ಪುತ್ತೂರು : ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಾಲ್ಮರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಿರುವ ಗುರು ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರದ ಭೂಮಿ ಪೂಜೆ ಸೆ.8ರಂದು ಪೂರ್ವಾಹ್ನ ಗಂಟೆ 8.58ರ ಕನ್ಯಾ ಲಗ್ನದಲ್ಲಿ ಪುರೋಹಿತ ವಸಂತ ಕೆದಿಲಾಯ ಹಾಗೂ ರಾಜೇಶ್ ಭಟ್‌ರವರ ನೇತೃತ್ವದಲ್ಲಿ ನಡೆಯಿತು.
ಗುರುಪುರ ಶ್ರೀವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಕಾಯಿ ಒಡೆದು ಭೂಮಿ ಪೂಜೆಗೆ ಚಾಲನೆ ನೀಡಿ ಅಶೀರ್ವಾಚನ ನೀಡಿದರು. ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ ದೀಪ ಪ್ರಜ್ವಲನೆ ಮಾಡಿದರು.
ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನೀವಾಸ್, ಪ್ರೇಮ್ ಕುಮಾರ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಜಿ ನಗರಸಭಾ ಸದಸ್ಯ ಚಂದ್ರಸಿಂಗ್, ವಕೀಲ ಹಾಗೂ ಮಧ್ಯಸ್ಥ ತೇಜಸ್, ತರವಾಡು ಮನೆ ಯಜಮಾನ ಮಾಯಿಲ ಸಾಲ್ಮರ, ಸಹೋದರ ಕಾಂತಪ್ಪ ಸಾಲ್ಮರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಸಾಲ್ಮರ, ಉಪಾಧ್ಯಕ್ಷ ದಿನೇಶ್ ತಾರಿಗುಡ್ಡೆ , ಕಾರ್ಯದರ್ಶಿ ಗಂಗಾಧರ ಸಹಿತ ಕುಟುಂಬದ ಸದಸ್ಯರು ಮತ್ತು ಕಟ್ಟಡ ನಿರ್ಮಾಣಗಾರರಾದ ಗಂಗಾಧರ್ , ಯಶೋಧರ್ ಹಾಗೂ ಮೋನಪ್ಪ ಉಪಸ್ಥಿತರಿದ್ದರು.