ಪುತ್ತೂರು: ಬನ್ನೂರು ಗ್ರಾ.ಪಂ ಕಚೇರಿಯ ಎದುರು ವೇಗವಾಗಿ ಬಂದ ಕೇರಳ ನೋಂದಣಿಯ ಕಾರೊಂದು ಡಿವೈಡರ್ ಏರಿದ ಘಟನೆ ಆ.27ರಂದು ರಾತ್ರಿ ನಡೆದಿದೆ.
ಪುತ್ತೂರಿನಿಂದ ಉಪ್ಪಿನಂಗಡಿ ಕಡೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬನ್ನೂರು ಗ್ರಾ.ಪಂ ಕಚೇರಿ ಎದುರು ಡಿವೈಡರ್ ಏರಿ ನಿಂತಿದೆ. ಘಟನೆಯಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಬಂದು ಮಾಹಿತಿ ಪಡೆದು ಕೊಂಡಿದ್ದಾರೆ. ಕಾರಿನಲ್ಲಿದ್ದವರು ಅಪ್ರಾಪ್ತರೆಂದು ತಿಳಿದು ಬಂದಿದೆ.