ಕಾಣಿಯೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಕೊಡಮಾಡುವ 2021-22ನೇ ಸಾಲಿನ ಪುತ್ತೂರು, ಕಡಬ ತಾಲೂಕಿನ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘವು ಸತತ ೯ನೇ ಬಾರಿಗೆ ತನ್ನ ಮುಡಿಗೇರಿಸಿಕೊಂಡಿದ್ದು, ಸೆ 3ರಂದು ಮಂಗಳೂರಿನ ಕುಲಶೇಖರ ಕೋರ್ಡೆಲ್ ಹಾಲ್ ಚರ್ಚ್‌ಗೇಟ್ ಸಭಾಂಗಣದಲ್ಲಿ ನಡೆದ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 36ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಜಯರಾಮ ರೈ ಬಳಜ್ಜ, ನಿರ್ದೇಶಕ ನಾರಾಯಣ ಪ್ರಕಾಶ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಧನಂಜಯ ಕೇನಾಜೆ ಮತ್ತು ಕಾರ್ಯದರ್ಶಿ ದಮಯಂತಿ ಮುದುವ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಸುಂದರ ಗೌಡ ಕೀಲೆ, ಉಮೇಶ್ ಕೆಳಗಿನಕೇರಿ, ಸಿಬ್ಬಂದಿಗಳಾದ ನಿಶ್ಚಿತ್ ಅಬಿಕಾರ, ಸವಿತಾ, ತೇಜಸ್ವಿನಿ ಪ್ರಶಸ್ತಿ ಸ್ವೀಕರಿಸಿದರು.