ಪುತ್ತೂರು :ಯುವಜನರಲ್ಲಿ ನಾಯಕತ್ವ, ಅರ್ಥಿಕ ಚಟುವಟಿಕೆ, ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಯುವಕ ಯುವತಿ ಮಂಡಲಗಳಲ್ಲಿನ ಯುವಜನರ ಬೆಳವಣಿಗೆಗೆ ಇಲಾಖೆ ನೆರವಾಗಲಿದ್ದು ಪುತ್ತೂರು ತಾಲೂಕಿನ ಎಲ್ಲಾ ಯುವಕ ಯುವತಿ ಮಂಡಲಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಯುವಕ ಯುವತಿ ಮಂಡಲದ ಹೆಸರು ನೊಂದಾಯಿಸಲು ಸೂಚಿಸಿದೆ. ರಿಜಿಸ್ಟ್ರಾರ್ ಆಗಿರುವ ಮತ್ತು ಆಗದೇ ಇರುವ ಯುವಕ ಯುವತಿ ಮಂಡಲಗಳು ನೊಂದಾವಣೆ ಮಾಡಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಬಿರಾವು ತಿಳಿಸಿದ್ದಾರೆ. ಯುವಕ ಯುವತಿ ಮಂಡಲಗಳು ತಮ್ಮ ಯುವಕ ಯುವತಿ ಮಂಡಲದ ಹೆಸರು, ವಿಳಾಸ, ಸದಸ್ಯರ ಸಂಖ್ಯೆ, ಅಧ್ಯಕ್ಷರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು 9164502107 ಈ ನಂಬರಿಗೆ ಕಳುಹಿಸಿಕೊಡಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಸಂಪರ್ಕಿಸಬಹುದು.