ತಾಲೂಕು, ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ :  ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಪುತ್ತೂರು ತಾಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ಶಿಕ್ಷಕರ ದಿನಾಚರಣೆ 2022 ಸೋಮವಾರ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎನ್‌ಸಿಸಿ ಕೆಡೆಟ್‌ಗಳು ಗೌರವ ವಂದನೆ ಸಲ್ಲಿಸಿದರು. ಮುಖ್ಯದ್ವಾರದಲ್ಲಿ ಸಿಂಗಾರಿ ಚೆಂಡೆ ಮೇಳ ಹಾಗೂ ವಿವೇಕಾನಂದ ಶಾಲೆಯ ಸಿಬ್ಬಂದಿಗಳು ಶಿಕ್ಷಕರನ್ನು ಹಾಗೂ ಅತಿಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಕಲಿಕಾ ಚೇತರಿಕಾ ವರ್ಷ 2022-23, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಬೆಂಗಳೂರು ಶಿಕ್ಷಕರ ಕಲ್ಯಾಣ ನಿಧಿ, ಮಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಶಿಕ್ಷಕರ ಕರ್ತವ್ಯ ನೆನಪಿಸುವ ದಿನಾಚರಣೆ:
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಶಿಕ್ಷಕರ ಕರ್ತವ್ಯಗಳನ್ನು ನೆನಪಿಸುತ್ತಾ, ಮುಂದೆ ಸಾಗಬೇಕಾದ ದಾರಿಯನ್ನು ನೆನಪಿಸುವ ಕೆಲಸ ಶಿಕ್ಷಕರ ದಿನಾಚರಣೆ ಮೂಲಕ ಆಗಬೇಕಿದೆ. ಭವಿಷ್ಯವನ್ನು ನಿರ್ಧರಿಸುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಆದ್ದರಿಂದ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು. ಓರ್ವ ರಾಜಕಾರಣಿ ತಪ್ಪು ಮಾಡಿದರೆ, ಐದು ವರ್ಷಗಳ ಕಾಲ ಸುಧಾರಿಸಿಕೊಳ್ಳಬೇಕಾಗುತ್ತದೆ. ಆದರೆ ಓರ್ವ ಶಿಕ್ಷಕ ತಪ್ಪು ಮಾಡಿದರೆ ಭವಿಷ್ಯವೇ ವ್ಯತ್ಯಾಸವಾಗಿ ಬಿಡುತ್ತದೆ. ಆದ್ದರಿಂದ ಶಿಕ್ಷಕರು ಬಹಳ ಎಚ್ಚರಿಕೆಯಿಂದ ಭವ್ಯ ಸಮಾಜವನ್ನು ನಿರ್ಮಿಸುವಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ವಿವೇಕಾನAದರು, ಮಹಾತ್ಮ ಗಾಂಧೀಜಿ, ಡಾ. ಅಬ್ದುಲ್ ಕಲಾಂ ಅವರು ಕಂಡ ಕನಸು ನನಸಾಗಬೇಕಾದರೆ ನಮ್ಮ ವಿದ್ಯಾರ್ಥಿಗಳನ್ನು ಭವಿಷ್ಯದ ಭಾರತಕ್ಕೆ ಪೂರಕವಾಗುವಂತೆ ಬೆಳೆಸಬೇಕಾದ ಅಗತ್ಯವಿದೆ. ಶಿಕ್ಷಕರ ದಿನಾಚರಣೆ ಸಂದರ್ಭ ಮತ್ತೊಮ್ಮೆ ಈ ಕರ್ತವ್ಯಗಳನ್ನು ನಾವು ನೆನಪಿಸಿಕೊಳ್ಳಬೇಕು. ಶಿಕ್ಷಕರೊಬ್ಬರು ವಿವೇಕಾನಂದರನ್ನು ರಾಮಕೃಷ್ಣ ಪರಮಹಂಸರ ಬಳಿ ಕರೆದುಕೊಂಡು ಬಾರದೇ ಇರುತ್ತಿದ್ದರೆ, ಭಾರತವನ್ನು ವಿಶ್ವ ಮಟ್ಟದಲ್ಲಿ ಗುರುತಿಸಿದ ಓರ್ವ ಸಂತ ನಮಗೆ ಸಿಗುತ್ತಿರಲಿಲ್ಲ. ವಿದ್ಯಾರ್ಥಿಯೋರ್ವನ ಪ್ರತಿಭೆಯನ್ನು ಗುರುತಿಸಿ, ಅವನಿಗೆ ಸತ್ಪಥವನ್ನು ತೋರಿಸುವ ಶಿಕ್ಷಕನ ಚಾಕಚಕ್ಯತೆಯನ್ನು ನಾವಿಲ್ಲಿ ಕಾಣಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಎತ್ತರಕ್ಕೆ ಏರಬೇಕು ಎಂದರೆ, ಇಲ್ಲಿರುವ ಯುವಜನರಿಗೆ ಅಥವಾ ವಿದ್ಯಾರ್ಥಿಗಳಿಗೆ ಸರಿಯಾದ ಪಥವನ್ನು ತೋರಿಸುವ ಕೆಲಸ ಶಿಕ್ಷಕರಿಂದ ಆಗಬೇಕಿದೆ ಎಂದು ಎಚ್ಚರಿಸಿದರು.

