನವೊಂದರಲ್ಲಿ ಬಂದವರು ತ್ಯಾಜ್ಯ ಡಂಪಿಂಗ್ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮುಂಡೂರು ಗ್ರಾ.ಪಂ.ಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದಿದೆ. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಹಾಗೂ ಸದಸ್ಯ ಉಮೇಶ್ ಗೌಡ ಅಂಬಟ ಅವರೂ ಈ ವೇಳೆ ಸ್ಥಳಕ್ಕೆ ಆಗಮಿಸಿದ್ದರು. ತ್ಯಾಜ್ಯ ಸುರಿಯುತ್ತಿದ್ದ ತಂಡವನ್ನು ವಿಚಾರಿಸಿದಾಗ ಪುತ್ತೂರಿನಿಂದ ನಾವು ತ್ಯಾಜ್ಯ ತುಂಬಿಸಿಕೊಂಡು ಬಂದಿದ್ದು ಇಲ್ಲಿ ನಿರ್ಜನ ಪ್ರದೇಶ ಎಂಬ ಕಾರಣಕ್ಕೆ ಇಲ್ಲಿ ಸುರಿದು ಹೋಗಲು ನಿರ್ಧರಿಸಿದ್ದೆವು ಎಂದು ತಿಳಿಸಿದ್ದಾರೆ. ನಂತರ ವಾಹನವನ್ನು ವಶಕ್ಕೆ ಪಡೆದ ಪಿಡಿಓ ಅವರು ತ್ಯಾಜ್ಯ ಎಸೆಯಲು ಬಂದವರಿಗೆ ರೂ.5000 ದಂಡ ವಿಧಿಸಿ ಕಳುಹಿಸಿಕೊಟ್ಟಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here