ತುಡರ್ ಯುವಕ ಮಂಡಲದಿಂದ ವಿಶ್ವ ಯೋಗ ದಿನ ಆಚರಣೆ-ಸರಳ ಯೋಗಾಭ್ಯಾಸ

0

  • ಆರೋಗ್ಯ ಪೂರ್ಣ ಬದುಕಿಗೆ ಯೋಗ ಅಗತ್ಯ-ಚಂದ್ರಶೇಖರ

 

ಕಾವು: ಭಾರತ ಸರಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲ ನನ್ಯ ಕಾವು ಇದರ ವತಿಯಿಂದ ವಿಶ್ವ ಯೋಗ ದಿನ ಆಚರಣೆ ಹಾಗೂ ಸರಳ ಯೋಗಾಭ್ಯಾಸ ಕಾರ್ಯಕ್ರಮ ಜನಮಂಗಳ ಸಭಾಭವನದಲ್ಲಿ ಜೂ. 21 ರಂದು ನಡೆಯಿತು.

ಸರಳ ಯೋಗಾಭ್ಯಾಸ ನಡೆಸಿಕೊಟ್ಟ ವಿದ್ಯಾ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಯೋಗ ಶಿಕ್ಷಣ ಸಂಯೋಜಕರಾದ, ಚಂದ್ರಶೇಖರ ಮಾತನಾಡಿ ಯೋಗವು ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಾಡುವ ಜೊತೆಗೆ ಚಂಚಲ ಚಿತ್ತವನ್ನು ಏಕಾಗ್ರತೆಗೆ ತರಲು ಹಾಗೂ ಆರೋಗ್ಯ ಪೂರ್ಣ ಬದುಕಿಗೆ ಯೋಗ ಅಗತ್ಯವಾಗಿದ್ದು, ನೈತಿಕ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಈ ಸಮಾಜದ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುವಲ್ಲಿ ಯೋಗ ಮನೆ ಮನಗಳಲ್ಲಿ ಭದ್ರವಾಗಬೇಕು. ಭಾರತದ ಮಣ್ಣಿನಲ್ಲಿ ಹುಟ್ಟಿದ ಯೋಗವನ್ನು ಇಂದು ಪ್ರಪಂಚದ ನೂರಾರು ದೇಶಗಳಲ್ಲಿ ಅಭ್ಯಾಸ ಮಾಡಲಾಗುತ್ತಿದೆ,ಪ್ರಧಾನಿ ಮೋದಿಯವರ ಮುತುವರ್ಜಿ ಹಾಗೂ ವಿಶೇಷ ಪ್ರಯತ್ನದಿಂದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯುವಂತಾಗಿದೆ ಎಂದರು.


ಯುವಕ ಮಂಡಲದ ಹಿತೈಷಿಗಳಾದ ಚಂದ್ರಶೇಖರ ಪಾಟಾಲಿ ಪಟ್ಟುಮೂಲೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು, ಯುವಕ ಮಂಡಲದ ಅಧ್ಯಕ್ಷರಾದ ನವೀನ್ ನನ್ಯಪಟ್ಟಾಜೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು, ತುಡರ್ ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಪ್ರಾರ್ಥಿಸಿದರು, ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ವಂದಿಸಿದರು, ಯುವಕ ಮಂಡಲದ ಮಾಜಿ ಅಧ್ಯಕ್ಷ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.


ಕಾರ್ಯಕ್ರಮದಲ್ಲಿ ಯುವಕ ಮಂಡಲದ ಪದಾಧಿಕಾರಿಗಳಾದ ಸಂದೇಶ್ ಚಾಕೋಟೆ,ಶಿವಕುಮಾರ್ ಕಾವು,ಯಜಿತ್ ಆಚಾರಿಮೂಲೆ,ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ, ಚಂದ್ರಶೇಖರ ಬಲ್ಯಾಯ, ಸದಸ್ಯರಾದ ನಿರಂಜನ್ ಕಮಲಡ್ಕ, ಶ್ರೀಕುಮಾರ್ ಬಲ್ಯಾಯ,ಜಗದೀಶ್ ನಾಯ್ಕ ಅಚಾರಿಮೂಲೆ,ರಮೇಶ್ ಗೌಡ ಅಚಾರಿಮೂಲೆ, ತಿರುಮಲೇಶ್, ಹರೀಶ್ ಕೆರೆಮೂಲೆ, ಸಂಕಪ್ಪ ಪೂಜಾರಿ ಚಾಕೋಟೆ,ಹರ್ಷಿತ್ ಎ ಆರ್,ದಿವ್ಯಪ್ರಸಾದ್ ಎ ಎಂ,ಲಿಂಗಪ್ಪ ನಾಯ್ಕ, ಯೋಗೀಶ್ ಗೌಡ ಕಾವು, ಅದ್ವಿಕ್ ಬಲ್ಯಾಯ, ರಶ್ಮಿತ್ ಅಚಾರಿಮೂಲೆ, ಯಶ್ ಮದ್ಲ,ಗೌತಮ್ ನನ್ಯ,ಅವ್ಯಯ್ ,ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here