ಉಪ್ಪಿನಂಗಡಿ ನದಿಗೆ ಕಸ, ತ್ಯಾಜ್ಯ ಎಸೆದ ಪ್ರಕರಣ: ಬಾರ್ & ರೆಸ್ಟೋರೆಂಟ್‌ಗೆ 5 ಸಾವಿರ ರೂಪಾಯಿ ದಂಡ

0

ಉಪ್ಪಿನಂಗಡಿ: ನೇತ್ರಾವತಿ ನದಿ ನೀರಿಗೆ ಕಸ, ಮಲಿನ ತ್ಯಾಜ್ಯಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಇಲ್ಲಿನ ನದಿ ದಡದಲ್ಲಿರುವ ಬಾರ್ & ರೆಸ್ಟೋರೆಂಟ್‌ಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.

ನಿರಾಲ ಬಾರ್ & ರೆಸ್ಟೋರೆಂಟ್‌ನವರು ಹೊಟೇಲ್‌ನ ಕಸ ಹಾಗೂ ಮಲಿನ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಿದ್ದ ಬಗ್ಗೆ ಉಪ್ಪಿನಂಗಡಿ ಸ್ವಚ್ಚತಾ ಘಟಕದ ಮೇಲುಸ್ತುವಾರಿ ಸಮಿತಿ ಸದಸ್ಯರು ಪ್ರಕರಣ ಪತ್ತೆ ಹಚ್ಚಿ ಪಂಚಾಯಿತಿಗೆ ನೀಡಿರುವ ದೂರಿನಂತೆ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ೫ ಸಾವಿರ ದಂಡ ವಿಧಿಸಿದ್ದಾರೆ. ನದಿಗೆ ಎಸೆಯುವ ವೇಳೆ ನದಿ ದಡದ ಮೇಲೆ ಬಿದ್ದಿರುವ ಕಸದ ರಾಶಿಯನ್ನು ಸಂಜೆಯ ಒಳಗಾಗಿ ತೆರವು ಮಾಡಬೇಕು, ಇಲ್ಲದಿದ್ದಲ್ಲಿ ಮತ್ತೆ 10 ಸಾವಿರ ರೂಪಾಯಿ ದಂಡ ತೆರಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here