ಕಲಿಯೋದು, ಕಲಿಸೋದೇ ಯಜ್ಞ
ಪುತ್ತೂರು: ವಿದ್ಯಾಭ್ಯಾಸ ಎಂದರೆ ಯಜ್ಞವಿದ್ದಂತೆ. ಆದ್ದರಿಂದ ವಿದ್ಯೆಯನ್ನು ಕಲಿಯುವುದು ಹಾಗೂ ಕಲಿಸುವುದು ಭಗವಂತನಿಗೆ ಪ್ರಿಯವಾದದ್ದು ಎಂದು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ವೇದವ್ಯಾಸ್ ರಾಮಕುಂಜ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಬಕ – ಬಲ್ನಾಡ್ ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಬಕ ಎ, ಕಬಕ, ಕೊಡಿಪ್ಪಾಡಿ ಇವುಗಳ ಆಶ್ರಯದಲ್ಲಿ ಆ. 25ರಂದು ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಪ್ರದಾನ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ನಾವು ನಡೆಸುವ ಜೀವನ ಕ್ರಮವೇ ಧರ್ಮ. ಧರ್ಮದ ನಿಜವಾದ ಪರಿಕಲ್ಪನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಕಾರಗೊಂಡಿರುವುದನ್ನು ನಾವಿಲ್ಲಿ ಕಾಣಬಹುದು. ಜಾತಿ, ಮತ, ಬೇಧಗಳನ್ನು ತೊಡೆದು ಹಾಕಿ, ನಾವೆಲ್ಲಾ ಒಂದೇ ಎನ್ನುವ ಪರಿಕಲ್ಪನೆಯಡಿ ಸುದೃಢ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದೆ. ಇಲ್ಲಿ ನೀಡಲಾಗುವ ಸ್ವಯಂ ಸೇವೆಯ ಶಿಕ್ಷಣವನ್ನು ಪಡೆದುಕೊಳ್ಳುವ ಜೊತೆಗೆ, ಶಕ್ತಿಯ ಅರಿವಿಗಾಗಿ ಇಲ್ಲಿನ ವೇದಿಕೆಯನ್ನು ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಬಕ ಗ್ರಾ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಕಾರ್ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು.
ಕರಾವಳಿ ಪ್ರಾದೇಶಿಕ ಕಚೇರಿಯ ಆಡಳಿತ ಯೋಜನಾಧಿಕಾರಿ ಪುರಂದರ ಪೂಜಾರಿ ಮಾತನಾಡಿ, ಇ-ಶ್ರಮ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡನ್ನು ಉಚಿತವಾಗಿ ಮಾಡಿ ಕೊಡುತ್ತಿದ್ದು, ಒಕ್ಕೂಟದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲಾ ಯೋಜನೆಯ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ಪ್ರತಿ ಸದಸ್ಯನಿಗೆ ತಲುಪಿಸುವ ಕೆಲಸವನ್ನು ಒಕ್ಕೂಟದ ಸದಸ್ಯರು ಮಾಡಬೇಕು ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಅಧ್ಯಕ್ಷ ಜಿ. ಮಹಾಬಲ ರೈ ಮಾತನಾಡಿ, ೪೦ ವರ್ಷಗಳ ಹಿಂದೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದರು. ಯೋಜನೆ ಜಾರಿಗೆ ಬಂದ ಬಳಿಕ ಮಹಿಳೆಯರು ಸಮಾಜದಲ್ಲಿ ಮುಂದೆ ಬಂದಿದ್ದಾರೆ. ಆರ್ಥಿಕ ಸಮಸ್ಯೆಯೂ ಬಗೆಹರಿದಿದೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಸ್ತಿತ್ವಕ್ಕೆ ಬಂದು 20 ವರ್ಷ ಆಗಿದ್ದು, ನಮ್ಮಲ್ಲಿರುವ ದುಶ್ಚಟಗಳನ್ನು ಬಿಡುವತ್ತ ಗಮನ ಕೊಡಬೇಕು ಎಂದರು.
ಮೆಸ್ಕಾಂನ ನಿವೃತ್ತ ಶಾಖಾಧಿಕಾರಿ, ಮುರ ಗೌಡ ಸಮುದಾಯ ಭವನದ ಅಧ್ಯಕ್ಷ ಬಾಬು ಗೌಡ ಕಲ್ಲೇಗ ಮಾತನಾಡಿ, ಬಡವರು ನೆಮ್ಮದಿಯ ಜೀವನ ಕಂಡುಕೊಳ್ಳಲು ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ ಎಂದರು.
