ಉಪ್ಪಿನಂಗಡಿ ಸಹಕಾರಿ ಸಂಘದ ಅಮೃತ ಮಹೋತ್ಸವ ವಿಚಾರ ಗೋಷ್ಠಿ-2

0
  • ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ, ತರಬೇತಿ, ಪ್ರಗತಿಪರ ಕೃಷಿಕರಿಗೆ ಸನ್ಮಾನ

ಉಪ್ಪಿನಂಗಡಿ: ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಇದರ ಅಮೃತ ಮಹೋತ್ಸವ-2022 ಅಮೃತ ಸಂಗಮದ ವರ್ಷಪೂರ್ಣ ಕಾರ್‍ಯಕ್ರಮದ ಅಂಗವಾಗಿ ಕೃಷಿ ವಿಚಾರ ಗೋಷ್ಠಿ “ಅಡಿಕೆಗೆ ಔಷಧಿ ಸಿಂಪಡಣೆಯ ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ” ಮತ್ತು ಪ್ರಗತಿಪರ ಕೃಷಿಕರಿಗೆ ಸನ್ಮಾನ ಕಾರ್‍ಯಕ್ರಮ ಮೇ. 24ರಂದು ಹಿರೇಬಂಡಾಡಿ ಸಮುದಾಯ ಭವನದಲ್ಲಿ ಜರಗಿತು.

ಕಾರ್‍ಯಕ್ರಮವನ್ನು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಉಪಾಧ್ಯಕ್ಷ ಎನ್. ಉಮೇಶ್ ಶೆಣೈ ಉದ್ಘಾಟಿಸಿ ಮಾತನಾಡಿ ಸಂಸ್ಥೆಯ 75ರ ಸಂಭ್ರಮದ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಕಾರ್‍ಯಕ್ರಮ ಕೃಷಿಕರನ್ನು ಆಕರ್ಷಿಸುವ ಅರ್ಥಪೂರ್ಣವಾಗಿದೆ ಎಂದರು.

ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಮಾತನಾಡಿ ಸಹಕಾರಿ ಸಂಘದ ಕಾರ್‍ಯಕ್ರಮ ಎಲ್ಲರಿಗೂ ಪ್ರಯೋಜನ ಸಿಗುವಂತಾಗಲಿ, ಕೃಷಿಕರ ಸ್ವಾವಲಂಬಿ ಬದುಕಿಗೆ ಇಂತಹ ಕಾರ್‍ಯಕ್ರಮಗಳು ಪ್ರೇರಣೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ನಿರ್ದೇಶಕ ಕುಕ್ಕಪ್ಪ ಗೌಡ ಸರೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಕೃಷಿ ಕಾರ್ಮಿಕರ ಕೊರತೆ ಇದ್ದು, ಅಡಿಕೆ ತೆಗೆಯುವುದಕ್ಕೂ ಜನ ಸಿಗುವುದಿಲ್ಲ ಈ ನಿಟ್ಟಿನಲ್ಲಿ ಈ ಕಾರ್‍ಯಕ್ರಮ ಅರ್ಥಪೂರ್ಣವಾಗಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕಾರ್‍ಯಕ್ರಮವನ್ನು ಸಾರ್ಥಕಗೊಳಿಸಬೇಕಾಗಿದೆ ಎಂದರು.

ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ 75ನೇ ವರ್ಷದ ಸಂಭ್ರಮದಲ್ಲಿ ತಿಂಗಳಿಗೊಂದು ಕಾರ್‍ಯಕ್ರಮ ನಡೆಸುವ ಬಗ್ಗೆ ಯೋಜನೆ ರೂಪಿಸಲಾಗಿದೆ, ಸಂಘದ ವ್ಯಾಪ್ತಿಯಲ್ಲಿ ಬೇರೆ ಬೇರೆ ಗ್ರಾಮದಲ್ಲಿ ನಡೆಯುವ ಕಾರ್‍ಯಕ್ರಮದಲ್ಲಿ ಕೃಷಿಕರು ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತರಬೇತಿ ಮತ್ತು ಪ್ರಾತ್ಯಕ್ಷಿಕೆ:
ಕಾರ್ಬನ್ ಫೈಬರ್ ದೋಟಿಯಿಂದ ಔಷಧಿ ಸಿಂಪರಣೆ ಬಗ್ಗೆ ರಮೇಶ್ ಭಟ್ ಕೂಜಳ್ಳಿ, ಆರ್.ಜಿ. ಹೆಗಡೆ ಮೂರೂರು ಕಲ್ಲಬ್ಬೆ, ಕಾರ್ಬನ್ ಫೈಬರ್ ದೋಟಿಯ ಗುಣಮಟ್ಟದ ಬಗ್ಗೆ ಬಾಲಸುಬ್ರಹ್ಮಣ್ಯ ಹಾಸನ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.

ಸನ್ಮಾನ:
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ  ಜನಾರ್ದನ ಭಟ್ ಮತ್ತು  ಜಾನಕಿ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಹಮ್ಮಬ್ಬ ಸೌಕತ್ತಾಳಿ, ನಿತಿನ್, ನಾರಾಯಣ, ಸದಾನಂದ ಶೆಟ್ಟಿ, ಲಕ್ಷ್ಮೀಶ ನಿಡ್ಡೆಂಕಿ, ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಭಟ್, ಸಹಕಾರಿ ಸಂಘದ ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಂತ ಪೊರೋಳಿ, ನಮ್ಮೂರು ನೆಕ್ಕಿಲಾಡಿಯ ಜತೀಂದ್ರ ಶೆಟ್ಟಿ, ಸ್ಥಳೀಯ ಪ್ರಮುಖರಾದ ನಿತ್ಯಾನಂದ ಶೆಟ್ಟಿ, ಗೋಪಾಲಕೃಷ್ಣ ಭಟ್, ಮಹಾಲಿಂಗೇಶ್ವರ ಭಟ್, ಡಾ. ಸುಪ್ರೀತ್ ಲೋಬೋ, ವಿಶ್ವನಾಥ ಕಂಗ್ವೆ, ಜನಾರ್ದನ ಶಾಂತಿದಡ್ಡ ಮತ್ತಿತರರು ಉಪಸ್ಥಿತರಿದ್ದರು.

ದೀಕ್ಷಾರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್‍ಯಕ್ರಮದಲ್ಲಿ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ವಂದಿಸಿದರು. ಸಂಘದ ನಿರ್ದೇಶಕರಾದ ರಾಮ ನಾಯ್ಕ್, ಸುಜಾತ ರೈ, ಜಗದೀಶ ರಾವ್ ಮಣಿಕ್ಕರ, ದಯಾನಂದ ಸರೋಳಿ, ಮಾಜಿ ನಿರ್ದೇಶಕ ಅಜೀಜ್ ಬಸ್ತಿಕ್ಕಾರ್, ನಿವೃತ್ತ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಗೋಪಾಲ ಹೆಗ್ಡೆ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಪುಷ್ಪರಾಜ್ ಶೆಟ್ಟಿ, ರವೀಂದ್ರ ದರ್ಬೆ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here