ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜರಗಲಿರುವ ಮಿಲಿಯನ್ ಡಾಲರ್ ಗ್ಲೋಬಲ್ ಕಾನ್ಫರೆನ್ಸ್‌ಗೆ ಪದ್ಮಶ್ರೀ ಗ್ರೂಪ್‌ನ ಆಡಳಿತ ಪಾಲುದಾರ ರತ್ನಾಕರ್ ರೈ ಪ್ರವಾಸ

0
  • ಆ.24ರಿಂದ 15 ದಿನಗಳ ವಿದೇಶಿ ಪ್ರವಾಸ | ಸತತ ಎಂಟನೇ ಬಾರಿ

ಪುತ್ತೂರು: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ 2022, ಆಗಸ್ಟ್ 24 ರಿಂದ ಜರಗಲಿರುವ ಮಿಲಿಯನ್ ಡಾಲರ್ ಗ್ಲೋಬಲ್ ಕಾನ್ಫರೆನ್ಸ್ಗೆ ತಿಂಗಳಾಡಿ ಪದ್ಮಶ್ರೀ ಗ್ರೂಪ್‌ನ ಆಡಳಿತ ಪಾಲುದಾರರಾದ ಶ್ರೀಧರ್ ರೈ ಕೆದಂಬಾಡಿಗುತ್ತು ಹಾಗೂ ಪದ್ಮಾವತಿ ಎಸ್.ರೈಯವರ ಪುತ್ರ ಕೆದಂಬಾಡಿಗುತ್ತು ರತ್ನಾಕರ್ ರೈರವರು 15 ದಿನಗಳ ವಿದೇಶಿ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

ಸತತ ಎಂಡಿಆರ್‌ಟಿ:
ಜೀವ ವಿಮಾ ನಿಗಮದ ಪ್ರತಿನಿಧಿಯಾಗಿದ್ದು, ಪುತ್ತೂರಿನ ಜೀವವಿಮಾ ವ್ಯವಹಾರ ಕ್ಷೇತ್ರದಲ್ಲಿ ಸತತ 12 ಬಾರಿ ಎಂಡಿಆರ್‌ಟಿ ಆಗಿ, ಮೂರು ಬಾರಿ ಸಿಒಟಿ(ರ‍್ಟ್ ಆಫ್ ದಿ ಟೇಬಲ್)ಆಗಿ ಆಯ್ಕೆಯಾಗಿದ್ದ ರತ್ನಾಕರ್ ರೈಯವರು ಈ ವಿಶಿಷ್ಟ ಸಾಧನೆಯೊಂದಿಗೆ ಜೀವವಿಮಾ ನಿಗಮದ ಅತ್ಯಂತ ಪ್ರತಿಷ್ಠಿತ ರ‍್ಪೋರೇಟ್ ಕ್ಲಬ್‌ನ ಸದಸ್ಯತ್ಯವನ್ನು ಈ ಹಿಂದೆ ಪಡೆದಿದ್ದರು. 20 ರ‍್ಷಗಳಿಂದ ವಿಮಾ ವ್ಯವಹಾರ ಮಾಡಿಕೊಂಡು ಮುಖ್ಯ ವಿಮಾ ಸಲಹೆಗಾರರಾಗಿದ್ದು ಮಾತ್ರವಲ್ಲದೆ 18ಕ್ಕಿಂತಲೂ ಹೆಚ್ಚು ಸೂಪರ್‌ವೈಸ್ಡ್ ಏಜೆಂಟರನ್ನು ನೇಮಕ ಮಾಡಿಕೊಂಡು ಬರುವ ಮೂಲಕ ರತ್ನಾಕರ್ ರೈಯವರು `ಡೈಮಂಡ್ ಆಂಡ್ ಗೋಲ್ಡ್ ಬ್ರಿಗೇಡ್‌ಶಿಪ್’ಗೆ ರ‍್ಹತೆ ಪಡೆದವರಾಗಿದ್ದಾರೆ.

8ನೇ ಬಾರಿ ವಿದೇಶಿ ಪ್ರವಾಸ:
ರತ್ನಾಕರ್ ರೈಯವರು ಈಗಾಗಲೇ ಆಮೇರಿಕಾದ ಕ್ಯಾಲಿರ‍್ನಿಯಾ, ಫಿಲಡೆಲ್ಫಿಯಾದ ಪೆನ್ವಿಲ್ವೇನಿಯಾ, ನ್ಯೂ ರ‍್ಲೆನ್‌ನ ಲೂಸಿಯಾನ, ಪ್ಲೋರಿಡಾದ ರ‍್ಲಾಂಡೋ, ಲಾಸ್ ಏಂಜಲಿಸ್ ಹಾಗೂ ಕೆನಡಾದ ಟೊರೊಂಟೋದ ಒನ್‌ಟರಿಯೋದಲ್ಲಿ ನಡೆದ ವರ್ಲ್ಡ್ ಇನ್ಸೂರೆನ್ಸ್ ಕಾನ್ಫರೆನ್ಸ್‌ ನಲ್ಲಿ  ಭಾಗವಹಿಸಿದ್ದು, ಕಳೆದ 2019ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಗ್ಲೋಬಲ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು. ಈ ಬಾರಿ ಎಂಟನೇ ಬಾರಿ ರತ್ನಾಕರ್ ರೈಯವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಕಾನ್ಫರೆನ್ಸ್‌ ನಲ್ಲಿ ಭಾಗಿಯಾಗುತ್ತಿದ್ದಾರೆ. ಮಾತ್ರವಲ್ಲದೆ ಸತತ 12ಕ್ಕಿಂತಲೂ ಹೆಚ್ಚು ಬಾರಿ ಎಂಡಿಆರ್‌ಟಿಯಾಗಿ ಮಿಲಿಯನ್ ಡಾಲರ್ ಕಾನ್ಫರೆನ್ಸ್‌ ನಲ್ಲಿ  ಭಾಗವಹಿಸಿ ಇದೀಗ ಎಂಡಿಆರ್‌ಟಿ ಲೈಫ್ ಮೆಂಬರ್ ಆಗಿ ಹೊರ ಹೊಮ್ಮಿದ್ದಾರೆ.

