ಪುರುಷರಕಟ್ಟೆಯಲ್ಲಿ 22ನೇ ವರ್ಷದ ಗಣೇಶೋತ್ಸವದ ಸಂಭ್ರಮಕ್ಕೆ ಚಾಲನೆ

0

 

ಪುತ್ತೂರು: ಪುರುಷರಕಟ್ಟೆಯ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಪುರುಷರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ೨೨ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.೩೧ರಂದು ಚಾಲನೆ ದೊರೆಯಿತು.

 


ಬೆಳಿಗ್ಗೆ ಶ್ರೀಗಣೇಶನ ವಿಗ್ರಹ ಆಗಮನದ ಬಳಿಕ ಗಣಪತಿ ವಿಗ್ರಹ ಪ್ರತಿಷ್ಠೆ, ಪ್ರಾರ್ಥನೆ, ಗಣಪತಿ ಹೋಮ, ಸ್ಥಳ ಶುದ್ದಿಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ವಅಪರಾಹ್ನ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.
ಸಂಜೆ ಪುರುಷರಕಟ್ಟೆ ಶ್ರೀದೇವಿ ಭಜನಾ ಮಂಡಳಿಯವರಿಂದ ಭಜನೆ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದ ಬಳಿಕ ಬಲೇ ತೆಲಿಪಾಲೇ ಖ್ಯಾತಿಯ ಅರುಣ್ ಚಂದ್ರ ಬಿ.ಸಿರೋಡ್ ರಚಿಸಿ, ನಿರ್ದೇಶಿಸಿ, ನಟಿಸಿರುವ, ಪುರುಷರಕಟ್ಟೆ ಬಂಗಾರ್ ಕಲಾವಿದೆರ್ ಅಭಿನಯದ `ನಾಡ್ಂಡಲ ತಿಕ್ಕಂದ್’ ಎಂಬ ನೈಜ ಘಟನೆ ಆಧಾರಿತ ಹಾಸ್ಯಮಯ ತುಳು ನಾಟಕ ನಡೆಯಲಿದೆ.
ಸೆ.೧ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶಾಂತಿಗೋಡು ಕೂಡುರಸ್ತೆ ಶ್ರೀದುರ್ಗಾ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಪುತ್ತೂರು ಇದರ ನೃತ್ಯಗುರು ವಿದುಷಿ ರೋಹಿಣಿ ಉದಯ್‌ರವರ ಶಿಷ್ಯೆಯರಿಂದ `ನೃತ್ಯ ರಂಜಿನಿ’ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯ ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಪುರುಷ ಎಂ.ಪುರುಷರಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮುಖಂಡ ಬಾಲಕೃಷ್ಣ ಕಾರಂತ್ ಎರುಂಬು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ., ನರಿಮೊಗರು ಶಂಕರ್ ಗ್ರೂಪ್‌ನ ನಿರ್ದೇಶಕ ಸತ್ಯಶಂಕರ ಭಟ್, ನಳಿನಿ ಲೋಕಪ್ಪ ಗೌಡ, ಲೋಕಪ್ಪ ಗೌಡ ಕರಮನೆ., ಎಂ.ಸತೀಶ್ ಕಾಮತ್ ನರಿಮೊಗರು, ಪ್ರಗತಿಪರ ಕೃಷಿಕ ಶರತ್‌ಚಂದ್ರ ಬೈಪಾಡಿತ್ತಾಯ ಬಜಪ್ಪಳ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಬು ಶೆಟ್ಟಿ, ನರಿಮೊಗರು ಗ್ರಾ.ಪಂ ಸದಸ್ಯ ಉಮೇಶ್ ಎಂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀವಿಷ್ಣು ಕಲಾವಿದರು ಮಂಗಳೂರು ಇವರಿಂದ ಕುಸಲ್ದ್ ಎಸಲ್ ಡ್ಯಾನ್ಸ್, ಮಿಮಿಕ್ರಿ, ಹಾಸ್ಯ, ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸೆ.೨ರಂದು ಶೋಭಾಯಾತ್ರೆ:
ಗಣೇಶೋತ್ಸವದಲ್ಲಿ ಸೆ.೨ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪಾಹ್ನ ಪುರುಷರಕಟ್ಟೆ ಇಂದಿರಾನಗರ ಶ್ರೀವನದುರ್ಗಾ ಭಜನಾ ಮಂಡಲಿಯವರಿಂದ ಭಜನೆ, ಸಂಜೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಗಣೇಶ ವಿಗ್ರಹ ವೈಭವದ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯು ಪುರುಷರಕಟ್ಟೆಯಿಂದ ಹೊರಟು ಇಂದಿರಾನಗರ, ಕೂಡುರಸ್ತೆ ಮಾರ್ಗವಾಗಿ ಸಂಚರಿಸಿ ಕಲ್ಕಾರ್‌ನಲ್ಲಿ ಜಲಸ್ತಂಭಗೊಳ್ಳುವ ಮೂಲಕ ಸಂಪನ್ನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here