ಪುತ್ತೂರು ಕೋ ಓಪರೇಟಿವ್ ಟೌನ್‌ಬ್ಯಾಂಕ್ ಮಹಾಸಭೆ

0

ರೂ. 88 ಕೋಟಿ ವ್ಯವಹಾರ; ರೂ. 67.99 ಲಕ್ಷ ನಿವ್ವಳ ಲಾಭ, ಶೇ.10ಡಿವಿಡೆಂಡ್ ಘೋಷಣೆ

ಆಕರ್ಷಕ ಯೋಜನೆಗಳನ್ನು ಜಾರಿಗೆ ತರುವ ಚಿಂತನೆ-ಕಿಶೋರ್ ಕೊಳತ್ತಾಯ

ಪುತ್ತೂರು: ಬ್ಯಾಂಕಿನ ಸದಸ್ಯರೇ ಬ್ಯಾಂಕ್‌ನ ಆಸ್ತಿ, ಎಲ್ಲಾ ಸದಸ್ಯರ ಸಹಕಾರಿಂದ ಬ್ಯಾಂಕ್‌ನ ಅಭಿವೃದ್ಧಿ ಆಗುತ್ತದೆ. ಈ ನಿಟ್ಟಿನಲ್ಲಿ ಕೆಲವೊಂದು ಆಕರ್ಷಕ ಯೋಜನೆಗಳನ್ನು ಜಾರಿಗೆ ತರಬೇಕೆಂಬ ಚಿಂತನೆ ಇದೆ ಎಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಅಧ್ಯಕ್ಷ ಯನ್.ಕಿಶೋರ್ ಕೊಳತ್ತಾಯರವರು ಹೇಳಿದರು.‌

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಸಭಾಭವನದಲ್ಲಿ ಆ.28ರಂದು ನಡೆದ ಬ್ಯಾಂಕ್‌ನ 13ನೇ ವರ್ಷದ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸದಸ್ಯರ ಸಲಹೆ ಸೂಚನೆಗಳನ್ನು ಆಲಿಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಸಮಸ್ಯೆ ಆಗಿದೆ ನಿಜ. ಆದರೆ ಎಪ್ರಿಲ್ ನಂತರ ವ್ಯವಹಾರ ಗಣನೀಯವಾಗಿ ಜಾಸ್ತಿಯಾಗಿದೆ. ಸಾಲ ಕೊಡುವಂತಹದ್ದನ್ನು ಜಾಸ್ತಿ ಮಾಡಬೇಕು. ಈಗಾಗಲೇ ಚಿನ್ನಾಭರಣದ ಸಾಲಕ್ಕೆ ಹೊಸ ಸ್ಕೀಮ್ ಬಿಡುಗಡೆ ಮಾಡಿದ್ದೇವೆ. ಚಿನ್ನದ ದರ ಹಿಡಿದು ಅಲ್ಪಾವಧಿ ಸಾಲ ನೀಡುವುದು ಈ ಯೋಜನೆಯಾಗಿದೆ. ಇನ್ನೂ ಕೆಲವು ಆಕರ್ಷಕ ಯೋಜನೆಗಳನ್ನು ತರಬೇಕೆಂಬ ಚಿಂತನೆ ಇದೆ. ಈಗಿನ ಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡು ಡಿಜಿಟಲ್ ಬ್ಯಾಂಕಿಂಗ್ ಆರಂಭ ಮಾಡಬೇಕೆಂದಿದ್ದೇವೆ. ಸರ್ವಿಸ್ ರೂಲ್ಸ್ ಅಪ್‌ಡೇಟ್ ಮಾಡಬೇಕು. ಜೊತೆಗೆ ಕಟ್ಟಡದ ಸಣ್ಣಪುಟ್ಟ ದುರಸ್ಥಿ, ಇಂಟರಿಯರ್ ಬದಲಾವಣೆ ಮಾಡಬೇಕು. ಇದಕ್ಕೆ ಸದಸ್ಯರು ಅನುಮೋದನೆ ಕೊಡಬೇಕೆಂದು ಹೇಳಿದರು. ವರದಿ ಸಾಲಿನಲ್ಲಿ ಬ್ಯಾಂಕ್ 88 ಕೋಟಿ ರೂ.ಗಳ ವ್ಯವಹಾರ ಮಾಡಿದ್ದು ರೂ. 67,99,778 ನಿವ್ವಳ ಲಾಭಗಳಿಸಿದೆ. ಈ ಲಾಭವನ್ನು ಉಪನಿಬಂಧನೆ ಪ್ರಕಾರ ಹಂಚಲಾಗಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದರು. ಬ್ಯಾಂಕ್ ಅಭಿವೃದ್ಧಿಗೆ ಸದಸ್ಯರು, ಬ್ಯಾಂಕ್‌ನ ಆಡಳಿತ ಮಂಡಳಿ, ಸಿಬ್ಬಂದಿಗಳ ಸಹಕಾರ ಮುಖ್ಯ ಎಂದರು.

