ರಾಮಕುಂಜ ಕಿಂಡರ್‌ಗಾರ್ಟನ್‌ನಲ್ಲಿ “ಬ್ಲೂ ಡೇ” ಆಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ “ಬ್ಲೂ ಡೇ” ಆಚರಿಸಲಾಯಿತು. ಮಕ್ಕಳಲ್ಲಿ ಬ್ಲೂ ಬಣ್ಣದ ಅರಿವು ಮೂಡಿಸುವ ಉದ್ದೇಶದಿಂದ ಬ್ಲೂ ಡೇ ಆಚರಣೆಯನ್ನು ಆಚರಿಸಲಾಯಿತು.

ಬ್ಲೂ ಬಣ್ಣದ ವಿವಿಧ ಕ್ರಾಫ್ಟ್‌ಗಳು, ಬಲೂನುಗಳು, ಆಟಿಕೆಗಳನ್ನೆಲ್ಲಾ ತರಗತಿಯಲ್ಲಿ ಒಂದೆಡೆ ಜೋಡಿಸಿ, ತರಗತಿಯನ್ನು ನೀಲಿ ಬಣ್ಣದಿಂದ ಅಲಂಕರಿಸಲಾಯಿತು. ಮಕ್ಕಳು ನೀಲಿ ಬಣ್ಣದ ವಸ್ತ್ರ ಧರಿಸಿ ಕಂಗೊಳಿಸಿದರು. ಆಟದೊಂದಿಗೆ ಪಾಠ ಎಂಬ ಮಾತಿನಂತೆ ಮಕ್ಕಳು ನೀಲಿ ಬಣ್ಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅಂದರೆ ವಿವಿಧ ಬಗೆಯ ಆಟಗಳು, ನೃತ್ಯ, ನೀಲಿ ಬಗೆಗಿನ ನುಡಿಗಳು, ಕೈ ಮತ್ತು ಬೆರಳಿನ ಸಹಾಯದಿಂದ ಡ್ರಾಯಿಂಗ್ ಮಾಡುವ ಮೂಲಕ ಮಕ್ಕಳಲ್ಲಿ ನೀಲಿ ಬಣ್ಣದ ತಿಳುವಳಿಕೆ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೋಹಿತಾ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here