ಬಾಲಕ-ಬಾಲಕಿಯರ ಪ್ರಥಮ ಜೂನಿಯರ್ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್ ;ಅಕ್ಷಯ ಕಾಲೇಜು ರನ್ನರ್ಸ್, ದೇವಿಕಾ ಎಸ್ ಚಾಂಪಿಯನ್

0

ಪುತ್ತೂರು: ಜೂನ್ 25 ಮತ್ತು 26ರಂದು ಸಂತ ಫ್ರಾನ್ಸಿಸ್ ಕಾಲೇಜು, ಕೋರಮಂಗಲ, ಬೆಂಗಳೂರು ಇಲ್ಲಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಶನ್ ಮತ್ತು ಕರ್ನಾಟಕ ರಾಜ್ಯ ಡಾಡ್ಜ್ ಬಾಲ್ ಅಸೋಸಿಯೇಶನ್ ವತಿಯಿಂದ ನಡೆದ ಬಾಲಕ-ಬಾಲಕಿಯರ ಪ್ರಥಮ ಜೂನಿಯರ್ ಡಾಡ್ಜ್ ಬಾಲ್ ಚಾಂಪಿಯನ್‌ಶಿಪ್-2022 ಸ್ಪರ್ಧೆಯಲ್ಲಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ವಿದ್ಯಾರ್ಥಿನಿ ಕು|ದೇವಿಕಾ ಎಸ್.ರವರು ರಾಜ್ಯ ತಂಡವನ್ನು ಪ್ರತಿನಿಧಿಸಿ, ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ.


ಹಾಗೆಯೇ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ ಅಕ್ಷಯ ಕಾಲೇಜಿನ ಬಾಲಕಿಯರ ತಂಡ ಫೈನಲ್‌ನಲ್ಲಿ ತುಮಕೂರು ತಂಡದೊಡನೆ ಸ್ಪರ್ಧಿಸಿ ’ರನ್ನರ್ ಅಪ್’ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ. ಮಂಗಳೂರಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವಿಜೇತ್ ಕುಮಾರ್ ಇವರ ತರಬೇತಿ ಪಟ್ಟೆ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ಮೋನಪ ಪಟ್ಟ್ಪೆರವರ ಮಾರ್ಗದರ್ಶನದೊಂದಿಗೆ ಕಾಲೇಜಿನ ತಂಡ ಭಾಗವಹಿಸಿತ್ತು. ಕಾಲೇಜಿನ ಇಂಟೀರಿಯರ್ ಡಿಸೈನ್ ಉಪನ್ಯಾಸಕ ರಕ್ಷಣಾ ಟಿ.ಆರ್ ತಂಡದ ನೇತೃತ್ವ ವಹಿಸಿದ್ದರು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು, ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ.

LEAVE A REPLY

Please enter your comment!
Please enter your name here