ಲಾಭಾಂಶ ವಿಂಗಡಣೆ: ಪ್ರಸ್ತುತ ಬ್ಯಾಂಕ್‌ನ ಲಾಭದಿಂದ ಕಾಯ್ದಿಟ್ಟ ನಿಽಗೆ ರೂ. 16,99,945, ಸಹಕಾರ ಶಿಕ್ಷಣ ನಿಧಿಗೆ ರೂ. 1,35,996, ಕ.ರಾ.ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳಿಗೆ ರೂ. 67,998, ಕೆಟ್ಟ ಸಾಲಗಳ ನಿಧಿಗೆ ರೂ.3,30,000, ಕಟ್ಟಡ ನಿಽಗೆ ರೂ.3,07,144, ಸದಸ್ಯರ ಪರಿಹಾರ ನಿಧಿಗೆ ರೂ. 1ಲಕ್ಷ , ಸಿಬ್ಬಂದಿ ಪರಿಹಾರ ನಿಧಿಗೆ ರೂ.1.40 ಲಕ್ಷ, ಸಾರ್ವಜನಿಕ ಕಲ್ಯಾಣ ನಿಽಗೆ ರೂ. 1 ಲಕ್ಷ, , ಸಾರ್ವಜನೋಪಕಾರ ನಿಽಗೆ ರೂ. 1ಲಕ್ಷ, ಸದಸ್ಯರ ಮರಣೋತ್ತರ ನಿಽಗೆ ರೂ.2,15ಲಕ್ಷ, ಸಿಬ್ಬಂದಿಗೆ ಬೋನಸ್ ರೂ. 9,12,749, ಜುಬಿಲಿ ನಿಽಗೆ ರೂ. 1 ಲಕ್ಷ, ಲಾಭಾಂಶ ಸಮೀಕರಣ ನಿಧಿಗೆ ರೂ. 1 ಲಕ್ಷ, ಉಳಿಕೆ ಕ್ಷೇಮ ನಿಧಿಗೆ ರೂ.466.11, ಶಿಫಾರಸ್ಸು ಮಾಡಲಾಗಿದೆ.

ವರದಿ ವರ್ಷದ ಆದಿಯಲ್ಲಿ ಠೇವಣಿ ರೂ. 69,48,17,038.59 ಇದ್ದದ್ದು ವರ್ಷಾಂತ್ಯದಲ್ಲಿ ರೂ.74,80,35,361.66ಕ್ಕೆ ಏರಿಕೆಯಾಗಿದೆ ಎಂದ ಬ್ಯಾಂಕ್‌ನ ಪ್ರಭಾರ ಮಹಾಪ್ರಬಂಧಕ ಯು. ಅರುಣ್ ಕುಮಾರ್ ಅವರು ಬ್ಯಾಂಕ್ ಲೆಕ್ಕಪರಿಶೋಧನೆಯಲ್ಲಿ ಈ ಬಾರಿಯೂ ಬ್ಯಾಂಕ್ ಎ ತರಗತಿ ಪಡೆದಿದೆ ಎಂದರು. ಸದಸ್ಯರಾದ ರಾಮಚಂದ್ರ ಕಾಮತ್, ಸುದರ್ಶನ್, ಅಶ್ರಫ್ ಕಲ್ಲೇಗ ವಿವಿಧ ಸಲಹೆ ನೀಡಿದರು. ಸಭೆಗೆ ಗೈರಾಗಿದ್ದ ಸದಸ್ಯ ಸುದರ್ಶನ್ ಅವರು ಪತ್ರದ ಮೂಲಕ ಸಲಹೆ ನೀಡಿರುವುದನ್ನು ಸಭೆಗೆ ಮಂಡಿಸಲಾಯಿತು. ಬ್ಯಾಂಕ್‌ನ ಸಹಾಯಕ ಲೆಕ್ಕಾಧಿಕಾರಿ ವರದಿ ವಾಚಿಸಿದರು.

