ಅಂತಾರಾಷ್ಟ್ರೀಯ ಒಲಿಂಪಿಯಾಡ್‌ನಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ವಿಶೇಷ ಸಾಧನೆ

0

ಪುತ್ತೂರು: 2021-22ನೆ ಸಾಲಿನ ಅಂತಾರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಧನೆಗಳನ್ನು ಮಾಡಿದ್ದಾರೆ.

೮ನೇ ತರಗತಿಯಚಿನ್ಮಯಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತುಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಅವರುಅಂತಾರಾಷ್ಟ್ರೀಯಇಂಗ್ಲೀಷ್, ಸಾಮಾನ್ಯಜ್ಞಾನ, ಗಣಿತ, ಸಮಾಜಅಧ್ಯಯನ ಹಾಗೂ ರಾಷ್ಟ್ರೀಯ ವಿಜ್ಞಾನಒಲಿಂಪಿಯಾಡ್ ಪರೀಕ್ಷೆಗಳಲ್ಲಿ 3 ಚಿನ್ನ, 2 ಬೆಳ್ಳಿಯ ಪದಕಗಳನ್ನು ಪಡೆದಿದ್ದುಅಂತಾರಾಷ್ಟ್ರೀಯ ಮಟ್ಟದಲ್ಲಿಗಳಿಸಿರುವ ಅತ್ಯುತ್ತಮರ್‍ಯಾಂಕ್‌ಗಾಗಿ ನೀಡಲ್ಪಡುವ ವಿಶೇಷ ಬಹುಮಾನಗಿಫ್ಟ್ ವೋಚರ್ ಮತ್ತುಅಕಾಡೆಮಿಕ್‌ಎಕ್ಸ್‌ಲೆನ್ಸಿ ಅವಾರ್ಡ್‌ಗಳನ್ನು ಪಡೆದಿರುತ್ತಾರೆ.

5ನೇ ತರಗತಿಯ ನೇಶ ಕಾವ್ಯ ಮುಗೇರ್(ರಮೇಶ್ ಮುಗೇರ್‌ರಾವ್ ಮತ್ತುಕೃಪಾರಾಣಿ.ಎಸ್ ದಂಪತಿಗಳ ಪುತ್ರಿ), 3ನೇ ತರಗತಿಯ ಶಶಾಂಕ್.ಟಿ.ಆರ್(ಟಿ.ಎಸ್.ರಘುರಾಮ ಮತ್ತು ದೀಪ್ತಿ.ಆರ್.ಭಟ್ ದಂಪತಿಗಳ ಪುತ್ರ), 7ನೇ ತರಗತಿಯಯತಿನ್ ಬಿ.ಎಸ್(ಶೇಷಪ್ಪಗೌಡ.ಎಚ್ ಮತ್ತು ಹೇಮಾವತಿ.ಜಿ ದಂಪತಿಗಳ ಪುತ್ರಿ), 2ನೇ ತರಗತಿಯತನ್ವಿ.ಎಲ್(ಡಾ.ಕೃಷ್ಣಪ್ರಸಾದ್ ಮತ್ತು ಡಾ.ಅಮೃತಪ್ರಸಾದ್ ದಂಪತಿಗಳ ಪುತ್ರಿ) ಇವರುಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್‌ಗಳನ್ನು ಪಡೆದಿರುತ್ತಾರೆ.

ಕಳೆದ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಾದ ಆತ್ಮೀಯ.ಎಂ.ಕಶ್ಯಪ್, ಶಿವಚೇತನ್ ಹಳಮನಿ, ಅಭೀಜ್ಞ.ಆರ್, ರಾಮಮೋಹನ ಮತ್ತು ಪಂಕಜ್ ಭಟ್‌ಇವರುಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನ, ಬೆಳ್ಳಿ ಹಾಗೂ ಗಿಫ್ಟ್ ವೋಚರ್‌ಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here