ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಬಸವ ಸಮರ್ಪಣೆ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ನೂತನ ಬಸವ ( ನಂದಿ) ನನ್ನು ಆ.31ರಂದು ಸಮರ್ಪಿಸಲಾಯಿತು. ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಕರಂಬಾರು ಮನೆ ನಿವಾಸಿ ಕೃಷ್ಣಪ್ಪ ಗೌಡರು ಈ ನೂತನ ಬಸವನನ್ನು ದೇವಾಲಯಕ್ಕೆ ಸಮರ್ಪಿಸಿದರು.


ಕಟುಕನ ಮನೆಯಂಚಿನಿಂದ ದೇವಾಲಯದತ್ತ: ದೇವಾಲಯಕ್ಕೆ ಸಮರ್ಪಣೆಗೊಳ್ಳಲಿರುವ ಬಸವನಿಗೆ ಭದ್ರ ಎಂದು ಹೆಸರಿಡಲಾಗಿದ್ದು, ಇನ್ನೇನು ಕಸಾಯಿಖಾನೆಗೆ ರವಾನೆಯಾಗಲಿದ್ದ ಈ ಬಸವ ಬದುಕಿ ಉಳಿದಿರುವುದೇ ಒಂದು ಪವಾಡ. ಬಸವ ಹುಟ್ಟಿದ್ದು ಕೃಷ್ಣಪ್ಪ ಗೌಡರ ಮನೆಯಲ್ಲಿಯಾದರೂ ಬೆಳೆದದ್ದು ಬೇರೆಯವರ ಮನೆಯಲ್ಲಿ. ಸಾಕುತ್ತಿದ್ದವರಿಗೆ ಇದು ಹೊರೆಯಾದಾಗ ಗೋ ಭಕ್ಷಕ ವ್ಯಕ್ತಿಗಳಿಂದ ದುಬಾರಿ ಮೊತ್ತಕ್ಕೆ ಖರೀದಿಯ ಪ್ರಸ್ತಾಪ ವ್ಯಕ್ತವಾಯಿತು. 80,000 ರೂಪಾಯಿಗೆ ಮಾರಾಟದ ಒಪ್ಪಂದವೂ ಆಯಿತು. ಈ ಬಗ್ಗೆ ಮಾಹಿತಿ ಪಡೆದ ಕೃಷ್ಣಪ್ಪ ಗೌಡರು ಮಧ್ಯ ಪ್ರವೇಶಿಸಿ ಗೋ ಭಕ್ಷಕರಿಗೆ ಮಾರಾಟಕ್ಕೆ ಸಿದ್ದವಾಗಿದ್ದ ಈ ಬಸವನನ್ನು ತಾನೇ ಖರೀದಿಸಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಸಮರ್ಪಿಸಲು ಮುಂದಾಗಿದ್ದಾರೆ. ಒಟ್ಟಾರೆ ಕಟುಕನ ಮನೆ ಕದ ತಟ್ಟಿದ ಬಸವ ಪವಾಡ ಸದೃಶ್ಯವೆಂಬಂತೆ ದೇವಾಲಯಕ್ಕೆ ಸಮರ್ಪಿಸಲ್ಪಟ್ಟಿದೆ.

LEAVE A REPLY

Please enter your comment!
Please enter your name here