ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಧರ್ಮನಗರ -“ಸುವರ್ಣ ಸಂಭ್ರಮ-2022” ಸಾಂಸ್ಕೃತಿಕ ಸ್ಪರ್ಧೆ

0

ಪ್ರಥಮ: ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ

ದ್ವಿತೀಯ: ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜು ಪುತ್ತೂರು

ಪುತ್ತೂರು: ರಾಷ್ಟ್ರೀಯ ಸ್ವರ್ಯ ಸೇವಕ ಸಂಘದ ಪ್ರೇರಣೆಯೊಂದಿಗೆ ಪ್ರಾರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಧರ್ಮನಗರದಲ್ಲಿ ಕಳೆದ 50 ವರ್ಷಗಳಿಂದ ಗಣೇಶೋತ್ಸವವನ್ನು ವಿಜೃಂಭನೆಯಿಂದ ಆಚರಿಸಿಕೊಂಡು ಬರುತ್ತಿದ್ದು ಈ ಬಾರಿ 51 ನೇ ವರ್ಷದ ಗಣೇಶೋತ್ಸ ಕಾರ್ಯಕ್ರಮ 31-08-2022 ನೇ ಬುಧವಾರದಿಂದ 2-09-2022 ನೇ ಶುಕ್ರವಾರದವರೆಗೆ ಮೂರು ದಿನಗಳ ಕಾಲ ವಿವಿಧ ವೈದಿಕ- ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳೊಂದಿಗೆ ಧರ್ಮಸೇವಾ ವಿಶ್ವಸ್ಥ ಮಂಡಳಿ, ಸಮಾಜ ಮಂದಿರ ಧರ್ಮನಗರ ಕಂಬಳಬೆಟ್ಟುವಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

31-08-2022 ನೇ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಹ್ವಾನಿತ 5 ಪಿಯುಸಿ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳ “ಸುವರ್ಣ ಸಂಭ್ರಮ 2022” ಎಂಬ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೇಶಭಕ್ತಿಗೀತೆ, ಜಾಗೃತಿ ಗೀತೆ, ಜಾನಪದ ಗೀತೆ, ಭಾವಗೀತೆ, ಸಾಮಾಜಿಕ ಕಳಕಳಿ ಇರುವ ಪ್ರಹಸನ, ಭರತನಾಟ್ಯ, ಯಕ್ಷಗಾನ ಇತ್ಯಾದಿ ವಿಷಯಗಳನ್ನೊಳಗೊಂಡ “ಸುವರ್ಣ ಸಂಭ್ರಮ 2022” ಸಾಂಸ್ಕೃತಿಕ ಸ್ಪರ್ಧೆಯಲ್ಲಿ “ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ” ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನ ಪಡೆದು 15,000 ನಗದು ಹಾಗೂ “ಸುವರ್ಣ ಸಂಭ್ರಮ-2022″ಟ್ರೋಫಿಯೊಂದಿಗೆ ವಿನ್ನರ್ಸ್ ಆಗಿ ಮಿಂಚಿದ್ದಾರೆ. ಪುತ್ತೂರು ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಂಡ ದ್ವಿತೀಯ ಬಹುಮಾನ ಪಡೆದು 10,000 ನಗದು ಹಾಗೂ “ಸುವರ್ಣ ಸಂಭ್ರಮ-2022″ಟ್ರೋಫಿ ಪಡೆದು ರನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ.

ಸ್ಪರ್ಧೆಯಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಗೈದ ಕನ್ನಡ- ತುಳು ಭಾಷೆಗಳಲ್ಲಿ ಅಂಕಣಗಾರ್ತಿ, ರಾಜ್ಯ ಜಾನಪದ ವೇದಿಕೆ ತುಳು ಕಥಾ ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡ ಮಲ್ಲಿಕಾ ಜೆ ರೈ, ಹಾಗೂ ಝೀ ಟಿವಿ ಹಿಂದಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ ಲ್ ಮಾಸ್ಟರ್ ಬಹುಮುಖ ಪ್ರತಿಭೆ, ತುಳು ಚಿತ್ರ ರಂಗದ Best child Artist 2022 ಅವಾರ್ಡ್ ವಿಜೇತೆ ಬಾಲ ನಟಿ ತುಳುವಸಿರಿ ಅದ್ವಿಕಾ ಶೆಟ್ಟಿ, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾಕ್ಷೇತ್ರದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಹಲವು ಪ್ರಶಸ್ತಿ, ಪದಕಗಳೊಂದಿಗೆ ದಾಖಲೆ ಮೆರೆದು ಬಹುಮುಖ ಪ್ರತಿಭೆ ಧನ್ವಿ ಜೆ ರೈ ತೀರ್ಪುಗಾರರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here