ಜೀವನದ ಶಿಕ್ಷಣ ನೀಡಿ:
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇ ಗೌಡ ಮಾತನಾಡಿ, ಶಿಕ್ಷಣ ಕ್ಷೇತ್ರದ ಪಾವಿತ್ರö್ಯತೆಯನ್ನು ಕಾಪಾಡಬೇಕಾಗಿದೆ. ಪಠ್ಯಪುಸ್ತಕ ರಚನೆಯಲ್ಲಿ ಶಿಕ್ಷಣ ತಜ್ಞರ ಹೊರತಾಗಿ ಯಾರೂ ಪ್ರವೇಶ ಮಾಡಬಾರದು. ಪಠ್ಯ ಪುಸ್ತಕ ನಿರ್ಮಾಣದಲ್ಲಿ ರಾಜಕೀಯ ಪ್ರವೇಶ ಆಗಬಾರದು. ಪ್ರಶಸ್ತಿ ವಿತರಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು, ಮಕ್ಕಳಲ್ಲಿರುವ ಅಂಕುಡೊAಕು ತಿದ್ದಿ ಉತ್ತಮ ಸಮಾಜ ನಿರ್ಮಿಸುವ ಕಾರ್ಯ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶಿಕ್ಷಕರ ಮೂಲಕ ನಡೆಯಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕಾದ ಹೊಣೆ ಸರಕಾರ ಹಾಗೂ ಶಿಕ್ಷಕರಲ್ಲಿದೆ. ಪಠ್ಯ ಶಿಕ್ಷಣದ ಜೊತೆಗೆ ಶಿಕ್ಷಕರು ಮಕ್ಕಳಿಗೆ ಜೀವನದ ಶಿಕ್ಷಣ ನೀಡಬೇಕು ಎಂದರು.

ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿ:
ದಿಕ್ಸೂಚಿ ಭಾಷಣ ಮಾಡಿದ ನ್ಯಾಯವಾದಿ, ರೋಟರಿ ಜಿಲ್ಲಾ ಗವರ್ನರ್ ಎ.ಎಸ್.ಎನ್ ಹೆಬ್ಬಾರ್ ಕುಂದಾಪುರ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆಯ ವಿಚಾರಗಳನ್ನು ತಿಳಿಸುವ ಕೆಲಸ ಪಠ್ಯದಲ್ಲಿ ಆಗುತ್ತಿಲ್ಲ. ಇದಕ್ಕೆ ಕಾರಣ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿರುವ ಮೆಕಾಲೆ ಶಿಕ್ಷಣ ಪದ್ಧತಿ. ಶಿಕ್ಷಕರು ಇದರ ಬಗ್ಗೆ ಆಲೋಚಿಸಬೇಕಾಗಿದೆ. ಶಿಕ್ಷಣದ ಜೊತೆಗೆ ಜ್ಞಾನ, ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ. ಜಗತ್ತನ್ನೇ ಆಳುವಂತಹ ಶಿಕ್ಷಣ ಮಕ್ಕಳಿಗೆ ದೊರಕಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಾಗಿದೆ. ದೇಶದ ಪರಂಪರೆಯನ್ನು ಉಳಿಸುವ ಕೆಲಸ ಶಿಕ್ಷಣದಿಂದ ಆಗಬೇಕಾಗಿದೆ ಎಂದರು.