ನಿರ್ವಹಿಸಿದ ಜವಾಬ್ದಾರಿಗಳು:
ತಿಂಗಳಾಡಿ ಪದ್ಮಶ್ರೀ ಗ್ರೂಪ್‌ನ ಆಡಳಿತ ಪಾಲುದಾರರಾಗಿರುವ ರತ್ನಾಕರ್ ರೈ ಕೆದಂಬಾಡಿಗುತ್ತುರವರು ರೋಟರ್‍ಯಾಕ್ಟ್ ಕ್ಲಬ್ ತಿಂಗಳಾಡಿ ಇದರ ಸ್ಥಾಪಕ ಅಧ್ಯಕ್ಷರಾಗಿ ಕ್ಲಬ್‌ನ ಏಳಿಗೆಗೆ ಶ್ರಮಿಸಿದ್ದಾರೆ. ತನ್ನ ನಾಯಕತ್ವ ಗುಣದಿಂದ ರೋಟರಿ ಕ್ಲಬ್ ಪುತ್ತೂರು ರ‍್ವದ ಪ್ರಾಯೋಜಿತ ಸಂಸ್ಥೆಯಾಗಿರುವ ರೋಟರಿ ಕ್ಲಬ್ ಪುತ್ತೂರು ಯುವ ಇದರ ಸ್ಥಾಪಕ ಅಧ್ಯಕ್ಷ(ರ‍್ಟರ್ ಅಧ್ಯಕ್ಷ)ರಾಗಿ ಅನೇಕ ಸಮಾಜಮುಖಿ ರ‍್ಯಕ್ರಮಗಳನ್ನು ರ‍್ವಹಿಸುತ್ತಾ ಜನಮೆಚ್ಚುಗೆಯನ್ನು ಪಡೆದವರಾಗಿದ್ದಾರೆ. ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ವಿದಯಾರ್ಥಿ ಸಂಘದ ಅಧ್ಯಕ್ಷರಾಗಿ ವಿದ್ಯಾಸಂಸ್ಥೆಯನ್ನು ಪ್ರತಿನಿಧಿಸಿದ ಅನುಭವ ರತ್ನಾಕರ್ ರೈರವರಿಗೆದೆ. ರೋಟರಿ ಜಿಲ್ಲಾ 3181, ವಲಯ ಐದರ ವಲಯ ಸೇನಾನಿಯಾಗಿ ರೋಟರಿ ಕ್ಲಬ್‌ನ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, 2020-21ನೇ ಸಾಲಿನ ರೋಟರಿ ಜಿಲ್ಲೆ 3181, ವಲಯ 5 ಇದರ ಅಸಿಸ್ಟೆಂಟ್ ಗವರ್ನರ್ ಆಗಿ ಪ್ರಸ್ತುತ ರ‍್ಷ ರೋಟರ್‍ಯಾಕ್ಟ್ ಜಿಲ್ಲಾ ಸಭಾಪತಿ(ಡಿಆರ್‌ಸಿಸಿ)ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ರತ್ನಾಕರ್ ರೈಯವರು ಪತ್ನಿ ಜೀವವಿಮಾ ಪ್ರತಿನಿಧಿ ಹಾಗೂ ಮೂರು ಬಾರಿ ಎಂಡಿಆರ್‌ಟಿಯಾಗಿರುವ ಪ್ರೀತಿ ರತ್ನಾಕರ್ ರೈ, ಪುತ್ರ ಮೂರು ರ‍್ಷ ಪ್ರಾಯದ ಯುವನ್ ರೈಯವರೊಂದಿಗೆ ವಾಸವಾಗಿದ್ದಾರೆ.

ರತ್ನಾಕರ್ ರೈ ಸಾಧನೆಗಳು….
-2018ರ ಎಂಡಿಆರ್‌ಟಿಗೆ ರ‍್ಹತೆ ಪಡೆದ ರ‍್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮೊದಲಿಗರು.
-ಒಂದೇ ದಿನದಲ್ಲಿ ಎಂಡಿಆರ್‌ಟಿ ವ್ಯವಹಾರ `ಒನ್ ಡೇ ಎಂಡಿಆರ್‌ಟಿ’ ಮಾಡಿ ರ‍್ಹತೆ ಪಡೆದವರು.
-ಒಂದೇ ಪಾಲಿಸಿಯಲ್ಲಿ ಎಂಡಿಆರ್‌ಟಿ ಮಾಡಿ `ಒನ್ ಪಾಲಿಸಿ ಎಂಡಿಆರ್‌ಟಿ’ ಪ್ರಶಸ್ತಿಗೆ ಭಾಜನರಾದವರು.

LEAVE A REPLY

Please enter your comment!
Please enter your name here