ಆ.29: ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವವು ಆ.29 ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಲಿದೆ.

ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್‌ರವರು ವಹಿಸಿಕೊಳ್ಳಲಿರುವರು. ಮುಖ್ಯ ಅತಿಥಿಗಳಾಗಿ ಫಿಲೋಮಿನಾ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾ, ಗೌರವ ಅತಿಥಿಗಳಾಗಿ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಭಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪ ಪ್ರಾಂಶುಪಾಲ ಪ್ರೊ|ದಿನಕರ್ ರಾವ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ|ಜೆ.ಬಿ ಸಿಕ್ವೇರಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ|ವೆಂಕಟೇಶ್ವರಿ ಕೆ.ಎಸ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ|ಮೀನಾಕ್ಷಿ ಕೆ, ಡಾಕ್ಟರೇಟ್ ಪದವಿ ಗಳಿಸಿದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ|ರಾಧಾಕೃಷ್ಣ ಗೌಡ ವಿ, ಸ್ನಾತಕೋತ್ತರ ಫಿಸಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ|ಪ್ರವೀಣ್ ಪಿ.ಡಿ’ಸೋಜ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ|ಆಶಿತ್ ವಿ.ಕೆ, ರ‍್ಯಾಂಕ್ ವಿಜೇತರಾದ ಅನು ಡಿ(ಬಿಎಸ್ಸಿ-4ನೇ ರ‍್ಯಾಂಕ್, ರಾಶಿಯಾ ರೈ ಎಂ(ಬಿಬಿಎ-5ನೇ ರ‍್ಯಾಂಕ್), ಚೇತನಾ ಎನ್(ಬಿಎ-6ನೇ ರ‍್ಯಾಂಕ್), ಶ್ರೇಯಾ ಕೆ.ಎಸ್(ಬಿಬಿಎ-7ನೇ ರ‍್ಯಾಂಕ್), ರೆನಿಲ್ಡಾ ಜೋಯ್ಸ್ ಮಾರ್ಟಿಸ್(ಬಿಎಸ್ಸಿ-9ನೇ ರ‍್ಯಾಂಕ್), ರಮ್ಯಶ್ರೀ ರೈ(ಬಿಎಸ್ಸಿ-10ನೇ ರ‍್ಯಾಂಕ್), ಜೈನಾಬತ್ ರಮ್ಸೀನಾ(ಎಂಎಸ್ಸಿ ಕಂಪ್ಯೂಟರ್ ಸೈನ್ಸ್-1ನೇ ರ‍್ಯಾಂಕ್), ಸುಶ್ಮಿತಾ ಕೆ(ಎಂಎಸ್ಸಿ ಫಿಸಿಕ್ಸ್-1ನೇ ರ‍್ಯಾಂಕ್), ಸಾರಮ್ಮ ಟಿ.ಟಿ(ಎಂಎಸ್‌ಡಬ್ಲ್ಯೂ-2ನೇ ರ‍್ಯಾಂಕ್), ನಿರೀಶ್ಮಾ ಎನ್.ಸುವರ್ಣ(ಎಂಕಾಂ-4ನೇ ರ‍್ಯಾಂಕ್), ಯಶಸ್ವಿನಿ ಬಿ(ಎಂಕಾಂ-5ನೇ ರ‍್ಯಾಂಕ್), ರಕ್ಷಾ ಎಸ್.ವೈ(ಎಂಕಾಂ-5ನೇ ರ‍್ಯಾಂಕ್), ನಿವಿನ್ ಕೊರೆಯಾ(ಎಂಕಾಂ-5ನೇ ರ‍್ಯಾಂಕ್), ಶ್ರಾವ್ಯ ಎನ್.ಎಸ್(ಎಂಕಾಂ-7ನೇ ರ‍್ಯಾಂಕ್), ಭವ್ಯಶ್ರೀ ವೈ(ಎಂಕಾಂ-7ನೇ ರ‍್ಯಾಂಕ್), ರಮ್ಯ ಎಂ(ಎಂಕಾಂ-9ನೇ ರ‍್ಯಾಂಕ್), ಸ್ವಾತಿ ಎಂ(ಎಂಕಾಂ-10ನೇ ರ‍್ಯಾಂಕ್) ಮತ್ತು ಪ್ರತಿಭಾವಂತ ಕ್ರೀಡಾಪಟುಗಳನ್ನು, ವಿದ್ಯಾರ್ಥಿಗಳನ್ನು ಅಭಿನಂದಿಸಲಿದ್ದೇವೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ|ಆ್ಯಂಟನಿ ಪ್ರಕಾಶ್ ಮೊಂತೇರೊ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಎಸ್.ಆರಾನ್ಹಾ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಮಹಾಲಸಾ ಪೈ ಜಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here