ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂಜಾ ಕಾರ್ಯಕ್ಕೆ ಅರಣ್ಯ ಇಲಾಖೆಯಿಂದ 20 ಕೆ.ಜಿ ಶ್ರೀಗಂಧ ಮಂಜೂರು

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ಪೂಜೆ ಮತ್ತು ಪ್ರಸಾದ ವಿತರಣೆಗಾಗಿ ಅರಣ್ಯ ಇಲಾಖೆಯಿಂದ ೨೦ ಕೆ.ಜಿ ಶ್ರೀಗಂಧವನ್ನು ಮಂಜೂರು ಮಾಡಿ ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯವರು ಅದೇಶ ನೀಡಿದ್ದಾರೆ.

ಶ್ರೀ ದೇವಳದಲ್ಲಿ ಪ್ರತನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು ವರ್ಷಾವಧಿ ಜಾತ್ರೆ ಮತ್ತು ಉತ್ಸವಗಳ ಸಮಯದಲ್ಲಿ ಹತ್ತು ಸಾವಿರಕ್ಕೂ ಮೇಲ್ಪಟ್ಟು ಜನ ಸೇರುವುದರಿಮದ 20 ಕೆ.ಜಿ ಶ್ರೀಗಂಧವನ್ನು ಬಿಡುಗಡೆಗೊಳಿಸುವಂತೆ ದೇವಳದಿಮದ ಮನವಿ ಮಾಡಲಾಗಿತ್ತು. ಈ ಕುರಿತು ಸದ್ರಿ ದೇವಸ್ಥಾನವು ಕ್ಲಾಸ್ ಎ ದೇವಸ್ಥಾವಾಗಿದ್ದು, ಸರಕಾರಿ ಆದೇಶ ಸಂಖ್ಯೆ 192 ಎಫ್‌ಡಿಸಿ 2016 ಬೆಂಗಳೂರು, 2017ರ ಡಿ.4ರಂತೆ ದೇವಳಕ್ಕೆ ಶ್ರೀಗಂಧವನ್ನು ವಾರ್ಷಿಕವಾಗಿ ಗರಿಷ್ಠ ೨೦ ಕೆ.ಜಿ ಶ್ರೀಗಂಧವನ್ನು ಸರಬರಾಜು ಮಾಡಲು ಅವಕಾಶವಿರುವುದಿರಂದ 20 ಕಿಲೋ ಬಾಗರ್‌ದಾದ್ ಮತ್ತು ಐನ್ ಬಾಗರ್‌ದಾದ್ ಮಾದರಿಯ (ಘಟಿಬುದ್ದ ಮತ್ತು ಮೊದಲನೇ ದರ್ಜೆ ಜಾಜ್‌ಲಫಕಲ್ ಬಿಟ್ಟು) ಶ್ರೀಗಂಧವನ್ನು ಮಂಜೂರು ಮಾಡಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ ದವರು ಶಿಫಾರಸ್ಸು ಮಾಡಿದ್ದರು. ಅದರಂತೆ 20 ಕಿಲೋ ಶ್ರೀಗಂಧವನ್ನು ಹಂಚಿಕೆ ಮಾಡಲು ಮಂಗಳೂರು ವೃತ್ತ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಮಂಜೂರು ಮಾಡಿದ್ದಾರೆ. ಇದರ ಜೊತೆಗೆ ದೇಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮದಾಸ್ ಗೌಡ ಅವರ ಪ್ರಯತ್ನದ ಫಲದಿಂದ ದೇವಳಕ್ಕೆ ಶ್ರೀಗಂಧ ಲಭಿಸಿದೆ ಎಂದು ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here