ಯೋಜನಾಧಿಕಾರಿ ಆನಂದ ಮಾತನಾಡಿ, ಯೋಜನೆಯ ಕಾರ್ಯಕರ್ತನಾಗಿ ನಾನು ಸೇರಿದ್ದು, ಇಂದು ಯೋಜನಾಧಿಕಾರಿಯಾಗಿ ನಿಮ್ಮ ಮುಂದೆ ನಿಂತಿರುವುದು ತನಗೆ ಸಂತೋಷದ ವಿಷಯ ಎಂದರು.
ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಪ್ರಶಾಂತ್ ಮುರ, ಕಬಕ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಗೌಡ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಪ್ರೇಮ, ಜೊತೆ ಕಾರ್ಯದರ್ಶಿ ಮನೋಹರ, ಕೋಶಾಧಿಕಾರಿ ದೀಕ್ಷಿತ, ನೂತನ ಪದಾಧಿಕಾರಿಗಳಾದ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ, ಕಾರ್ಯದರ್ಶಿ ದೀಕ್ಷಿತಾ, ಜೊತೆ ಕಾರ್ಯದರ್ಶಿ ಭಾರತಿ, ಕೋಶಾಧಿಕಾರಿ ಶಶಿಕಲಾ, ಕೊಡಿಪ್ಪಾಡಿ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಹರಿಕೃಷ್ಣ ಕೆ. ಗುತ್ತು, ಉಪಾಧ್ಯಕ್ಷ ರೇವತಿ, ಕಾರ್ಯದರ್ಶಿ ರೇಖಾ, ಜೊತೆ ಕಾರ್ಯದರ್ಶಿ ಚಂದ್ರಿಕಾ, ಕೋಶಾಧಿಕಾರಿ ರಾಧಾಕೃಷ್ಣ, ನೂತನ ಪದಾಧಿಕಾರಿಗಳಾದ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಸುನೀತಾ, ಜೊತೆ ಕಾರ್ಯದರ್ಶಿ ಅಶಿತಾ, ಕೋಶಾಧಿಕಾರಿ ಪುತ್ತು ಬ್ಯಾರಿ, ಕಬಕ ಎ ನೂತನ ಒಕ್ಕೂಟದ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷೆ ಪದ್ಮಾವತಿ, ಕಾರ್ಯದರ್ಶಿ ಹರಿಪ್ರಸಾದ್, ಜೊತೆ ಕಾರ್ಯದರ್ಶಿ ಮನೋಹರ, ಕೋಶಾಧಿಕಾರಿ ವಸಂತಿ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯಿತು. ಇದೇ ಸಂದರ್ಭ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳಿಗೆ, ಸೇವಾಪ್ರತಿನಿಧಿಗಳಿಗೆ, ಮಾಜಿ ಸೇವಾ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರೇಮಾ ಪ್ರಾರ್ಥಿಸಿದರು. ಕೊಡಿಪ್ಪಾಡಿ ಒಕ್ಕೂಟದ ಕಾರ್ಯದರ್ಶಿ ರೇಖಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಚಿತ್ರಾ ವರದಿ ವಾಚಿಸಿದರು. ರೋಶನ್ ಡಿಸೋಜಾ, ಸುಂದರ ಕಬಕ, ದಾಸಪ್ಪ ಕೊಡಿಪ್ಪಾಡಿ, ಜಿನ್ನಪ್ಪ ಪದೆಂಜಾರು ಕಬಕ, ಮುರಳೀಧರ ಕಬಕ, ಚಂದಪ್ಪ ಬಟ್ರುಪ್ಪಾಡಿ, ವಿಠಲ ಹನಿಯಾರು, ಮನಮೋಹನ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಹರೀಶ್ ಕುಲಾಲ್ ವಂದಿಸಿ, ಆರೋಗ್ಯ ಇಲಾಖೆಯ ಬೆಳ್ತಂಗಡಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಜಯ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶ್ರೀ ಕೃಷ್ಣ ಮಾಡಪುಳಿತ್ತಾಯ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು.
ಫೊಟೋ:
ಮುರ ೧: ಕಾರ್ಯಕ್ರಮವನ್ನು ಕಬಕ ಗ್ರಾಪಂ ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಉದ್ಘಾಟಿಸಿದರು.
ಮುರ ೨: ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯಿತು.