ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಸತತ 9ನೇ ಬಾರಿಗೆ “ಅತ್ಯುತ್ತಮ ಸಂಘ” ಪ್ರಶಸ್ತಿ

0

ದ.ಕ ಹಾಲು ಒಕ್ಕೂಟದಿಂದ ಪುತ್ತೂರು, ಕಡಬ ತಾಲೂಕಿನ ಅತ್ಯುತ್ತಮ ಸಂಘ ಪ್ರಶಸ್ತಿಗೆ ಆಯ್ಕೆ

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘವು ಸತತ 9ನೇ ಬಾರಿಗೆ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸಂಘವು ಅಭೂತಪೂರ್ವ ಸಾಧನೆ ಮಾಡಿ ಜಿಲ್ಲೆಯಲ್ಲಿಯೇ ವಿಶೇಷ ದಾಖಲೆ ಸೃಷ್ಠಿಸಿದೆ. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕೊಡ ಮಾಡುವ ತಾಲೂಕು ಮಟ್ಟದ ಪ್ರಶಸ್ತಿ ಮಾತ್ರವಲ್ಲದೇ ಜಿಲ್ಲಾ ಮಟ್ಟದಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಸಾಧನೆಯ ಮೇಲೆ ಸಾಧನೆ ಮಾಡಿರುವ ಸಂಘವು ಇದೀಗ 2021- 2022ನೇ ಸಾಲಿನಲ್ಲಿಯೂ ಪುತ್ತೂರು, ಕಡಬ ತಾಲೂಕಿನ ಅತ್ಯುತ್ತಮ ಸಂಘ ಪ್ರಶಸ್ತಿಗೆ ಆಯ್ಕೆಯಾಗಿದೆ. ಸೆ 3ರಂದು ಮಂಗಳೂರಿನ ಕುಲಶೇಖರ ಕೋರ್ಡೆಲ್ ಹಾಲ್ ಚರ್ಚ್ಗೇಟ್ ಸಭಾಂಗಣದಲ್ಲಿ ನಡೆಯಲಿರುವ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 36ನೇ ವಾರ್ಷಿಕ ಮಹಾಸಭೆಯಲ್ಲಿ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ನೀಡಿ ಗೌರವಿಸಲಾಗುವುದು. ಸಂಘದ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಕಾರ್ಯ, ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ, ಸಂಘ ಹಾಗೂ ಕೃಷಿಕರಿಗೆ ಅತಿ ಅಗತ್ಯವಿರುವ ಯೋಜನೆಗಳನ್ನು ಅನುಷ್ಠಾನ, ಇದೆಲ್ಲವನ್ನು ಪರಿಗಣಿಸಿ ಸಂಘಕ್ಕೆ ಹಲವಾರು ಪ್ರಶಸ್ತಿಗಳು ಸಂದಿವೆ.

ಕ್ರೀಡಾಕ್ಷೇತ್ರದ ಸಾಧನೆಗೆ ಪ್ರಜ್ವಲ್‌ಗೆ ಸನ್ಮಾನ: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಸಾವಿತ್ರಿ ಚಂದ್ರಶೇಖರ ದೇವಿನಗರ ಚಾರ್ವಾಕ ಇವರ ಪುತ್ರ ಪ್ರಜ್ವಲ್ ಅವರ ಕ್ರೀಡಾ ಕ್ಷೇತ್ರದ ಸಾಧನೆಗೆ ದ.ಕ. ಸಹಕಾರಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಇಂದು ಪ್ರಶಸ್ತಿ ಪ್ರದಾನ

2021- 2022ನೇ ಸಾಲಿನಲ್ಲಿ ಪುತ್ತೂರು, ಕಡಬ ತಾಲೂಕಿನ ಅತ್ಯುತ್ತಮ ಸಂಘ ಪ್ರಶಸ್ತಿಗೆ ಆಯ್ಕೆಯಾಗಿರುವ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮಂಗಳೂರಿನ ಕುಲಶೇಖರ ಕೋರ್ಡೆಲ್ ಹಾಲ್ ಚರ್ಚ್ಗೇಟ್ ಸಭಾಂಗಣದಲ್ಲಿ ಸೆ3ರಂದು ನಡೆಯಲಿರುವ ದ.ಕ ಜಿಲ್ಲಾ ಹಾಲು ಒಕ್ಕೂಟದ 36ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here