ನೆಲ್ಯಾಡಿ: ಉಚಿತ ನೇತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ

0

ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ, ಶ್ರೀರಾಮ ಗ್ರಾಮ ವಿಕಾಸ ಸಮಿತಿ ನೆಲ್ಯಾಡಿ ಮತ್ತು ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಘಟಕದ ಆಶ್ರಯದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇವುಗಳ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇವರ ವತಿಯಿಂದ ಉಚಿತ ಕನ್ನಡ ವಿತರಣಾ ಶಿಬಿರ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ನಡೆಯಿತು.

ಶಿಬಿರವನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ, ಶ್ರೀರಾಮ ವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷರೂ ಆದ ಡಾ.ಮುರಳಿಧರರವರು ಉದ್ಘಾಟಿಸಿ ಮಾತನಾಡಿ, ಕಣ್ಣು ಪಂಚೇಂದ್ರಿಯಗಳಲ್ಲಿ ಅತ್ಯಂತ ಪ್ರಾಮುಖ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಕಣ್ಣಿನ ತೊಂದರೆಯಿಂದ ಬಳಲುತ್ತಿರುವವರು ಬಹಳಷ್ಟು ಜನ ಇದ್ದಾರೆ. ಈ ಶಿಬಿರ ಎಲ್ಲರಿಗೂ ಉಪಯುಕ್ತವಾಗಲಿ ಎಂದರು. ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಘಟಕದ ಅಧ್ಯಕ್ಷ ಆರ್.ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಶಾಂತರಾಜ್, ಜಿಲ್ಲಾ ನೇತ್ರಾಧಿಕಾರಿ ಡಾ.ಅನಿಲ್ ರಾಮಾನುಜಂ, ವೆನ್ಲಾಕ್ ಆಸ್ಪತ್ರೆಯ ಪದ್ಮಾವತಿ, ಜ್ಯೋತಿಷಿ ಶ್ರೀಧರ ಗೋರೆಯವರು ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀರಾಮ ವಿದ್ಯಾಲಯದ ಮುಖ್ಯಗುರು ಗಣೇಶ್ ವಾಗ್ಲೆ, ಸೀನಿಯರ್ ಛೇಂಬರ್ ನೆಲ್ಯಾಡಿ ಘಟಕದ ನಿಕಟಪೂರ್ವಾಧ್ಯಕ್ಷ ಡಾ.ಸದಾನಂದ ಕುಂದರ್, ನೇತ್ರಾಧಿಕಾರಿ ಶಶಿಕುಮಾರ್, ಶ್ರೀರಾಮ ವಿದ್ಯಾಲಯದ ನಿಕಟಪೂರ್ವ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ಶ್ರೀರಾಮ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಕೊಲ್ಯೊಟ್ಟು, ಶಿಬಿರದ ಸಂಘಟಕ ಗಂಗಾಧರ ಶೆಟ್ಟಿ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಯಾನಂದ ಬಂಟ್ರಿಯಾಲ್ ಜೇಸಿವಾಣಿ ವಾಚಿಸಿದರು. ಗಂಗಾಧರ ಶೆಟ್ಟಿ ಹೊಸಮನೆ ವಂದಿಸಿದರು. ಶಿಬಿರದಲ್ಲಿ ಸುಮಾರು ೧೫೦ ಮಂದಿ ತಪಾಸಣೆ ಮಾಡಿಸಿದರು. ಆನಂದಾಶ್ರಮದ ಮೂಲಕ ೧೦೦ ಕನ್ನಡಕಗಳನ್ನು ವಿತರಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ಟಿ., ನಿವೃತ್ತ ಶಿಕ್ಷಕ ವಿ.ಆರ್.ಹೆಗಡೆ, ನೆಲ್ಯಾಡಿ ಜೆಸಿಐನ ಪೂರ್ವಾಧ್ಯಕ್ಷ ಮೋಹನ್‌ಕುಮಾರ್ ದೋಂತಿಲ, ಶ್ರೀರಾಮ ವಿದ್ಯಾಲಯದ ಶಿಕ್ಷಕಿಯರು, ಶ್ರೀರಾಮ ಗ್ರಾಮ ವಿಕಾಸ ಸಮಿತಿಯ ಪದಾಧಿಕಾರಿಗಳು, ಶಾಲೆಯ ಆಡಳಿತ ಸಮಿತಿಯ ಸದಸ್ಯರು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸನ್ಮಾನ:

ಕಳೆದ 25 ವರ್ಷಗಳಿಂದ ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳ ಮೂಲಕ ಸುಮಾರು ೧.೫೦ ಲಕ್ಷಕ್ಕೂ ಮಿಕ್ಕಿ ಉಚಿತ ಕನ್ನಡಕಗಳನ್ನು ವಿತರಿಸಿದ ಡಾ.ಗೌರಿ ಪೈಯವರನ್ನು ಗೌರವಿಸಲಾಯಿತು. ನೆಲ್ಯಾಡಿ ಸುತ್ತಲಿನ ಗ್ರಾಮಗಳಲ್ಲಿ ಕಳೆದ ೧೫ ವರ್ಷಗಳಿಂದ ೪೩ ನೇತ್ರ ಚಿಕಿತ್ಸಾ ಶಿಬಿರ ಮತ್ತು ಉಚಿತ ವೈದ್ಯಕೀಯ ಶಿಬಿರಗಳನ್ನು ಸಂಘಟಿಸಿರುವ ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಅವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here