ಹಿರಿಯ ಸದಸ್ಯರಿಗೆ ಸನ್ಮಾನ: ಬ್ಯಾಂಕಿನ ಹಿರಿಯ ಸದಸ್ಯರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಲೆಕ್ಸ್ ಕ್ರಾಸ್ತಾ, ಹರಿಶ್ಚಂದ್ರ ಹೆಗಡೆ, ಲೀಲಾವತಿ ಎಂ, ಗಂಗಾ ರೈ ಎಸ್ ಅವರನ್ನು ಬ್ಯಾಂಕ್‌ನ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್‌ನ ನಿರ್ದೇಶಕರಾದ ಸದಾಶಿವ ಪೈ, ಚಂದ್ರಶೇಖರ್ ಗೌಡ ಕೆ, ಮಲ್ಲೇಶ್ ಕುಮಾರ್, ವಿನೋದ್ ಕುಮಾರ್, ಸನ್ಮಾನ ಪತ್ರ ವಾಚಿಸಿದರು. ಹಿರಿಯ ಸಹಾಯಕ ಗಿರೀಶ್‌ರಾಜ್ ಎಂ.ವಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಸನ್ಮಾನಿತರ ಪೈಕಿ ಲೀಲಾವತಿ ಅವರಿಗೆ ಅನಾರೋಗ್ಯದ ಹಿನ್ನಲೆಯಲ್ಲಿ ಅವರ ಮನೆಗೆ ತೆರೆಳಿ ಸನ್ಮಾನ ಮಾಡುವುದಾಗಿ ಸಭೆಯಲ್ಲಿ ತಿಳಿಸಲಾಯಿತು.‌

ನಿವೃತ್ತ ಮಹಾಪ್ರಬಂಧಕರಿಗೆ ಸನ್ಮಾನ: ಬ್ಯಾಂಕ್‌ನಲ್ಲಿ ಮಹಾಪ್ರಬಂಧಕರಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿರುವ ನಹುಷ ಪಿ.ವಿ ಅವರನ್ನು ಬ್ಯಾಂಕ್‌ನ ವತಿಯಿಂದ ಸನ್ಮಾನಿಸಲಾಯಿತು. ಕಿರಿಯ ಸಹಾಯಕಿ ಮಮತಾ ಬಿ.ಎ. ಅವರು ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಬ್ಯಾಂಕ್‌ನ ಪರೀಕ್ಷೆಯಲ್ಲಿ ಸಾಧನೆಗೈದ ಮಮತ ಬಿ.ಎ ಮತ್ತು ಕು.ಆಶಿಕಾ ಎ ಕುಮಾರ್ ಅವರನ್ನು ಗೌರವಿಸಲಾಯಿತು.

ಶತಮಾನೋತ್ಸವ ವಿದ್ಯಾರ್ಥಿವೇತನ: ಬ್ಯಾಂಕ್‌ನ ಶತಮಾನೋತ್ಸವದ ಅಂಗವಾಗಿ ಬಿ.ಕಾಂ ಪದವಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಅತ್ಯಂತ ಹೆಚ್ಚು ಅಂಕ ಗಳಿಸಿರುವ ಸಂತ ಫಿಲೋಮಿನಾ ಕಾಲೇಜಿನ ಶ್ರೀದೇವಿ, ನಿಶಾಪ್ರಭ, ಪ್ರತಿಮಾ ಅವರಿಗೆ ನೀಡಲಾಯಿತು.