ದೇಶದ ಪ್ರಸಕ್ತ ಸನ್ನಿವೇಶ ಗಮನಿಸುವಾಗ ಸಾಂಸ್ಕೃತಿಕ ಪರಂಪರೆಯನ್ನು ವೈಭವೀಕರಿಸುವ ಹಾಗೂ ಭಾರತೀಯ ವಿಚಾರಧಾರೆಯನ್ನು ಬಿಂಬಿಸುವ ಶಿಕ್ಷಣ ನಮ್ಮ ಮುಂದಿನ ಅವಶ್ಯಕತೆ. ದೇಶದ ಭವ್ಯತೆ, ಪರಂಪರೆಯನ್ನು ಹೊಂದಿದ್ದರೂ ಕೂಡ, ಇದು ಪಠ್ಯಪುಸ್ತಕಗಳಲ್ಲಿ ದಾಖಲಾಗಿಲ್ಲ. ಆದ್ದರಿಂದ ಶಿಕ್ಷಕರು ಈ ಖಾಲಿ ಜಾಗವನ್ನು ತುಂಬುವ ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳನ್ನು ಭಾರತೀಯ ಸಂಸ್ಕೃತಿಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡಬೇಕಾಗಿದೆ ಎಂದರು.

ಸ್ಮಾರ್ಟ್ ವಿದ್ಯಾರ್ಥಿ, ಶಿಕ್ಷಕರು ಅಗತ್ಯ:
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಶಿಕ್ಷಣಕ್ಕೆ ಅಗಾಧ ಶಕ್ತಿ ಇದೆ. ಶಿಕ್ಷಣ ಹಾಗೂ ಶಿಕ್ಷಕರಿಂದ ಜಗತ್ತನ್ನೇ ಬದಲಾಯಿಸಲು ಸಾಧ್ಯ. ಇದಕ್ಕೆ ಪೂರಕವಾಗಿ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಪರಿಚಯಿಸಿದ್ದು, ಅದರಲ್ಲಿ ಅಮೂಲಾಗ್ರ ಬದಲಾವಣೆ ತಂದು, ದೇಶದ ಭವ್ಯ ಪರಂಪರೆಯನ್ನು ತಿಳಿಸುವ ಕಾರ್ಯ ಆಗುತ್ತಿದೆ ಎಂದ ಅವರು, ಯಾರೂ ಕೂಡ ಅರ್ಜಿ ಸಲ್ಲಿಸಿ ಸಾಧಕರಾಗುವುದಿಲ್ಲ. ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಾ, ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಸಮಾಜ ಹಾಗೂ ಅಧಿಕಾರಿಗಳು ಶಿಕ್ಷಕರನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದರು.
ತಾಲೂಕಿನಲ್ಲಿ 5 ಪ್ರಾಥಮಿಕ, ಪ್ರೌಢಶಾಲೆಗೆ ಸ್ಮಾರ್ಟ್ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ, ಪೀಠೋಪಕರಣಗಳನ್ನು ಒದಗಿಸಲಾಗಿದೆ. ನರೇಗಾ ಯೋಜನೆಯಲ್ಲಿ ಶಾಲೆಗಳಿಗೆ ಆಟದ ಮೈದಾನ, ಆವರಣ ಗೋಡೆ, ಶೈಕ್ಷಣಿಕ ವರ್ಷದಲ್ಲಿ 38 ಕೊಠಡಿ, ತಾ.ಪಂ., ಜಿ.ಪಂ.ನ ಅನುದಾನದಲ್ಲಿ 18 ಕೊಠಡಿ, ಶಾಸಕರ ಪ್ರದೇಶಾಭಿವೃದ್ಧಿ, ಮಲೆನಾಡು ಅಭಿವೃದ್ಧಿ, ಕರಾವಳಿ ಪ್ರಾಧಿಕಾರದ ಯೋಜನೆಯಲ್ಲಿ 10 ಕೊಠಡಿ ಒದಗಿಸಲಾಗಿದೆ. ಮುಂದಿನ ಹತ್ತು ವರ್ಷದಲ್ಲಿ ಸ್ಮಾರ್ಟ್ ಕೊಠಡಿಗಳನ್ನು ಒದಗಿಸುವ ಅವಶ್ಯಕತೆ ಇದೆ. ಮುಂದೆ ವಿದ್ಯಾರ್ಥಿ ಹಾಗೂ ಶಿಕ್ಷಕರು ಸ್ಮಾರ್ಟ್ ಆಗಬೇಕು ಎನ್ನುವುದೇ ನಮ್ಮ ಉದ್ದೇಶ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಸಿಇಓ ಡಾ. ಕುಮಾರ, ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ., ಡಿ.ವೈ.