ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಶ್ರೀ ವಿನಾಯಕ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ಭಜನಾ ಮಂದಿರದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು. ತಂತ್ರಿಗಳಾಗಿ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಯವರು, ಅರ್ಚಕರಾಗಿ ಪ್ರಶಾಂತ್ ಕಲ್ಲೂರಾಯ ಸಂಪ್ಯರವರನ್ನು ಹಾಗೂ ಗೌರವಾಧ್ಯಕ್ಷರಾಗಿ ಶ್ರೀಧಾಮ ಮಾಣಿಲದ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಯವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಹಜ್ ರೈ ಬಳಜ್ಜ, ಉಪಾಧ್ಯಕ್ಷರಾಗಿ ಹರೀಶ್ ನಾಯಕ್ ವಾಗ್ಲೆ, ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ದೇವ ಸಂಟ್ಯಾರು, ಜತೆ ಕಾರ್ಯದರ್ಶಿಯಾಗಿ ಸಂಜಿತ್ ರೈ ತೊಟ್ಲ, ಖಜಾಂಚಿಯಾಗಿ ಸುಬ್ರಹ್ಮಣ್ಯ ನಾಯಕ್, ಕೋಶಾಧಿಕಾರಿಯಾಗಿ ಶರತ್ ಆಳ್ವ ಕೂರೇಲುರವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರುಗಳಾದ ಸದಾನಂದ ಶೆಟ್ಟಿ ಕೂರೇಲು, ಶಶಿಧರ ಗೌಡ ಮರಿಕೆ, ಚೆನ್ನಪ್ಪ ಗೌಡ, ವಿಠಲ ಶೆಟ್ಟಿ ತೊಟ್ಲ, ದೇವಣ್ಣ ನಾಯ್ಕ್ ಮರಿಕೆ, ತಿಮ್ಮಪ್ಪ ಗೌಡ ಸಂಟ್ಯಾರು, ರಾಮಣ್ಣ ಗೌಡ ಪರನೀರು, ಕಿಶೋರ್ ಗೌಡ ಮರಿಕೆ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಮಂದಿರದ ಜೀರ್ಣೋದ್ಧಾರದ ಪ್ರಯುಕ್ತ ಆರಂಭದಲ್ಲಿ ಅಶ್ಲೇಷ ಪೂಜೆ, ಸರ್ಪಸಂಸ್ಕಾರ ಪೂಜೆ ಮಾಡುವುದು ಎಂದು ನಿರ್ಣಯಿಸಲಾಯಿತು. ಹಿಂದೂ ಸೇವಾ ಸಮಿತಿ ಅಧ್ಯಕ್ಷ ಶರತ್ ಆಳ್ವ ಕೂರೇಲು ಸ್ವಾಗತಿಸಿ, ಕಾರ್ಯದರ್ಶಿ ರಾಕೇಶ್ ಗೌಡ ವಂದಿಸಿದರು. ಸುಬ್ಬು ಸಂಟ್ಯಾರು ಕಾರ್ಯಕ್ರಮ ನಿರೂಪಿಸಿದರು.