ಪುತ್ತೂರು: ಪ್ರವೀಣ್ ವರ್ಣಕುಟೀರ ಅವರ ನೇತೃತ್ವದಲ್ಲಿ ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್ ನಲ್ಲಿರುವ ವರ್ಣ ಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ 2 ದಿನಗಳ ಮಕ್ಕಳ ಚಿತ್ರಕಲೆ ಮತ್ತು ಕರಕುಶಲ ಕಲೆಗಳ ಪ್ರದರ್ಶನಕ್ಕೆ ಆ.27 ಕ್ಕೆ ಚಾಲನೆ ನೀಡಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಕಾನಾವು ಡಾ. ನರಸಿಂಹ ಶರ್ಮ ಅವರು ಮಕ್ಕಳ ಚಿತ್ರ ಕಲೆ ಮತ್ತು ಕರಕುಶಲ ಕಲೆಗಳ ಪ್ರದರ್ಶನವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಪೈ ಸರ್ಜಿಕಲ್ ಸಂಸ್ಥೆ ಮಾಲಕ ರವೀಂದ್ರ ಪೈ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕಲಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರವೀಣ್ ವರ್ಣಕುಟೀರ ಪ್ರದರ್ಶನದ ಮಾಹಿತಿ ನೀಡಿದರು.

ಕೋಕೊ ಗುರು ಸಂಸ್ಥೆಯ ಸುಪ್ರಭಾ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವರ್ಣಕುಟೀರ ಕಲಾ ಶಿಕ್ಷ ಸಂಸ್ಥೆಯ ಪ್ರಾಂಶುಪಾಲೆ ಸುನಿತಾ ಪ್ರವೀಣ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಛಾಯಾ ಆರ್ ಪೈ ಮತ್ತಿತರರು ಉಪಸ್ಥಿತರಿದ್ದರು.