ಎಸ್ಪಿ ವೀರಯ್ಯ ಹೀರೆಮಠ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ತಹಸೀಲ್ದಾರ್ ನಿಸರ್ಗಪ್ರಿಯ ಜೆ., ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಮಂಜುಳಾ, ಆರ್‌ಎಂಎಸ್‌ಎ ಸುಮಂಗಲಾ ನಾಯಕ್, ಡಯಟ್‌ನ ಹಿರಿಯ ಉಪನ್ಯಾಸಕಿ ಗೀತಾ ಎನ್. ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್, ಎಪಿಎಂಸಿ ಪ್ರಭಾರ ಕಾರ್ಯದರ್ಶಿ ರಾಮಚಂದ್ರ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಎನ್., ಬಿಆರ್‌ಸಿ ನವೀನ್ ಸ್ಟೀಫನ್ ವೇಗಸ್, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್, ಜಿಲ್ಲಾ ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಪ್ರ.ಕಾರ್ಯದರ್ಶಿ ವಿಮಲ್ ಕುಮಾರ್ ನೆಲ್ಯಾಡಿ, ಜಿಲ್ಲಾ ದೈ.ಶಿ.ಶಿ. ಸಂಘದ ಅಧ್ಯಕ್ಷ ಲಿಲ್ಲಿ ಪಾಯಸ್, ಗ್ರೇಡ್ 1 ದೈ.ಶಿ.ಶಿ. ಸಂಘದ ಅಧ್ಯಕ್ಷ ಗಣೇಶ್ ಏನೇಕಲ್, ರಾಜ್ಯ ದೈ.ಶಿ.ಶಿ. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್, ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಯಶ್ರೀ ಜಿ.ಎಸ್., ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಮೋಹನ್ ಗೌಡ ಏನಾಜೆ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಕೆ., ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಕೆ., ಪುತ್ತೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ, ಕಡಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕಡಬ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲಾ, ಪುತ್ತೂರು ದೈ.ಶಿ.ಶಿ. ಸಂಘದ ಅಧ್ಯಕ್ಷ ಮೋನಪ್ಪ ಪಟ್ಟೆ, ಪುತ್ತೂರು ಗ್ರೇಡ್ 1 ದೈ.ಶಿ.ಶಿ. ಸಂಘದ ಅಧ್ಯಕ್ಷ ಸೀತಾರಾಮ ಗೌಡ ಹೀರೆಬಂಡಾಡಿ, ಟಿಜಿಟಿ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಸತೀಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಶುಭಾ ರಾವ್, ಪವಿತ್ರಾ ರೂಪೇಶ್, ಶಶಿಕಲಾ, ಲತಾ ಪ್ರಾರ್ಥಿಸಿದರು. ಡಿಡಿಪಿಐ ಸುಧಾಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್. ವಂದಿಸಿ, ಕಡಬ ಸರಕಾರಿ ಪ.ಪೂ. ಕಾಲೇಜಿನ ಶಿಕ್ಷಕ ಪ್ರಶಾಂತ್ ಅನಂತಾಡಿ ಹಾಗೂ ಸರಕಾರಿ ಉನ್ನತ ಉ.ಹಿ.ಪ್ರಾ. ಶಾಲಾ ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪ್ರದಾನ:
