ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದ್ದ ದಿ.ಉಸ್ಮಾನ್ ಹಾಜಿ ಮಿತ್ತೂರುರವರ ಕುಟುಂಬದ ವತಿಯಿಂದ ನಿರ್ಮಿತವಾದ ಮರ್‌ಹೂಂ ಉಸ್ಮಾನ್ ಹಾಜಿ ಮೆಮೋರಿಯಲ್ ಲ್ಯಾಬೋರೇಟರಿಯ ಉದ್ಘಾಟನೆ ಕುಂಬ್ರ ಮರ್ಕಝ್ ಕ್ಯಾಂಪಸ್‌ನಲ್ಲಿ ಆ.28ರಂದು ನಡೆಯಿತು.
ದಿ.ಉಸ್ಮಾನ್ ಹಾಜಿಯವರ ಪತ್ನಿ ಝುಬೈದ ಹಜ್ಜುಮ್ಮ ಹಾಗೂ ಕುಟುಂಬದ ಸದಸ್ಯರು ಲ್ಯಾಬೋರೇಟರಿಗಳನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್.ಎಂ ಬಶೀರ್ ಹಾಜಿ ವಹಿಸಿದ್ದರು.
ಎಮ್ ಎಸ್ ಎಮ್ ಝೈನಿ ಕಾಮಿಲ್ ಮಾತನಾಡಿ ವಿದ್ಯಾಸಂಸ್ಥೆಗೆ ದೀರ್ಘಕಾಲ ನೇತೃತ್ವ ವಹಿಸಿದ್ದ ಉಸ್ಮಾನ್ ಹಾಜಿಯವ ಶ್ರಮ, ತ್ಯಾಗ ಮನೋಭಾವ ಮತ್ತು ಬಡ ವಿದ್ಯಾರ್ಥಿನಿಯರಿಗೆ ಅವರು ಚಾಚುತ್ತಿದ್ದ ಉದಾರ ಹಸ್ತವೇ ಸಂಸ್ಥೆಯನ್ನು ಈ ಹಂತಕ್ಕೆ ಕೊಂಡೊಯ್ಯಲು ಕಾರಣವಾಗಿದೆ ಎಂದು ಹೇಳಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಮಾತನಾಡಿ ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ಈ ಮಟ್ಟದ ಬೆಳವಣಿಗೆಗೆ ಉಸ್ಮಾನ ಹಾಜಿಯವರು ಹಾಕಿಕೊಟ್ಟ ಅಡಿಪಾಯ ಕಾರಣವಾಗಿದೆ ಎಂದು ಹೇಳಿದರು.
ಕೋಶಾಧಿಕಾರಿ ಕಾಸಿಂ ಹಾಜಿ ಮಿತ್ತೂರು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಹ್ಮದ್ ಹಾಜಿ ಬೆಂಗಳೂರು, ಮುಹಮ್ಮದ್ ಸಿದ್ದೀಕ್ ಹಾಜಿ ಪೈವಳಿಕೆ, ಮುಹೀನುದ್ದೀನ್ ಹಾಜಿ ಮಂಗಳೂರು, ಹನೀಫ್ ಹಾಜಿ ಮಡಿಕೇರಿ, ಅಬೂಸಾಬ್ ಬೆಂಗಳೂರು, ಹಾರಿಸ್ ಒಕ್ಕೆತ್ತೂರು ಬಹರೈನ್, ಅಬ್ದುಲ್ ನಾಸಿರ್ ಇಂಜಿನಿಯರ್, ಉಮರ್ ಸಖಾಫಿ ಮಿತ್ತೂರು, ಮುಹಮ್ಮದ್ ಜಲಾಲ್, ಡಾಕ್ಟರ್ ಹಸನ್ ಸಾಲಿ, ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ನಾಯಕರು ಹಾಗೂ ಎಸ್‌ಎನ್‌ಬಿ ಗ್ರೂಪ್‌ನ ಬಶೀರ್ ಇಂದ್ರಾಜೆ, ಶಂಸುದ್ದೀನ್ ಬೈರಿಕಟ್ಟೆ, ಸಮಿತಿ ಸದಸ್ಯರಾದ ಯೂಸುಫ್ ಹಾಜಿ ಕೈಕಾರ, ಆಶಿಕುದ್ದೀನ್ ಅಖ್ತರ್, ಯೂಸುಫ್ ಸಾಜ, ಎಸ್ ಪಿ ಬಶೀರ್, ಅಲ್ಪಸಂಖ್ಯಾತರ ಇಲಾಖೆಯ ನಝೀರ್ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು ಪ್ರಾಸ್ತಾವಿಕ ಮಾತಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.