ದಿ.ಮೊಳಹಳ್ಳಿ ಶಿವರಾಯರ ಶತಾಬ್ದಿಯ ವಿದ್ಯಾರ್ಥಿವೇತನ: ಬ್ಯಾಂಕಿನ ಮೂಲ ಸ್ಥಾಪಕರಲ್ಲಿ ಒಬ್ಬರಾದ ದಿ| ಮೊಳಹಳ್ಳಿ ಶಿವರಾಯರ ಶತಾಬ್ದಿಯ ಅಂಗವಾಗಿ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ಮೊಳಹಳ್ಳಿ ಅವರಿಂದಲೇ ಸ್ಥಾಪಿಸಲ್ಪಟ್ಟ ಕೊಂಬೆಟ್ಟು ಸ.ಪ.ಪೂ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವ ಅಭಿಲಾಷ ದೋಟ, ಅನುಷಾ ಜೇನ್ ಪಾಯಸ್ ಅವರಿಗೆ ನೀಡಲಾಯಿತು. ನೆಲ್ಲಿಕಟ್ಟೆ ವಿದ್ಯಾರ್ಥಿಗಳ ಪೈಕಿ 6ನೇ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ನೆಲ್ಲಿಕಟ್ಟೆ ದ.ಕ.ಜಿ.ಪ.ಮಾ.ಹಿ.ಪ್ರಾ.ಶಾಲೆಯ ಪರಿಣಿತ, ಧನು ಅವರಿಗೆ ವಿತರಣೆ ಮಾಡಲಾಯಿತು. ಬೊಳುವಾರು ಶಾಲೆಯ ಮೊಹಮ್ಮದ್ ಹಾಸೀಂ ಮತ್ತು ವಿಜೇತ್ ಅವರಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಪುತ್ತೂರು ಪಟ್ಟಣ ಪ್ರದೇಶದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ವಿವೇಕಾನಂದ ಆಂಗ್ಲ ಮಾಧ್ಯಮದ ಅಭಯ್ ಶರ್ಮ ಕೆ, ಅಭಿಜ್ಞಾ ಆರ್, ಆತ್ಮೀಯ ಎಮ್ ಕಶ್ಯಪ್, ಪದವಿಯಲ್ಲಿ ಕಲಾವಿಭಾಗದಲ್ಲಿ ಫಿಲೋಮಿನಾ ಕಾಲೇಜಿನ ಚೇತನಾ ಎನ್, ವಿಜ್ಞಾನ ವಿಭಾಗದಲ್ಲಿ ಫಿಲೋಮಿನಾ ಕಾಲೇಜಿನ ಅನು ಡಿ, ಬಿಕಾಂ ನಲ್ಲಿ ಫಿಲೋಮಿನಾ ಕಾಲೇಜಿನ ರೇನಿಟಾ ಮೆರ್ಲಿಯಾ ಲೊಬೊ, ಬಿ.ಬಿಎನಲ್ಲಿ ಫಿಲೋಮಿನಾ ಕಾಲೇಜಿನ ರಾಶೀಯಾ ರೈ ಎಮ್, ಕಾನೂನು ಪದವಿಯಲ್ಲಿ ವಿವೇಕಾನಂದ ಕಾನೂನು ಕಾಲೇಜಿನ ಸಂತೋಷ್ ಕುಮಾರ್ ಪಿ ಮತ್ತು ಕಾವ್ಯಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ದಿ.ಬಿ.ಗಣಪತಿ ವಿಷ್ಣು ಹೊಳ್ಳ ಸ್ಕಾಲರ್‌ಶಿಪ್: ದಿ.ಬಿ.ಗಣಪತಿ ವಿಷ್ಣು ಹೊಳ್ಳ ಮತ್ತು ಅವರ ಪತ್ನಿ ಶ್ರೀಮತಿ ಶಾರದಾರವರ ನೆನಪಿನಲ್ಲಿ ನೀಡುವ ಸ್ಕಾಲರ್ ಶಿಪ್‌ನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ್ದ ದ್ವಿತೀಯ ಪಿಯುಸಿ(ಪಿಸಿಎಂಬಿ) ವಿದ್ಯಾರ್ಥಿನಿ ಪೂರ್ವಿ ರೈ ಕೆ ಅವರಿಗೆ ನೀಡಲಾಯಿತು.

ನಿರ್ದೇಶಕರಾದ ಕಿರಣ್ ಕುಮಾರ್ ರೈ, ನಾರಾಯಣ ಎ.ವಿ, ರಮೇಶ್ ನಾಯ್ಕ್ ಕೆ, ಜಯಂತಿ, ಹೇಮಾವತಿ, ಗಾಯತ್ರಿ ಪಿ, ವೃತ್ತಿಪರ ನಿರ್ದೇಶಕ ಅರವಿಂದ ಕೃಷ್ಣ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ತನ್ವಿ ಶೆಣೈ ಕುಡ್ಗಿ ಪ್ರಾರ್ಥಿಸಿದರು, ಬ್ಯಾಂಕ್‌ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ ಸ್ವಾಗತಿಸಿದರು. ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ವಂದಿಸಿದರು. ಹಿರಿಯ ಸಹಾಯಕಿ ಜ್ಯೋತಿ ಎನ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಸಹಾಯಕರಾದ ಪವನ್ ನಾಯಕ್, ರಮ್ಯ ಬಿ, ಶ್ರೀಕಾಂತ್, ಅಟೆಂಡರ್ ಉದಯ ಕುಮಾರ್ ಕೆ, ಎಂ.ನಾರಾಯಣ ನಾಯ್ಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬ್ಯಾಂಕ್‌ನ ಆಂತರಿಕ ಲೆಕ್ಕಪರಿಶೋಧಕ ಭಾಸ್ಕರ್ ರಾವ್, ಕಾನೂನು ಸಲಹೆಗಾರ ಶಿವಪ್ರಸಾದ್ ಇ ಮತ್ತು ಬ್ಯಾಂಕ್‌ನ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here