ಇದೇ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬೆಳ್ತಂಗಡಿ ತಾಲೂಕಿನ ನೆಕ್ಕಿಲ್ ಸ.ಕಿ.ಪ್ರಾ. ಶಾಲಾ ಸಹಶಿಕ್ಷಕ ಬಸನಗೌಡ ಎಸ್. ಬಿರಾದಾರ, ಗುತ್ಯಡ್ಕ ಎಳನೀರು ಸ.ಹಿ.ಪ್ರಾ. ಶಾಲಾ ಪ್ರಭಾರ ಮುಖ್ಯಶಿಕ್ಷಕ ರವೀಂದ್ರ ಡಿ.ಎನ್., ಕೊಯ್ಯೂರು ಸ. ಪ್ರೌಢಶಾಲಾ ಸಹಶಿಕ್ಷಕ ರಾಮಚಂದ್ರ ದೊಡಮನಿ, ಬಂಟ್ವಾಳ ತಾಲೂಕಿನ ನೆಟ್ಲ ಸ.ಹಿ.ಪ್ರಾ. ಶಾಲಾ ಸಹಶಿಕ್ಷಕ ಪ್ರವೀಣ ಬಿ, ಮೂಡುಪಡುಕೋಡಿ ಸ.ಉ.ಹಿ.ಪ್ರಾ ಶಾಲಾ ಸಹಶಿಕ್ಷಕ ಸುನಿಲ್ ಸಿಕ್ವೇರಾ, ಸಾಲೆತ್ತೂರು ಸ. ಪ್ರೌಢಶಾಲಾ ದೈ.ಶಿ.ಶಿ ರಾಘವೇಂದ್ರ, ಮಂಗಳೂರು ಉತ್ತರ ವಲಯದ ಕೆಂಜಾರು ಹಿ.ಪ್ರಾ. ಶಾಲಾ ಸಹಶಿಕ್ಷಕಿ ರೋಸ್‌ಲೀನ್ ಆರ್.ಎಸ್, ಮರಕಡ ಸ.ಮಾ.ಹಿ.ಪ್ರಾ. ಶಾಲಾ ಪದವೀಧರೇತರ ಮುಖ್ಯಶಿಕ್ಷಕಿ ನೇತ್ರಾವತಿ ಎ., ಡೊಂಗರಕೇರಿ ಅನುದಾನಿತ ಕೆನರಾ ಪ್ರೌಢಶಾಲಾ ಚಿತ್ರಕಲಾ ಸಹಶಿಕ್ಷಕಿ ರಾಜೇಶ್ವರಿ ಕೆ., ಮಂಗಳೂರು ದಕ್ಷಿಣ ವಲಯದ ಪಾವೂರು ಸ.ಹಿ.ಪ್ರಾ. ಶಾಲಾ ಸಹಶಿಕ್ಷಕ ಅಬ್ದುಲ್ ಮಜೀದ್ ಎಂ., ಬಗಂಬಿಲ ಸ.ಹಿ.ಪ್ರಾ. ಶಾಲಾ ಸಹಶಿಕ್ಷಕ ವಸಂತ ರೈ ಬಿ.ಕೆ., ಪದುವ ಅನುದಾನಿತ ಪ್ರೌಢಶಾಲಾ ಸಹಶಿಕ್ಷಕ ಸ್ಟೇನಿ ಗೇಬ್ರಿಯೆಲ್ ತಾವ್ರೋ, ಮೂಡಬಿದ್ರೆ ವಲಯದ ಕಂಚರ್ಲಗುಡ್ಡೆ ಸ.ಕಿ.ಪ್ರಾ ಶಾಲಾ ಸಹಶಿಕ್ಷಕಿ ಸುಜಾತಾ, ಮೂಡಮಾರ್ನಾಡು ಸ.ಹಿ.ಪ್ರಾ ಶಾಲಾ ಮುಖ್ಯಶಿಕ್ಷಕಿ ಜ್ಯೋತಿ ಡಿಸೋಜ, ಅಳಿಯೂರು ಸ.ಪ್ರೌಢಶಾಲಾ ಸಹಶಿಕ್ಷಕ ಸುಬ್ರಹ್ಮಣ್ಯ ವಿ, ಕಡಬ ತಾಲೂಕು ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಗೋವಿಂದ ನಾಯ್ಕ ಬಿ., ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಯರಾಮ ಶೆಟ್ಟಿ, ಸುಳ್ಯ ತಾಲೂಕಿನ ಕೇನ್ಯ ಸ.ಕಿ.ಪ್ರಾ ಶಾಲಾ ಸಹಶಿಕ್ಷಕಿ ರೇವರಿ ಕೊಡಪಾಡಿ, ಕೆ.ಪಿ.ಎಸ್ ಬೆಳ್ಳಾರೆಯ ಪ.ಮುಖ್ಯ ಶಿಕ್ಷಕ ಮಾಯಿಲ ಮೇರ ಯಾನೆ ಜಿ. ಮಾಯಿಲಪ್ಪ, ಪಂಜ ಸ.ಪ್ರೌ.ಶಾಲಾ ದೈ.ಶಿಕ್ಷಣ ಶಿಕ್ಷಕಿ ಯೋಗೀಶ್ ಸಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಾಪೆಮಜಲು ಸರಕಾರಿ ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕಿ ತೆರೇಜ್ ಎಂ. ಸಿಕ್ವೇರಾ ಅವರು ಸಮಾರಂಭಕ್ಕೆ ಗೈರಾಗಿದ್ದರು. ಮಂಗಳೂರು ಡಯಟ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕಿ ರಾಜಲಕ್ಷ್ಮೀ ಕೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಎನ್‌ಸಿಸಿ ಕೆಡೆಟ್‌ಗಳು ಗೌರವ ವಂದನೆ ಸಲ್ಲಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಉದ್ಘಾಟಿಸಿದರು.

ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here