ಸಹಾಯಹಸ್ತ ಲೋಕಸೇವಾ ಟ್ರಸ್ಟ್ನಿಂದ ಸಹಾಯಧನ, ಆಹಾರ ಸಾಮಗ್ರಿ ವಿತರಣೆ

0

ಪುತ್ತೂರು: ಸಹಾಯ ಹಸ್ತ ಲೋಕಸೇವಾ ಟ್ರಸ್ಟ್ ಕರ್ನಾಟಕ ಇದರ ಆಶ್ರಯದಲ್ಲಿ ಆಹಾರ ಸಾಮಾಗ್ರಿ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮ ಸೆ. 4ರಂದು ಪುತ್ತೂರು ಮಾತೃಛಾಯಾ ಸಭಾಭವನದಲ್ಲಿ ಜರಗಿತು.
ಸಹಾಯಹಸ್ತ ವಿತರಿಸಿ ಮಾತನಾಡಿದ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಶ್ರೀಮಂತರಾದರೆ ಸಾಲದು. ಹೃದಯ ಶ್ರೀಮಂತಿಕೆ ಬೇಕು. ಹಣವನ್ನು ಕೂಡಿಡುವುದು ಉತ್ತಮ ಕೆಲಸವೇ ಆಗಿದೆ. ಆದರೆ ಆಗರ್ಭ ಶ್ರೀಮಂತರಾಗುವವರೆಗೆ ಹಣ ಕೂಡಿಡುವುದು ಉತ್ತಮವಲ್ಲ. ತಾನೋರ್ವನೇ ಶ್ರೀಮಂತನಾಗಬೇಕು ಎಂದುಕೊಳ್ಳುವುದು ಸರಿಯಲ್ಲ. ನಾವು ದುಡಿದದ್ದರಲ್ಲಿ ಸಮಾಜಕ್ಕೆ ಒಂದಷ್ಟನ್ನು ನೀಡುವ ಗುಣ ಬೆಳೆಸಿಕೊಳ್ಳಬೇಕು. ಇಂತಹ ಉತ್ತಮ ಕಾರ್ಯವನ್ನು ಸಹಾಯ ಹಸ್ತ ಲೋಕಸೇವಾ ಟ್ರಸ್ಟ್ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ನಗರಸಭೆ ಸದಸ್ಯ ಪೇಮಲತಾ ಮಾತನಾಡಿ, ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ ಎಂಬ ಗಾದೆ ಮಾತೇ ಇದೆ. ಆದ್ದರಿಂದ ನಾವು ದುಡಿದದ್ದರಲ್ಲಿ ಸಮಾಜಕ್ಕೆ ಒಂದಷ್ಟು ಹಣ ವಿನಿಯೋಗಿಸುವ ಅಥವಾ ನೀಡುವ ಕೆಲಸ ಮಾಡಬೇಕು. ನಮ್ಮ ವಾರ್ಡ್ ಎಂದರೆ ನಮಗೆ ಮನೆ ಇದ್ದಂತೆ. ಅಲ್ಲಿ ನಾವು ಸ್ವಯಂಸೇವಕರಾಗಿ ಕೆಲಸ ಮಾಡಬೇಕು. ಅದೇ ರೀತಿ ನಮ್ಮ ಸಮಾಜದಲ್ಲೂ ನಾವು ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ದೂಜಾ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಪ್ರವೀಣ್ ಉಪಸ್ಥಿತರಿದ್ದರು.
ಶಾನ್ವಿ ಪ್ರಾರ್ಥಿಸಿದರು. ಸುಜಾತಾ ಸ್ವಾಗತಿಸಿದರು. ವಿದ್ಯಾ, ಸರಸ್ವತಿ, ಮನೋಹರ್ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಮನೋಹರ್ ವರದಿ ವಾಚಿಸಿ, ವಂದಿಸಿದರು. ಗಿರೀಶಮ್ ಕಾರ್ಯಕ್ರಮ ನಿರೂಪಿಸಿದರು.

ಸಹಾಯಧನ, ಆಹಾರ ಸಾಮಗ್ರಿ ವಿತರಣೆ:
45 ಫಲಾನುಭವಿಗಳಿಗೆ ಆಹಾರ ಸಾಮಗ್ರಿ ಹಾಗೂ 4 ಫಲಾನುಭವಿಗಳಿಗೆ ಸಹಾಯಧನವನ್ನು ಸಮಾರಂಭದಲ್ಲಿ ವಿತರಿಸಲಾಯಿತು. ಇದೇ ಸಂದರ್ಭ ವಿದ್ಯಾರ್ಥಿನಿಯೋರ್ವಳಿಗೆ ಸಹಾಯಧನವನ್ನು ನೀಡಲಾಯಿತು. ಹೃದಯ ಕಾಯಿಲೆ, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಅಂಧತ್ವ ಇವುಗಳಿಂದ ಬಳಲುತ್ತಿರುವ ಹಾಗೂ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ, ತೀವ್ರ ಬಡ ಕುಟುಂಬಗಳಿಗೆ ಚೆಕ್, ಆಹಾರ ಸಾಮಗ್ರಿಗಳನ್ನು ಪ್ರತೀ ತಿಂಗಳು ಒದಗಿಸಿಕೊಡುವ ನಿಟ್ಟಿನಲ್ಲಿ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ಕಾರ್ಯಾಚರಿಸುತ್ತಿದೆ.

ಸಹಾಯಹಸ್ತ ಲೋಕಸೇವಾ ಟ್ರಸ್ಟ್ನಿಂದ ಸಹಾಯಧನ, ಆಹಾರ ಸಾಮಗ್ರಿ ವಿತರಿಸಲಾಯಿತು.

ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಮಾತನಾಡಿದರು.

ಸಹಾಯಹಸ್ತ ಲೋಕಸೇವಾ ಟ್ರಸ್ಟ್ನಿಂದ ಸಹಾಯಧನ, ಆಹಾರ ಸಾಮಗ್ರಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here