ಚಿತ್ರ- ಉಮಾಪ್ರಸಾದ್ ರೈ ನಡುಬೈಲು
- 7,48,70,720.20 ರೂ ಠೇವಣಾತಿ
- 7,31,50,905.00 ರೂ ಸಾಲ ವಿತರಣೆ
- 25,32,191.94 ರೂ. ಲಾಭ
- ಸದಸ್ಯರಿಗೆ ಶೇ. 16 ಡಿವಿಡೆಂಡ್
ಪುತ್ತೂರು; ಇಲ್ಲಿನ ಸಿ.ಪಿ.ಸಿ, ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ 20 ನೇ ವರ್ಷದ ಮಹಾಸಭೆಯು ಸೆ. 4 ರಂದು ಸಂಸ್ಥೆಯ ಕಚೇರಿಯಲ್ಲಿ ಜರಗಿತು.
ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಕೆ.ಕಸ್ತೂರಿ ಪ್ರಭುರವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಸ್ಥೆಯು 2021-22 ನೇ ಸಾಲಿನಲ್ಲಿ 7,48,70,7720.20 ರೂ, ಠೇವಣಾತಿ ಹೊಂದಿದ್ದು, 7,31,50,905.00 ರೂ ಸಾಲ ವಿತರಣೆ ಮಾಡಲಾಗಿದೆ. 25,32,191.94 ರೂ, ಲಾಭ ಬಂದಿರುತ್ತದೆ, ಈ ಬಾರಿ ಸದಸ್ಯರಿಗೆ ಶೇ. 16 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು 2002 ನವೆಂಬರ್ 25 ರಂದು ಉದ್ಘಾಟನೆಗೊಂಡಿದ್ದು, 2528 ಮಂದಿ ಸದಸ್ಯರುಗಳು ಇದ್ದು, 53,83,600 ರೂ ಪಾಲು ಬಂಡವಾಳ ಇದೆ ಎಂದರು.
ಸಹಕಾರಿಯ ನಿಧಿಗಳು:
ವರ್ಷದ ಆರಂಭದಲ್ಲಿ ಸಹಕಾರಿಯ ನಿಧಿಗಳು ರೂ-1,48,19,377,99 ಆಗಿದ್ದು, ವರ್ಷಾಂತ್ಯದಲ್ಲಿ ರೂ 1,64,15,845.29 ಕ್ಕೆ ಏರಿರುತ್ತದೆ, ಇದರಲ್ಲಿ ಸಹಕಾರಿ ಕ್ಷೇಮ ನಿಧಿಯು ರೂ-59,40,493.29 ಮತ್ತು ಇತರ ನಿಧಿಗಳು ರೂ-1,04,75,352.00 ಆಗಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಎನ್. ಸುಭಾಶ್ ನಾಯಕ್ , ನಿರ್ದೆಶಕರುಗಳಾದ ವಸಂತ ಬಿ. ಎ.ಬಿ.ಮನೋಜ್ ಕುಮಾರ್, ದೀಪಾ ಪ್ರಭು, ಯು.ಬಾಲಕೃಷ್ಣ ನಾಯಕ್, ಪಾಂಡುರAಗ ಹೆಗ್ಡೆ, ಪುರುಷೋತ್ತಮ ಪ್ರಭು, ರಾಜರಾಮ್ ಪ್ರಭು, ಯಶವಂತ ನಾಯಕ್, ಶಿವಾನಂದ ನಾಯಕ್, ಶಿವರಾಮ ಪ್ರಭು, ಸುಮಿತ್ರ ಪಿ, ಯತೀಂದ್ರನಾಥ್, ವಿದ್ಯಾ ನಾಯಕ್ ಉಪಸ್ಥಿತರಿದ್ದರು.
ಸದಸ್ಯ ಶ್ರೀನಿವಾಸ್ ಸಾಮಂತ್ರವರುಗಳು ವಿವಿಧ ಸಲಹೆ ಸೂಚನೆಯನ್ನು ನೀಡಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಿ ವರದಿ ವಾಚಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ನಳಿನಾಕ್ಷಿ , ದೀಕ್ಷಿತಾ ಮತ್ತು ಭವ್ಯ ರವರು ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಗೌರವಾರ್ಪಣೆ-
ಸಂಸ್ಥೆಯ ಪಿಗ್ಮಿ ಸಂಗ್ರಾಹಕರಾದ ಸತೀಶ್ ಪ್ರಭು ಮಣಿಯ, ಶ್ರೀಧರ್, ದಿನೇಶ್, ಗೋಪಾಲಕೃಷ್ಣ ಭಟ್ ಮತ್ತು ಸಂಸ್ಥೆಯ ಸಿಬ್ಬಂಧಿಗಳನ್ನು ಸಂಸ್ಥೆಯ ಅಧ್ಯಕ್ಷೆ ಕೆ.ಕಸ್ತೂರಿ ಪ್ರಭುರವರು ಹೂಗುಚ್ಚ, ಸ್ಮರಣಿಕೆ ನೀಡಿ ಗೌರವಿಸಿದರು.
ಲಾವಣ್ಯ ಪ್ರಾರ್ಥನೆಗೈದರು, ಸಂಸ್ಥೆಯ ಪಿಗ್ಮಿ ಸಂಗ್ರಾಹಕ ಸತೀಶ್ ಪ್ರಭು ಮಣಿಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಗ್ರಾಹಕರ ನಿರಂತರ ಸಹಕಾರದಿಂದ ಅಭಿವೃದ್ಧಿ
ಪುತ್ತೂರಿನ ಸಿಪಿಸಿ ಸಂಕಿರ್ಣದಲ್ಲಿ ನಿರಂತರವಾಗಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಹಕಾರಿಯ ನಿಯಮಗಳಿಗನುಸಾರವಾಗಿ ಸದಸ್ಯರಿಗೆ ಶ್ರೀಘ್ರವಾಗಿ ಸಾಲ ನೀಡಲಾಗುವುದು. ಚಿನ್ನಾಭರಣಗಳನ್ನು ಭದ್ರತೆಯಾಗಿಡಲು ಬೇಕಾದ ಸೇಫ್ ಲಾಕರಿನ ವ್ಯವಸ್ಥೆ ಕೂಡ ಇದ್ದು, ಸದಸ್ಯರಿಗೆ ಬಾಡಿಗೆ ನೆಲೆಯಲ್ಲಿ ಭದ್ರಕೋಶವನ್ನು ನೀಡುವ ವ್ಯವಸ್ಥೆ ಇದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿ – ಕೆ.ಕಸ್ತೂರಿ ಪ್ರಭು. ಅಧ್ಯಕ್ಷರು, ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಪುತ್ತೂರು